ತೃಣಮೂಲ ಕಾಂಗ್ರೆಸ್‌ ಹಿಡಿತ ಮಮತಾ ಕೈಯಲ್ಲಿಲ್ಲ: ಟಿಎಂಸಿ ತೊರೆದ ಶಾಸಕ ಮಿಹಿರ್ ಗೋಸ್ವಾಮಿ

ಪಶ್ವಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ತೃಣಮೂಲ ಕಾಂಗ್ರೆಸ್ ನ ಆಡಳಿತ ಮಮತಾ ಬ್ಯಾನರ್ಜಿಯವರ ಕೈಯಲ್ಲಿ ಉಳಿದಿಲ್ಲ. ಇದರಿಂದಾಗಿ ಆ ಪಕ್ಷದಲ್ಲಿ ಇರಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿರುವ ಶಾಸಕ ಮಿಹಿರ್ ಗೋಸ್ವಾಮಿ ಅವರು, ಪಕ್ಷ ತೊರೆದು ಹೊರಬಂದಿದ್ದಾರೆ.

ಟಿಎಂಸಿಯೊಳಗೆ ಇದ್ದುಕೊಂಡು ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಮಮತಾ ಬ್ಯಾನರ್ಜಿ ಅವರ ನಾಯಕತ್ವಕ್ಕೋಸ್ಕರ ಎಲ್ಲಾ ರೀತಿಯ ಅವಮಾನಗಳನ್ನು ಸಹಿಸಿಕೊಂಡಿದ್ದೆ. ಆದರೆ, ಟಿಎಂಸಿ ಆಡಳಿತ ಅವರ ಕೈಯಲ್ಲಿಲ್ಲ. ಹಾಗಾಗಿ ಆ ಪಕ್ಷ ನನ್ನ ಪಕ್ಷವಾಗಿರಲು ಸಾಧ್ಯವಿಲ್ಲ. ಇನ್ನು ಪಕ್ಷದಲ್ಲಿರಲು ಆಗುವುದೂ ಇಲ್ಲ. ಅಲ್ಲಿರುವುದರಲ್ಲಿ ಅರ್ಥವೂ ಇಲ್ಲ ಎಂದು ಪಕ್ಷ ತೊರೆದಿದ್ದೇನೆ ಎಂದು ಅವರು ಹೇಳಿದ್ದಾರೆ.

ಕಳೆದ 30 ವರ್ಷಗಳಿಂದ ಮಮತಾ ಬ್ಯಾನರ್ಜಿಯವರ ಜೊತೆಗಿದ್ದೆ. 1998ರಲ್ಲಿ ಟಿಎಂಸಿ ಸ್ಥಾಪನೆಯಾದಾಗಿನಿಂದ ಅವರ ಜೊತೆ ಗುರುತಿಸಿಕೊಂಡಿದ್ದೇನೆ, ಇದೀಗ ಅನಿವಾರ್ಯವಾಗಿ ಹೊರನಡೆಯಬೇಕಾಗಿ ಬಂದಿದೆ ಎಂದು ಕೂಚ್ ಬೆಹರ್ ದಕ್ಷಿಣ್ ಶಾಸಕರಾಗಿರುವ ಮಿಹಿರ್ ಗೋಸ್ವಾಮಿ ಹೇಳಿದ್ದಾರೆ.

ಪಕ್ಷದ ಎಲ್ಲಾ ಸಂಘಟನಾತ್ಮಕ ಹುದ್ದೆಗಳಿಂದ ಹೊರಬರುವುದಾಗಿ ತೀರ್ಮಾನಿಸಿ ಘೋಷಿಸಿದ ಆರು ವಾರಗಳ ನಂತರವೂ ತಮಗೆ ಯಾವುದೇ ಟೆಲಿಫೋನ್ ಕರೆ ಮಮತಾ ಬ್ಯಾನರ್ಜಿಯವರಿಂದ ಬಂದಿಲ್ಲ, ಪಕ್ಷದಿಂದ ಯಾವುದೇ ಅಮಾನತು, ಹೊರಹಾಕುವ ಆದೇಶ ಕೂಡ ಬಂದಿಲ್ಲ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ಅಮೆರಿಕಾ ಕ್ರಾಂತಿಗೂ ಸ್ಪೂರ್ತಿಯಾಗಿದ್ದ ಹೈದರ್ ಮತ್ತು ಟಿಪ್ಪು ಸುಲ್ತಾನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights