ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಾರಿಗೆ ನೌಕರ : ಜೀವನ ಸಾಗಿಸಲು ಮಾಡಿದ್ದೇನು..?

ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಾರಿಗೆ ನೌಕರ ಸಿಬ್ಬಂದಿ ತನ್ನ ಕಿಡ್ನಿ ಮಾರಾಟಕ್ಕೆ ಮುಂದಾದ ಕರುಣಾಜನಕ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಎರಡು ತಿಂಗಳ ಸಂಬಳವಿಲ್ಲದೇ ಪರದಾಡುತ್ತಿರುವ ಸಾರಿಗೆ ಸಿಬ್ಬಂದಿ ಫೇಸ್ ಬುಕ್ ನಲ್ಲಿ ತನ್ನ ಕಿಡ್ನಿ ಮಾರಾಡಕ್ಕಿರುವ ಬಗ್ಗೆ ಸಂದೇಶ ಹಂಚಿಕೊಮಡಿದ್ದಾನೆ.

ಆರ್ಥಿಕ ಸಂಕಷ್ಟದಲ್ಲಿರುವ ಹನುಮಂತಪ್ಪ ಎಂಬಾತ ಫೇಸ್ ಬುಕ್ ನಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ. ಕಳೆದ ಮೂರು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಮನೆಗೆ ರೇಶನ್ ತರಲು ಹಣವಿಲ್ಲ, ಮನೆಯಲ್ಲಿ ಮಕ್ಕಳು ವೃದ್ಧರು ಇರುವುದರಿಂದ ಖರ್ಚು ಅಧಿಕ. ಹೀಗಾಗಿ ಹನುಮಂತಪ್ಪ ತನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗಾಗಲೇ ಸಾರಿಗೆ ಸಿಬ್ಬಂದಿಗಳು ತಮ್ಮ ಸಂಕಷ್ಟವನ್ನು ಸರ್ಕಾರದ ಮುಂದೆ ಇರಿಸಿದ್ದಾರೆ. ಸಮಸ್ಯೆಗಳ ಸರಮಾಲೇಯೇ ತುಂಬಿರುವ ಸಾರಿಗೆ ವ್ಯವಸ್ಥೆಯಲ್ಲಿ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳವಾಗುತ್ತಿಲ್ಲ. ಕೆಲಸ ಸಿಗುತ್ತಿಲ್ಲ. ಈ ಬಗ್ಗೆ ಧ್ವನಿ ಎತ್ತಿದ್ರೆ ಅಂಥವರನ್ನು ಟಾರ್ಗೇಟ್ ಮಾಡಲಾಗುತ್ತದೆ. ಹೀಗಾಗಿ ಸಾರಿಗೆ ಸಿಬ್ಬಂದಿಗಳು ರೋಸಿ ಹೋಗಿದ್ದಾರೆ. ಮಕ್ಕಳನ್ನು ಶಾಲೆಗೆ ಸೇರಿಸಲಾಗದೇ, ಮನೆ ನಿರ್ವಹಣೆ ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೀಗಾಗಿ ಹನುಮಂತಪ್ಪ ಅವರ ಫೋಸ್ಟ್ ನೋಡಿದ ನೆಟ್ಟಿಗರು ಸರ್ಕಾರ ಸಂಬಳ ಕೊಡದಷ್ಟು ಸಂಕಷ್ಟದಲ್ಲಿದಿಯಾ..? ಎನ್ನುವ ಪ್ರಶ್ನೆ ಹಾಕಿದ್ದಾರೆ. ಅಷ್ಟಕ್ಕೂ ದುಡಿದ ಸಂಬಳವನ್ನು ಕೊಡಲು ಸರ್ಕಾರಕ್ಕೆ ಕಷ್ಟವಾದರೆ ಇನ್ನೂ ಜನಸಾಮಾನ್ಯರ ಗತಿ ಏನು..? ಅವರಿಗೆಷ್ಟು ಕಷ್ಟವಾಗಬೇಡ..? ಇದೆಲ್ಲವನ್ನೂ ಸಾರಿಗೆ ಸಚಿವರು ಯೋಚನೆ ಮಾಡಬೇಕು ಅಲ್ವಾ..?

ಹನುಮಂತಪ್ಪನಂತೆ ಅದೆಷ್ಟು ಜನ ಸಂಕಷ್ಟದಲ್ಲಿ ಜೀವನ ಮುಂದೂಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಸಾರಿಗೆ ಸಿಬ್ಬಂದಿಗಳನ್ನು ಸರ್ಕಾರ ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights