ಪೆಗಾಸಸ್ ಬಳಸಿ ಭಾರತೀಯ ಪತ್ರಕರ್ತರ ಮೇಲೆ ನಿಗಾ; ವಿರೋಧಿಗಳನ್ನು ನಿಯಂತ್ರಿಸಲು ಸರ್ಕಾರ ಯತ್ನ!?

ಪೆಗಸಸ್‌ ಎಂಬ ಹ್ಯಾಕ್‌ ಅಪ್ಲಿಕೇಷನ್‌ಅನ್ನು ಬಳಸಿ ಜಗತ್ತಿನ ಪ್ರಮುಖ ಪತ್ರಕರ್ತರು, ರಾಜಕೀಯ ವ್ಯಕ್ತಿಗಳು, ಮಾನವ ಹಕ್ಕು ಹೋರಾಟಗಾರರು ಹಾಗೂ ಇತರ ಪ್ರಮುಖ ಕಚೇರಿಗಳ ಮೇಲೆ ನಿಗಾ ಇರಿಸಲಾಗಿದ್ದು, ಹಲವರ ಫೋನ್‌ ಕರೆಗಳನ್ನು ಕದ್ದಾಲಿಸಲಾಗಿದೆ ಎಂದು ದಿ ಗಾರ್ಡಿಯನ್‌ ಮತ್ತು 16 ಮಾಧ್ಯಮ ಸಂಸ್ಥೆಗಳು ನಡೆಸಿರುವ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.

“ಕ್ಯಾಂಡಿರು’ ಎಂಬ ಹೆಸರಿನ ಸಂಸ್ಥೆ ಏಷ್ಯಾ, ಮಧ್ಯಪ್ರಾಚ್ಯ ದೇಶಗಳ ಸರ್ಕಾರಗಳಿಗೆ ದೂಡಚರ್ಯೆ ಉಪಕರಣವನ್ನು ಮಾರಾಟ ಮಾಡಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆಯು ಪೆಗಸಸ್‌ ಮೂಲಕ ಹಲವರ ಮೇಲೆ ನಿಗಾ ಇರಿಸಿದ್ದು, ಭಾರತದ ಸುಮಾರು 40 ಪತ್ರಕರ್ತರ ಮೇಲೂ ನಿಗಾ ಇರಿಸಲಾಗಿದೆ ಎಂದು ದಿ ಗಾರ್ಡಿಯನ್‌ ವರದಿ ಮಾಡಿದೆ.

ಭಾರತ ಸೇರಿದಂತೆ 10 ರಾಷ್ಟ್ರಗಳ ಸರ್ಕಾರಗಳಿಗಾಗಿ ಈ ರೀತಿ ಕೃತ್ಯ ನಡೆಸಲಾಗಿದೆ. ಭಾರತ ಸರ್ಕಾರವೂ ಕೂಡ ಹಲವು ಪತ್ರಕರ್ತರು ಹಾಗೂ ಕೆಲವು ಹೋರಾಟಗಾರರ ಮೇಲೆ ನಿಗಾ ಇರಿಸಿದೆ ಎಂದು ಹೇಳಲಾಗಿದೆ. ಇದೂವರೆಗೂ ಸುಮಾರು 50 ಸಾವಿರ ಫೋನ್‌ ನಂಬರ್‌ಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ದಿ ಗಾರ್ಡಿಯನ್‌ ಬಹಿರಂಗಗೊಳಿಸಿದೆ.

ಮೋದಿ ಸಚಿವ ಸಂಪುಟದ ಸದಸ್ಯರು, ಆರ್‌ಎಸ್‌ಎಸ್‌ ಮುಖಂಡರು, ಸುಪ್ರೀಂಕೋರ್ಟ್‌ನ ನ್ಯಾಯ ಮೂರ್ತಿಗಳು, ಪತ್ರಕರ್ತರ ಫೋನ್‌ ಕದ್ದಾಲಿಕೆ ನಡೆಸಲಾಗುತ್ತಿದ್ದ ಬಗ್ಗೆ ವಾಷಿಂಗ್ಟನ್‌ ಪೋಸ್ಟ್‌, ಲಂಡನ್‌ ಗಾರ್ಡಿಯನ್‌ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಲಿದೆ. ನನಗೆ ಪಟ್ಟಿ ಸಿಕ್ಕಿದರೆ ಪ್ರಕಟಿಸುವೆ ಎಂದು ಬಿಜೆಪಿ ನಾಯಕ ಡಾ. ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಡ್ಯಾನಿಶ್‌ ಸಿದ್ದಿಕಿ ಸಾವಿನ ಬಗ್ಗೆ ಕೇಂದ್ರವಾಗಲೀ, ಮೋದಿಯಾಗಲೀ ಏನನ್ನೂ ಹೇಳಲ್ಲ; ಯಾಕೆಂದರೆ……..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights