‘ಫುಡ್ ಪಾಯಿಸನ್ ಮಾತ್ರೆ ಬದಲಿಗೆ ನಿದ್ರೆ ಮಾತ್ರೆ ತೆಗೆದುಕೊಂಡೆ’- ಡಿಸ್ಚಾರ್ಜ್ ಬಳಿಕ ಸಂತೋಷ್ ಸ್ಪಷ್ಟನೆ!

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವುದಕ್ಕೆ ಸ್ವತ: ಸಂತೋಷ್ ಅವರೇ ಡಿಸ್ಚಾರ್ಜ್ ಬಳಿಕ ಸ್ಪಷ್ಟನೆ ಕೊಟ್ಟಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾತನಾಡಿದ ಸಂತೋಷ್, ‘ತಾವು ಯಾವುದೇ ಆತ್ಮಹತ್ಯೆ ಪ್ರಕರಣಕ್ಕೆ ಮುಂದಾಗಿಲ್ಲ. ನಾನು ಕೆಲವು ದಿನಗಳ ಹಿಂದೆ ಸಂಬಂಧಿ ಮದುವೆಗೆ ಹೋಗಿದ್ದೆ. ಅಲ್ಲಿ ತಿಂದ ಆಹಾರದಿಂದಾಘಿ ಫುಡ್ ಪಾಯಿಸನ್ ಆಗಿತ್ತು. ಹೀಗಾಗಿ ನಾನು ಫುಡ್ ಪಾಯಿಸನ್ ಮಾತ್ರೆ ಬದಲಿಗೆ ನಿದ್ರೆ ಮಾತ್ರೆ ತೆಗೆದುಕೊಂಡೆ. ಭಯಗೊಂಡ ನನ್ನ ಪತ್ನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಯಾವ ಉದ್ದೇಶ ಖಿನ್ನತೆ ಇಲ್ಲ’ ಎಂದಿದ್ದಾರೆ.

‘ಖಾಸಗಿ ಕಾರ್ಯಕ್ರಮದಲ್ಲಿ ಊಟ ಮಾಡಿ ಹೊಟ್ಟೆ ಸರಿಯಾಗಿಲ್ಲವಾಗಿತ್ತು. ಹೀಗಾಗಿ ನಾನು ಮಿಸ್ ಆಗಿ ಯಾವುದೋ ಬೇರೆ ಮಾತ್ರೆ ತೆಗೆದುಕೊಂಡೆ. ರಾಜಕೀಯ ಒತ್ತಡ ನನಗಿಲ್ಲ. ಡಿಕೆ ಶಿವಕುಮಾರ ಅವರಿಗೆ ನನ್ನ ಬಗ್ಗೆ ಮಾತನಾಡುವುದು ರೂಢಿಯಾಗಿದೆ. ಅವರಲ್ಲಿ ಮನವಿ ಮಾಡಿಕೊಳ್ಳೂತ್ತೇನೆ, ಅವರು ಮೊದಲಿನಂತೆ ಮಾತನಾಡಬಾರಡು. ಮಾತನಾಡುವಾಗ ಯಾವ ರೀತಿ ಮಾತನಾಡಬೇಕು ಎನ್ನುವುದನ್ನ ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಲಿ’ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

‘ಯಡಿಯೂರಪ್ಪ ಬಗ್ಗೆ ಮಾತನಾಡಬೇಕಾದರೆ ಯೋಚನೆ ಮಾಡಿ ಮಾತನಾಡಿ. ನಮ್ಮ ನಾಯಕರ ಬಗ್ಗೆ ಮಾತನಾಡಬೇಕು ಅಂದರೆ ಎಚ್ಚರಿಕೆ ಇರಲಿ. ದಯವಿಟ್ಟು ಅವರಿಗೆ ರಜೆ ಕೊಟ್ಟು ಸುಧಾರಣೆಗೆ ಅವಕಾಶ ಕೊಡಿ. ನಾನು ಖಿನ್ನತೆಗೋಗುವಂತ ವ್ಯಕ್ತಿ ಅಲ್ಲ. ಯಾವುದೇ ಕಾರಣಕ್ಕೂ ಒತ್ತಡ, ಖಿನ್ನತೆ ನನಗೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶ್ರಾಂತಿ ಬಳಿಕ ನಾನು ಯಡಿಯೂರಪ್ಪ ಅವರನ್ನು ಭೇಟಿ ಆಗುತ್ತೇನೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights