2021ರಲ್ಲಿ ಹುಲಿಗಳ ಸಾವಿನ ಸಂಖ್ಯೆ ಏರಿಕೆ: ದಶಕದಲ್ಲೇ ಅತಿ ಹೆಚ್ಚು ಹುಲಿಗಳ ಸಾವು

2021ರ ಆರಂಭದಿಂದ ಡಿ.29ರ ವರೆಗೆ ಒಟ್ಟು 126 ಹುಲಿಗಳು ಸಾವನಪ್ಪಿವೆ. ಇದು ಒಂದು ದಶಕದಲ್ಲೇ ಅತಿ ಹೆಚ್ಚು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA)ದ ಮೂಲಗಳು ತಿಳಿಸಿವೆ.

ಮೂಲಗಳ ಮಾಹಿತಿ ಪ್ರಕಾರ, ಈ ವರ್ಷ ಸಾವನ್ನಪ್ಪಿರುವ ಹುಲಿಗಳ ಪೈಕಿ 60 ಹುಲಿಗಳು ಕಳ್ಳ ಬೇಟೆಗಾರಿಗೆ, ಅಪಘಾತ ಮತ್ತು ಮನುಷ್ಯ-ಪ್ರಾಣಿ ಸಂಘರ್ಷದಿಂದ ಬಲಿಯಾಗಿವೆ ಎಂದು ತಿಳಿದು ಬಂದಿದೆ.

NTCAಯು 2012 ರಿಂದ ಹುಲಿ ಸಾವಿನ ದಾಖಲೆಯನ್ನು ನಿರ್ವಹಿಸುತ್ತಿದೆ. 2021ರ ಸೆಪ್ಟೆಂಬರ್ 30 ರ ವೇಳೆಗೆ ದೇಶದಲ್ಲಿ 99 ಹುಲಿಗಳು ಸಾವನ್ನಪ್ಪಿದ್ದವು. ಕಳೆದ ಮೂರು ತಿಂಗಳಲ್ಲೇ 27 ಹುಲಿಗಳು ಸಾವನ್ನಪ್ಪಿದ್ದು, ಈ ವರ್ಷ ಹುಲಿಗಳ ಸಾವಿನ ಸಂಖ್ಯೆ 126ಕ್ಕೆ ಏರಿಕೆಯಾಗಿದೆ. ಈ ಹಿಂದೆ 2016 ರಲ್ಲಿ 121 ಹುಲಿಗಳು ಸಾವನ್ನಪ್ಪಿದ್ದವು.

ಇದನ್ನೂ ಓದಿ: ವಿಶ್ವದಲ್ಲಿವೆ ಬೆರಳೆಣಿಕೆಯಷ್ಟು ಹುಲಿಗಳು; ಆದರೂ ಭಾರತವೇ ನಂ.1

2018 ರ ಹುಲಿಗಣತಿಯ ಪ್ರಕಾರ, ಭಾರತದಲ್ಲಿ 2,967 ಹುಲಿಗಳಿದ್ದವು. ಈ ಪೈಕಿ 526 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಈ ವರ್ಷ ಹೆಚ್ಚು ಹುಲಿಗಳು ಸಾವನ್ನಪ್ಪಿದ್ದು, 42 ಹುಲಿಗಳು ಮೃತಪಟ್ಟಿವೆ.

ಇನ್ನು, 312 ಹುಲಿಗಳನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 26,

524 ಹುಲಿಗಳಿರುವ ಕರ್ನಾಟಕದಲ್ಲಿ 15,

173 ಹುಲಿಗಳಿರುವ ಉತ್ತರ ಪ್ರದೇಶದಲ್ಲಿ9  ಸಾವುಗಳು ದಾಖಲಾಗಿವೆ. ಉಳಿದಂತೆ ವಿವಿಧ ರಾಜ್ಯಗಳಲ್ಲಿ 24 ಹುಲಿಗಳು ಮೃತಪಟ್ಟಿವೆ.

ಇವುಗಳು ವರದಿಯಾಗಿರುವ ಸಾವಿನ ಸಂಖ್ಯೆಯಷ್ಟೆ, ಅರಣ್ಯ ಪ್ರದೇಶದೊಳಗೆ ಅನೇಕ ಹುಲಿಗಳು ನೈಸರ್ಗಿಕ ಕಾರಣಗಳಿಂದ ಸಾಯುತ್ತವೆ. ಅವುಗಳ ಸಾವುಗಳು ವರದಿಯಾಗುವುದಿಲ್ಲ. 2021 ರಲ್ಲಿ ಭಾರತ ಕಳೆದುಕೊಂಡಿರುವ ಒಟ್ಟು ಹುಲಿಗಳ ಸಂಖ್ಯೆ ಹೆಚ್ಚಿರಬಹುದು ಎಂದು ಯುಪಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಳಿ ಮೀಸಲು ಪ್ರದೇಶದಲ್ಲಿ ಹುಲಿ ಸಮೀಕ್ಷೆ; ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವು ಭಾರತದಲ್ಲೇ ಅಗ್ರಸ್ಥಾನ ಪಡೆಯಲಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights