ಕಾಳಿ ಮೀಸಲು ಪ್ರದೇಶದಲ್ಲಿ ಹುಲಿ ಸಮೀಕ್ಷೆ; ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವು ಭಾರತದಲ್ಲೇ ಅಗ್ರಸ್ಥಾನ ಪಡೆಯಲಿದೆ!

ಕರ್ನಾಟಕದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಹುಲಿ ಗಣತಿಗಾಗಿ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ಗೋವಾದ ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯ ಮತ್ತು ಬೆಳಗಾವಿಯ ಭೀಮದ್ ರಾಷ್ಟ್ರೀಯ ಉದ್ಯಾನವನಗಳ ನಡುವೆ ಇರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಹುಲಿಗಳ ಮೂಲಸಂಖ್ಯೆಯ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಈ ಪ್ರದೇಶವು ಕಳೆದ ಕೆಲವು ವರ್ಷಗಳಲ್ಲಿ ಹುಲಿಗಳ ಸಂಖ್ಯೆಯಲ್ಲಿ ಅದ್ಭುತ ಬೆಳವಣಿಗೆಯನ್ನು ದಾಖಲಿಸುತ್ತಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಹುಲಿ ಸಮೀಕ್ಷೆಯನ್ನು ಕೈಗೊಳ್ಳಲಿದೆ. ಮುಂದಿನ ಎರಡು ವಾರಗಳಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಪರಿಣಿತರನ್ನು ಒಳಗೊಂಡ ಹುಲಿ ಗಣತಿ ನಡೆಯಲಿದೆ.

“ಕೆಲವು ವರ್ಷಗಳ ಹಿಂದೆ ಕಾಳಿ ಹುಲಿ ಸಂರಕ್ಷಿತ ಪ್ರದೇಶವು ಹತ್ತು ಹುಲಿಗಳನ್ನು ಹೊಂದಿತ್ತು. ಇಂದು ಅವುಗಳ ಸಂಖ್ಯೆ 30ಕ್ಕೆ ಏರಿದೆ. ಹುಲಿ ಸಂರಕ್ಷಿತ ಪ್ರದೇಶವು ಹೆಚ್ಚಿನ ಹುಲಿಗಳಿಗೆ ಅವಕಾಶ ಕಲ್ಪಿಸುತ್ತದೆ. ಈಗಿನ ರಕ್ಷಣೆ ಮುಂದುವರಿದಿದೆ. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಕಾಳಿ ಮೀಸಲು ಪ್ರದೇಶವು ಹುಲಿಗಳ ಸಂಖ್ಯೆಯ ಮೂಲ ತಾಣವಾಗಿದೆ ಎಂದು ಪರಿಗಣಿಸಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಮಾಂಸಾಹಾರಿ ಪ್ರಾಣಿಗಳಿಗೆ ಗೋಮಾಂಸ ನೀಡದಂತೆ ಬಿಜೆಪಿ ಪ್ರತಿಭಟನೆ: ಹುಲಿಗಳಿಂದ ವ್ರತ ಮಾಡಿಸಿಯೆಂದು ಟ್ರೋಲ್‌!

“ಕ್ಯಾಮರಾ ಟ್ರ್ಯಾಪ್‌ಗಳ ಡೇಟಾವು ಹೊಸ ಪ್ರತ್ಯೇಕ ಹುಲಿಗಳು ಕಾಳಿಯನ್ನು ತಮ್ಮ ಹೊಸ ನೆಲೆಯನ್ನಾಗಿ ನೋಡುವ ಸಾಧ್ಯತೆ ಇದೆ ಎಂದು ತೋರಿಸುತ್ತದೆ. ಅದೇ ಸಮಯದಲ್ಲಿ, ಅರಣ್ಯ ಪ್ರದೇಶದಿಂದ ಸ್ಥಳಾಂತರಗೊಳ್ಳಲು ಬುಡಕಟ್ಟು ಕುಟುಂಬಗಳು ಸಹಿ ಹಾಕಿವೆ. ಅವರು ಸ್ವಯಂಪ್ರೇರಿತವಾಗಿ ಆದಷ್ಟು ಬೇಗ ಸ್ಥಳಾಂತರಗೊಳ್ಳಲಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ, ಅಂತಹ ಸುಮಾರು 100 ಕುಟುಂಬಗಳು ಹುಲಿ ಪ್ರದೇಶದಿಂದ ಹೊರಬಂದಿವೆ. ಇದು ಮುಂದಿನ ವರ್ಷಗಳಲ್ಲಿ ವನ್ಯಜೀವಿಗಳ ಬೆಳವಣಿಗೆಗೆ ದೊಡ್ಡ ಉತ್ತೇಜನ ನೀಡುತ್ತದೆ “ಎಂದು ಅಧಿಕಾರಿ ಹೇಳಿದ್ದಾರೆ.

ನಿಯಮಿತ ಗಸ್ತು, ಬೇಟೆ ವಿರೋಧಿ ಶಿಬಿರದ ತಂಡಗಳಿಂದ ಜಾಗರೂಕತೆ ಮತ್ತು ಸ್ಥಳೀಯರನ್ನು ಒಳಗೊಂಡ ಸಂಘಟಿತ ಪ್ರಯತ್ನಗಳು ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಿವೆ. ಹುಲಿ ಸಂರಕ್ಷಿತ ಪ್ರದೇಶವು 1,300 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ . ಪ್ರಸ್ತುತ ಜಾರಿಯಲ್ಲಿರುವ ರಕ್ಷಣಾ ಕ್ರಮಗಳು ಮುಂದುವರಿದರೆ ಮುಂದಿನ ವರ್ಷಗಳಲ್ಲಿ ಈ ಪ್ರದೇಶವು ಹೆಚ್ಚಿನ ಹುಲಿಗಳನ್ನು ಹೊಂದಬಹುದು ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಜಾಗತಿಕ ಹುಲಿ ದಿನ: ವಿಶ್ವದಲ್ಲಿವೆ ಬೆರಳೆಣಿಕೆಯಷ್ಟು ಹುಲಿಗಳು; ಆದರೂ ಭಾರತವೇ ನಂ.1

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights