ಮದುವೆಯಲ್ಲಿ ಕುದುರೆ ಸವಾರಿ ಮಾಡಿದರೆ ವರನನ್ನು ಕೊಲ್ಲುವ ಬೆದರಿಕೆ; ಪೊಲೀಸ್ ಮೊರೆಹೋದ ವರ

ಮದುವೆ ಸಮಾರಂಭದಲ್ಲಿ ಕುದುರೆ ಸವಾರಿ ಮಾಡದಂತೆ ವರನಿಗೆ ಸ್ಥಳೀಯ ಗ್ರಾಮಸ್ಥರು ಬೆದರಿಕೆ ಹಾಕಿದ್ದು, ತನ್ನ ಮದುವೆಗೆ ಪೊಲೀಸ್‌ ರಕ್ಷಣೆ ಕೊಡುವಂತೆ ಕೋರಿ ದಲಿತ ವ್ಯಕ್ತಿಯೊಬ್ಬರು ಪೊಲೀಸರಲ್ಲಿ ಮನವಿ ಮಾಡಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರು ಈ ವಿಷಯದ ಬಗ್ಗೆ ಸೂಕ್ಷ್ಮ ನಿಗಾ ಇಟ್ಟಿದ್ದಾರೆ, ಆದರೆ ವರನಿಂದ ಕುದುರೆ ಸವಾರಿ ಮಾಡುಲು ಸಮಸ್ಯೆ ನೀಡುವಂತಹ ಯಾವುದೇ ವ್ಯಕ್ತಿಯು ಗ್ರಾಮದಲ್ಲಿ ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಮದುವೆಯ ಮೆರವಣಿಗೆಯಲ್ಲಿ ವರನು ಕುದುರೆ ಸವಾರಿ ಮಾಡಿದರೆ ಜನರು ಅವನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರ ಅಲಾಕ್ ರಾಮ್ ಹೇಳಿದ್ದಾರೆ.

“ಕಳೆದ ಹಲವಾರು ವರ್ಷಗಳಿಂದ, ನಮ್ಮ ಗ್ರಾಮದಲ್ಲಿ ಹಳೆಯ ಸಂಪ್ರದಾಯಗಳ ಪ್ರಕಾರ ಮದುವೆಗಳು ನಡೆಯುತ್ತಿವೆ. ನನ್ನ ಮದುವೆ ಮೆರವಣಿಗೆಗಾಗಿ ನಾನು ಕುದುರೆ ಸವಾರಿ ಮಾಡಲು ಬಯಸುತ್ತೇನೆ. ಆದರೆ ಇತರ ಸಮುದಾಯಗಳ ಕೆಲವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ” ಎಂದು ರಾಮ್ ಹೇಳಿದ್ದಾರೆ.

“ನನ್ನ ಮಗನ ಮದುವೆ ಜೂನ್ 18 ರಂದುನಡೆಯಲಿದೆ. ತಾವು ಕುದುರೆಯ ಮೇಲೆ ಮೆರವಣಿಗೆ ನಡೆಸಲು ಬಯಸುತ್ತೇವೆ. ಆತ ಈಗ
ಪೊಲೀಸರ ಸಹಾಯ ಪಡೆದರೆ, ನಂತರ ಆತನನ್ನು ಕೊಲ್ಲುವುದಾಗಿ ಜನರು ಎಚ್ಚರಿಸಿದ್ದಾರೆ” ಎಂದು ರಾಮ್ ಅವರ ತಂದೆ ಗಾಯಡಿನ್ ಹೇಳಿದ್ದಾರೆ.

“ವರನು ಕುದುರೆ ಸವಾರಿ ಮಾಡಲು  ಸಮಸ್ಯೆಯನ್ನು ವೊಡ್ಡುವಂತಹ ಯಾವುದೇ ಒಬ್ಬ ವ್ಯಕ್ತಿಯನ್ನು ನಾವು ಹಳ್ಳಿಯಲ್ಲಿ ಕಂಡುಹಿಡಿಯಲಾಗಲಿಲ್ಲ. ಆದರೆ, ನಾವು ಇನ್ನೂ ಈ ವಿಷಯದ ಬಗ್ಗೆ ನಿಗಾ ಇಡುತ್ತಿದ್ದೇವೆ” ಎಂದು ಮಹೋಬಗಂಜ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಭಾಕರ್ ಉಪಾಧ್ಯಾಯ ತಿಳಿಸಿದ್ದಾರೆ.

ಕುಟುಂಬಕ್ಕೆ ತಮ್ಮ ಬೆಂಬಲವನ್ನು ನೀಡಲು ಕಾಂಗ್ರೆಸ್ ಪಕ್ಷದ ಇಬ್ಬರು ವ್ಯಕ್ತಿಗಳ ನಿಯೋಗ ಗ್ರಾಮಕ್ಕೆ ತೆರಳಿದೆ.

ಇದನ್ನೂ ಓದಿ: ರೈತರು v/s ಹರ್ಯಾಣ ಸರ್ಕಾರ; ರೈತರನ್ನು ಒಕ್ಕಲೆಬ್ಬಿಸಲು ಪ್ರಭುತ್ವದ ಹುನ್ನಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights