ಗೋಮಾಂಸ ಬಡಿಸಿದ್ದಕ್ಕಾಗಿ ಹಲ್ಲೆ; ಸಂತ್ರಸ್ಥ ವ್ಯಕ್ತಿಗೆ 1 ಲಕ್ಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ

ಹೋಟೆಲ್‌ನಲ್ಲಿ ಗೋಮಾಂಸ ಬಡಿಸಿದ್ದಕ್ಕಾಗಿ ನಕಲಿ ಗೋರಕ್ಷಕರಿಂದ ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿಗೆ 1 ಲಕ್ಷ ರೂ. ಪರಿಹಾರವನ್ನು ನೀಡಬೇಕು ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಅಸ್ಸಾಂ ಸರ್ಕಾರಕ್ಕೆ ಆದೇಶಿಸಿದೆ.

ಕಾಂಗ್ರೆಸ್ಸಿನ ಪ್ರತಿಪಕ್ಷದ ನಾಯಕ ದೇಬಬ್ರತಾ ಸೈಕಿಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಈ ಆದೇಶ ಹೊರಡಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ, ಆಯೋಗವು ಮುಖ್ಯ ಕಾರ್ಯದರ್ಶಿ ಅಥವಾ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ)ರಿಗೆ ಶೋಕಾಸ್ ನೋಟಿಸ್‌ ನೀಡಿತ್ತು. ಆದರೆ, ಅವರು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ವರದಿಯನ್ನು ಸಲ್ಲಿಸಲಿಲ್ಲ ಮತ್ತು ನೋಟಿಸ್‌ಗೆ ಪ್ರತಿಕ್ರಿಯಿಸಿಲ್ಲ ಎಂದು ಆಯೋಗವು ಬಲವಾದ ನೋಟ್‌ ಪಡೆದಿದೆ.

2019ರ ಏಪ್ರಿಲ್ 12 ರಂದು ಬಿಸ್ವಾನಾಥ್ ಜಿಲ್ಲೆಯ ಹಳ್ಳಿಯ ಮಾರುಕಟ್ಟೆಯೊಂದರಲ್ಲಿ ತನ್ನ ಹೋಟೆಲ್‌ನಲ್ಲಿ ಗೋಮಾಂಸ ಬಡಿಸುತ್ತಿದ್ದಕ್ಕಾಗಿ ನಕಲಿ ಗೋರಕ್ಷಕರು 48 ವರ್ಷದ ಶೌಕತ್ ಅಲಿ ಅವರನ್ನು ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಆತನನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಆದರೆ, ಅಲ್ಲೇ ಇದ್ದ ಕೆಲವು ಪೊಲೀಸರು ಮೂಖ ಪ್ರೇಕ್ಷಕರಂತೆ ನೋಡುತ್ತಿದ್ದರು ಎಂದು ಆರೋಪಿಸಲಾಗಿದೆ.

Indian Men Assault A 48-Year-Old Muslim Man And Forced Him To Eat Pork

“ಜಾತಿ / ಧರ್ಮದ ಆಧಾರದ ಮೇಲೆ ಹಲ್ಲೆಗೊಳಗಾದ ವ್ಯಕ್ತಿಯನ್ನು ಅವಮಾನಿಸಿ ಹಿಂಸಿದಲಾಗಿದೆ. ಇದು, ಆತನ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣವಾಗಿದ್ದು, ಇದಕ್ಕೆ ಸರ್ಕಾರವೇ ಹೊಣೆಯಾಗಿರುತ್ತಿದೆ. ಹಾಗಾಗಿ, ಸಂತ್ರಸ್ಥ ವ್ಯಕ್ತಿಗೆ ಪರಿಹಾರವನ್ನು ಸರ್ಕಾರ ನೀಡಬೇಕು” ಎಂದು ಎನ್‌ಹೆಚ್‌ಆರ್‌ಸಿ ಹೇಳಿದೆ.

“ಸಂತ್ರಸ್ತರಿಗೆ ಒಂದು ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿ ಆರು ವಾರಗಳಲ್ಲಿ ಪಾವತಿಸಿದ ಪುರಾವೆಗಳ ಜೊತೆಗೆ ವರದಿಯನ್ನು ಸಲ್ಲಿಸಬೇಕು. ನಾಲ್ಕು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ನೀಡದಿದ್ದರೆ, ಸಂಬಂಧಿತ ಕಾಯ್ದೆಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು” ಅಸ್ಸಾಂ ಮುಖ್ಯ ಕಾರ್ಯದರ್ಶಿಗೆ ಆಯೋಗವು ಎಚ್ಚರಿಸಿದೆ.


ಇದನ್ನೂ ಓದಿ: ಉದ್ದವ್ ಠಾಕ್ರೆಯ ವ್ಯಂಗ್ಯ ಕಾರ್ಟೂನ್‌ ಶೇರ್‌ ಮಾಡಿದ್ದಕ್ಕಾಗಿ ನೌಕಾಪಡೆಯ ನಿವೃತ್ತ ಅಧಿಕಾರಿಯ ಮೇಲೆ ಹಲ್ಲೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights