ಸಿಬ್ಬಂದಿಗಳ ಹಿತ; ಭಜರಂಗದಳದ ದ್ವೇಷ ಭಾಷಣವನ್ನು ಅನುಮತಿಸುತ್ತಿದೆ ಫೇಸ್‌ಬುಕ್‌!

ಭಜರಂಗದಳವು ಭಾರತದಾದ್ಯಂತ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಮತ್ತು ಹಿಂಸಾಚಾರವನ್ನು ಬೆಂಬಲಿಸುವ ಅಪಾಯಕಾರಿ ಸಂಘಟನೆಯೆಂದು ಫೇಸ್‌ಬುಕ್‌ನ ಭದ್ರತಾ ತಂಡವು ಟ್ಯಾಗ್ ಮಾಡಿದ್ದರೂ ಸಹ, ರಾಜಕೀಯ ಮತ್ತು ಸ್ವಹಿತದ ದೃಷ್ಟಿಯಿಂದ ಅದರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಅವಕಾಶ ನೀಡಲಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಆಡಳಿತಾರೂಢ ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ಸಂಘಟನೆಯ ವಿರುದ್ಧ ಕ್ರಮಕೈಗೊಳ್ಳುವ ಗ್ಗೆ ಫೇಸ್‌ಬುಕ್‌ ಹಿಂದೇಟು ಹಾಕುತ್ತಿದೆ. ಭಜರಂಗದಳವವನ್ನು ಸಾಮಾಜಿಕ ಜಾಲತಾಣದಲ್ಲಿ ನಿರ್ಬಂಧಿಸುವುದರಿಂದ ಭಾರತದಲ್ಲಿ ಕಂಪನಿಯ ವ್ಯವಹಾರ ಮತ್ತು ಭವಿಷ್ಯಕ್ಕೆ ಅಪಾಯವಾಗಬಹುದು ಎಂದು ಫೇಸ್‌ಬುಕ್‌ ಹಿಂಜರಿಯುತ್ತಿದೆ ಎಂದು ಜರ್ನಲ್‌ ಹೇಳಿದೆ.

ಆಗಸ್ಟ್‌ ತಿಂಗಳಿನಲ್ಲಿಯೂ ಕೂಡ, ಜರ್ನಲ್‌ ಫೇಸ್‌ಬುಕ್‌ ನೀತಿಗಳ ಪಕ್ಷಪಾತದ ಬಗ್ಗೆ ವರದಿ ಮಾಡಿತ್ತು. ಫೇಸ್‌ಬುಕ್‌ ತನ್ನ ವ್ಯಾಪಾರ ಹಿತಾಸಕ್ತಿಗಾಗಿ ಆಡಳಿತಾರೂಢ ಬಿಜೆಪಿಯ ಬಗೆಗೆ ಒಲವು ತೋರುತ್ತಿದೆ. ಭಾರತದ ಫೇಸ್‌ಬುಕ್‌ನ ಮಾಜಿ ಕಾರ್ಯನಿರ್ವಾಹಕಿಯಾಗಿದ್ದ ಅಂಕಿದಾಸ್‌ ಅವರು ಮುಸ್ಲಿಂ ವಿರೋಧಿ ಟೀಕಿಗಳನ್ನು ಮಾಡಿದ್ದ ಬಿಜೆಪಿ ನಾಯಕನ ಪರವಾಗಿ ಲಾಬಿ ಮಾಡಿದ್ದಾರೆ ಎಂದು ಜರ್ನಲ್‌ ಹೇಳಿತ್ತು.

ಜರ್ನಲ್‌ನಲ್ಲಿ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಬಿಜೆಪಿ ನಾಯಕನನ್ನು ನಿಷೇಧಿಸಿದ್ದ ಫೇಸ್‌ಬುಕ್‌, ಹಲವು ಆರೋಪಗಳನ್ನು ನಿರಾಕರಿಸಿತ್ತು. ಆದರೆ, ದ್ವೇ‍ಷ ಭಾಷಣವನ್ನು ನಿಯಂತ್ರಸುವುದರಲ್ಲಿ ಮತ್ತಷ್ಟು ಕಾರ್ಯಪ್ರೌವೃತ್ತರಾಗಬೇಕಿದೆ ಎಂಬುದನ್ನು ಒಪ್ಪಿಕೊಂಡಿತ್ತು.

ಇದಾದ ಕೆಲವೇ ದಿನಗಳಲ್ಲಿ ಅಂಕಿದಾಸ್‌ ಅವರು ಫೇಸ್‌ಬುಕ್‌ ಕಂಪನಿಯ ತಮ್ಮ ಹುದ್ದೆಯನ್ನು ತೊರೆದರು.

ಇದನ್ನೂ ಓದಿ: ಬಿಜೆಪಿ ಒಲವು ಹೊಂದಿದ್ದ ಫೇಸ್‌ಬುಕ್‌ ಕಾರ್ಯನಿರ್ವಾಹಕಿ ಅಂಕಿದಾಸ್‌ ರಾಜೀನಾಮೆ!

ಜೂನ್‌ನಲ್ಲಿ ನವದೆಹಲಿಯ ಚರ್ಚ್‌ ಮೇಲೆ ನಡೆದ ದಾಳಿಯ ಹೊಣೆ ಹೊತ್ತಿದ್ದ ಭಜರಂಗದಳದ ವಿಡಿಯೋ 2.5 ಲಕ್ಷ ವೀಕ್ಷಣೆಯನ್ನು ಪಡೆಯಲು ಫೇಸ್‌ಬುಕ್‌ ಅನುಮತಿಸಿದೆ ಎಂದು ಫೇಸ್‌ಬುಕ್‌ ಕ್ರಮಗಳನ್ನು ಉಲ್ಲೇಖಿಸಿ ಇತ್ತೀಚೆಗೆ ವಾಲ್‌ ಸ್ಟ್ರೀಟ್‌ ಜರ್ನಲ್‌ ಸುದ್ದಿ ಮಾಡಿತ್ತು.

ಭಾರತದ ಆಡಳಿತಾರೂಢ ಹಿಂದೂತ್ವ ರಾಷ್ಟ್ರೀಯತಾವಾದಿ ರಾಜಕಾರಣಿಗಳು ಮತ್ತು ಭಜರಂಗದಳವನ್ನು ನಿಷೇಧಿಸುವುದರಿಂದ ಫೇಸ್‌ಬುಕ್‌ ಕಂಪನಿಯ ಸೌಲಭ್ಯಗಳ ವಿರುದ್ಧ ಅಥವಾ ಸಿಬ್ಬಂದಿಗಳ ಮೇಲೆ ದೈಹಿಕ ದಾಳಿ ನಡೆಯಬಹುದು ಎಂದು ಫೇಸ್‌ಬುಕ್‌ನ ಆಂತರಿಕ ವರಿದಿಯೊಂದು ತಿಳಿಸಿದೆ.

ಫೇಸ್‌ಬುಕ್‌ ಫ್ಲಾಟ್‌ಫಾರ್ಮ್‌ನಲ್ಲಿ ಭಜರಂಗದಳದ ಪೋಸ್ಟ್‌ಗಳನ್ನು ಅನುಮತಿಸುವುದು ಇತರ ಸಂಘ-ಸಂಸ್ಥೆಗಳಿಗೆ ಭಾರತದಲ್ಲಿ ದ್ವೇಷ ಭಾಷಣವನ್ನು ನಿಭಾಯಿಸುವಲ್ಲಿ ಕಂಪನಿಯ ಬದ್ದತೆಯ ಬಗ್ಗೆ ಅನುಮಾನ ಮಾಢಿಸುತ್ತದೆ ಎಂದು ಫೇಸ್‌ಬುಕ್‌ ನೌಕರರ ಗುಂಪೊಂದು ಆಂತರಿಕ ಚರ್ಚೆ ನಡೆಸಿದೆ ಎಂದು ಆ ವರದಿ ಹೇಳಿದೆ.

ರಾಜಕೀಯ ಸ್ಥಾನಮಾನ ಅಥವಾ ಯಾವುದೇ ಪಕ್ಷದ ಸಂಬಂಧವನ್ನು ಪರಿಗಣಿಸದೆ, ನಾವು ಜಾಗತಿಕ ಮಟ್ಟದಲ್ಲಿ ಅಪಾಯಕಾರಿ ವ್ಯಕ್ತಿಗಳ ವಿರುದ್ಧ ನಮ್ಮ ನೀತಿಗಳನ್ನು ಜಾರಿ ಮಾಡುತ್ತೇವೆ ಎಂದು ವಕ್ತಾರ ಆಂಡಿ ಸ್ಟೋನ್ ಅವರು ಜರ್ನಲ್‌ನ ವರದಿಗೆ ಪ್ರತಿಕ್ರಿಸಿದ್ದಾರೆ.

ಬಳಕೆದಾರರ ವಿಷಯದಲ್ಲಿ ಭಾರತವು ತನ್ನ ಅತಿದೊಡ್ಡ ಮಾರುಕಟ್ಟೆಯೆಂದು ಪರಿಸಿರುವ ಫೇಸ್‌ಬುಕ್‌, ಅಕ್ಟೋಬರ್‌ನಲ್ಲಿ, ಭಾರತದಲ್ಲಿ ಶತಕೋಟಿ ಡಾಲರ್‌ಗಳನ್ನು ಫೇಸ್‌ಬುಕ್‌ ಹೂಡಿಕೆ ಮಾಡಿದೆ. ದೇಶದಲ್ಲಿ ಐದು ಕಚೇರಿಗಳನ್ನು ನಡೆಸುತ್ತಿದೆ.


ಇದನ್ನೂ ಓದಿ: Facebook ಬಳಕೆದಾರರು ದ್ವೇಷಭಾಷಣಗಳ ವೀಕ್ಷಣೆಯಲ್ಲಿ ಹೆಚ್ಚು ಆಸಕ್ತರು: ಫೇಸ್‌ಬುಕ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights