ದೇವಸ್ಥಾನದ ಹುಂಡಿ ಕಳ್ಳತನ; ಭಜರಂಗದಳದ ಮುಖಂಡನ ಬಂಧನ!

ಮಂಗಳೂರು ಬಳಿಯ ದೇವಸ್ಥಾನವೊಂದರಲ್ಲಿ ಕಾಣಿಕೆ ಹುಂಡಿ ಕಳ್ಳತನ ಹಾಗೂ ಬೈಕ್‌ ಖದಿದ್ದ ಹಿಂದೂತ್ವವಾದಿ ಸಂಘಟನೆಯ ಮುಖಂಡನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೊಂಟೆಪದವಿನ ತಾರಾನಾಥ ಅಲಿಯಾಸ್‌ ಮೋಹನ ಎಂದು ಹೇಳಲಾಗಿದ್ದು, ಈತ ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಶನಿವಾರ, ಆತ ಮೊಂಟೆಪದವಿನ ಮನೆಯ ಬಳಿಯಿದ್ದ ಸ್ಕೂಟರ್ ಒಂದನ್ನು ಕಳವು ಮಾಡಿ ಪರಾರಿಯಾಗಿದ್ದ. ಸಿಸಿಟಿವಿ ಫೋಟೇಜ್‌ನಿಂದ ಆತ ಆರೋಪಿ ತಾರಾನಾಥ ಎಂಬುದನ್ನು ದೃಡಪಡಿಸಿದಕೊಂಡ ಸ್ಥಳೀಯರು, ಆತ ತನ್ನ ಮನೆಗೆ ಹೋದ ಸಂದರ್ಭವನ್ನು ನೋಡಿ, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿ ತಾರಾನಾಥ ಹಲವು ಮನೆಗಳಿಂದ ಚಿನ್ನಾಭರಣ, ಅಡಕೆ ಮೂಟೆ,ಗಳನ್ನು ಕದ್ದಿದ್ದಾನೆ. ಅಲ್ಲದೆ, ತನ್ನದೇ ಮಿತ್ರರ ವಾಹನಗಳಿಂದ ಪೆಟ್ರೋಲ್ ಕಳವನ್ನೂ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಗಂಗರಮಜಲು ಪರಿಸರದ ಬಡ ಕುಟುಂಬದ ಮನೆಯಲ್ಲಿ ತಾರಾನಾಥ ಕಳ್ಳತನಕ್ಕೆ ಯತ್ನಿಸಿದ್ದು, ಮನೆ ಮಂದಿ ಎಚ್ಚರಗೊಂಡಿದ್ದರಿಂದ ತಾನು ಬಂದಿದ್ದ ಸ್ಕೂಟರ್ ಬಿಟ್ಟು ಪರಾರಿಯಾಗಿದ್ದ. ಪೊಲೀಸರಿಗೆ ಹೆದರಿ ಠಾಣೆಗೆ ಹಾಜರಾದ ಆತನನ್ನು ಕೊಣಾಜೆ ಪೊಲೀಸರು ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಕಳ್ಳತನ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದ ಬಳಿಕ ಈತನನ್ನು ಹಿಂದೂ ಸಂಘಟನೆಯಿಂದ ದೂರವಿಡಲಾಗಿತ್ತು ಎಂದು ಹೇಳಲಾಗಿದೆ. ಇದಾದ ಬಳಿಕ ಸುಮಾರು ಎರಡು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ತಾರಾನಾಥ, ಮತ್ತೆ ತನ್ನ ಚಾಳಿಯನ್ನು ಮುಂದುವರೆಸಿದ್ದಾರೆ.

ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ ಮೋದಿ ರ್‍ಯಾಲಿಗಾಗಿ 3 ರೈಲು ಬಾಡಿಗೆಗೆ; ವಿವಿಧ ಪ್ರದೇಶದ ಜನರನ್ನು ಕರೆತಂದ BJP!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights