ಮಾಲ್ಡಿವ್ಸ್ ನತ್ತ ನಟಿಮಣಿಯರ ಚಿತ್ತ : ಷರತ್ತಿನ ಮೇಲೆ ವಸತಿ, ಊಟ ಎಲ್ಲವೂ ಫ್ರೀ….?

ಯಾರಾದ್ರು ಹೊಸದಾಗಿ ಮದುವೆಯಾದರೆ ಮೊದಲು ಮಾಲ್ಡಿವ್ಸ್ ನನ್ನು ಹನಿಮೂನ್ ಪ್ಲೇಸ್ ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದ್ರೆ ಇತ್ತೀಚೆಗೆ ಕಣ್ಣು ಕುಕ್ಕುವ ಹಾಗೆ ನಟಿಮಣಿಯರು ತುಂಡುಡುಗೆ ತೊಟ್ಟು ಮಾಲ್ಡಿವ್ಸ್ ನಲ್ಲಿ ಕಾಲ ಕಳೆಯುತ್ತಿರುವುದರಿಂದ ಎಲ್ಲರ ಚಿತ್ತ ಮಾಲ್ಡಿವ್ಸ್ ನತ್ತ ನೆಟ್ಟಿದೆ. ಆದರೆ ದಿನಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಟಿಯರು ಈ ಸ್ಥಳದಲ್ಲಿ ಕಾಲ ಕಳೆಯುತ್ತಾರೆಯೇ ಎಂಬ ಪ್ರಶ್ನೆ ಸದ್ಯ ಎದುರಾಗಿದ್ದು ಇದಕ್ಕೆ ಉತ್ತರ ಕೂಡ ಸಿಕ್ಕಿದೆ.

ಹೀಗೆ ತುಂಡುಡುಗೆಯಲ್ಲಿ ನೀಲಿ ಬಣ್ಣದಂತೆ ಕಾಣುವ ನೀರಿನಲ್ಲಿ ಮಿಂದೇಳುವ ನಟಿಮಣಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಲ್ಡಿವ್ಸ್ ನಲ್ಲಿ ಉಳಿದುಕೊಂಡು ಹಾಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾರೆ ಅಂದರೆ ಅದು ನಿಜಕ್ಕೂ ಸುಳ್ಳು. ಯಾಕೆಂದ್ರೆ ಇದೊಂದು ರಹಸ್ಯ ನಟಿಮಣಿಯರು ಯಾವುದೇ ಖರ್ಷಿಲ್ಲದೇ ಮಾಲ್ಡಿವ್ಸ್ ನಲ್ಲಿ ಉಳಿದುಕೊಳ್ಳುತ್ತಾರೆನ್ನುವುದು ಬಹಿರಂಗವಾಗಿದೆ.

Bollywood Actress Taapsee Pannu is enjoying vacation in the Maldives see these beautiful pictures » Indian News Live

ಹೌದು… ನಟಿಮಣಿಯರ ಮಾಲ್ಡಿವ್ಸ್ ಟ್ರಿಪ್ ನ ಹಿಂದೆ ಒಂದು ರಹಸ್ಯವಿದೆ. ಇದಕ್ಕೆ ಷರತ್ತು ಕೂಡ ಅನ್ವಯವಾಗುತ್ತವೆ. ಅದಕ್ಕೆ ಒಪ್ಪಿದರೆ ರೆಸಾರ್ಟ್ ಗಳಿಂದ ಟಿಕೆಟ್ ಫ್ರೀಯಾಗಿ ಲಭಿಸುತ್ತದೆ. ಅಷ್ಟಕ್ಕೂ ಏನಿದು ರಹಸ್ಯ..? ನಾವು ಹೇಳ್ತೀವಿ ನೋಡಿ.

Super Model & Actress Emily Ratajkowski Spends A Luxurious Getaway In The Maldives - Restination

ನಟಿಮಣಿಯರು ಹೀಗೆ ಮಾಲ್ಡಿವ್ಸ್ ನಲ್ಲಿ ಮಜಾ ಮಾಡುತ್ತಿರುವುದು ಅವರ ಸ್ವಂತ ಖರ್ಚಿನಿಂದಲ್ಲಾ. ಬದಲಿಗೆ ರೆಸಾರ್ಟ್ ಮಾಲೀಕರ ಕರಾಮತ್ತಿನಿಂದ. ಎಸ್.. ದ್ವೀಪ ರಾಷ್ಟ್ರವಾಗಿರುವ ಮಾಲ್ಡಿವ್ಸ್ ಮೂಲ ಆದಾಯ ಪ್ರವಾಸೋದ್ಯಮ. ಆದರೆ ಕೊರೊನಾ ವೈರಸ್ ನಿಂದಾಗಿ ಎಲ್ಲಾ ಕ್ಷೇತ್ರಗಳಿಗೆ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ.

ಕುಂಠಿತವಾಗಿರುವ ಪ್ರವಾಸೋದ್ಯಮವನ್ನು ಮೇಲೆತ್ತಲೇಬೇಕು ಎಂಬ ಉದ್ದೇಶದಿಂದ ಅಲ್ಲಿನ ರೆಸಾರ್ಟ್ ಇನ್ನಿಲ್ಲದ ಪ್ಲಾನ್ ಮಾಡಿದ್ದು, ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಹೀಗೆ ವಿವಿಧ ಭಾಷೆಗಳ ಸಿನಿಮಾಗಳ ನಟಿಯರನ್ನು ಸಂಪರ್ಕಿಸಿ ಮಾಲ್ಡಿವ್ಸ್ ಗೆ ಆಹ್ವಾನಿಸಿವೆ. ಇದನ್ನು ಬಾಲಿವುಡ್ ನಟರೊಬ್ಬರು ಬಹಿರಂಗಪಡಿಸಿದ್ದಾರೆ.

Actress Ahaana and sisters share their Maldives experience | Celebrity Travel | Manorama English

ಮಾಲ್ಡಿವ್ಸ್ ಗೆ ನಟಿಯರನ್ನು ಫ್ರೀಯಾಗಿ ಆಹ್ವಾನಿಸುವುದು ಮಾತ್ರವಲ್ಲದೇ ಊಟ, ವಸತಿ, ಶಾಪಿಂಗ್, ಪ್ರತ್ಯೇಕ ಫೋಟೋಗ್ರಾಫರ್ಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಆದರೆ ಕೆಲ ಷರತ್ತುಗಳನ್ನು ವಿಧಿಸಿಲಾಗಿದೆ. ಮಾಲ್ಡಿವ್ಸ್ ಗೆ ಭೇಟಿ ನೀಡಿದ ನಟಿಯರು ಪ್ರತಿದಿನ 2-3 ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಬೇಕು. ಪ್ರತಿ ಚಿತ್ರದಲ್ಲಿಯೂ ಹಾಟ್, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಫೋಟೋಗೆ ಲೊಕೇಶನ್ ಜೊತೆಗೆ ರೆಸಾರ್ಟ್ ಹೆಸರು ಹಾಕಬೇಕು. ಆದರೆ ಈ ಗುಟ್ಟು ಯಾರಿಗೂ ತಿಳಿಯಬಾರದು ಎಂಬ ಷರತ್ತು ಹಾಕಲಾಗಿದೆ. ಇದಕ್ಕೆ ಅಸ್ತು ಎಂದ ನಟಿಮಣಿಯರು ತಂಡೋಪ ತಂಡವಾಗಿ ಮಾಲ್ಡಿವ್ಸ್ ನತ್ತ ಪ್ರಯಾಣ ಬೆಳೆಸಿದ್ದಾರೆ.

TV Actress Nikita Sharma Maldives Vacation Photos, TV Actress Nikita Sharma Maldives Vacation Bikini Photos

ಇದರ ಅದ್ಯಾರೆಲ್ಲಾ ಪಡೆದಿದ್ದಾರೆಂಬ ಮಾಹಿತಿ ಇಲ್ಲವಾದರೂ ಮಾಲ್ಡಿವ್ಸ್ ಗೆ ಸ್ಯಾಂಡಲ್ ವುಡನ ಶಾನ್ವಿ ಶ್ರೀವಾಸ್ತವ್, ಪ್ರಣಿತಾ, ಬಾಲಿವುಡ್ನ ರಾಕುಲ್ ಪ್ರೀತ್ ಸಿಂಗ್ ತಾಪ್ಸಿ, ಪನ್ನು, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ಇಲಿಯಾನಾ, ಮೌನಿ ರಾಯ್, ಟಾಲಿವುಡ್ ನ ಸಮಂತಾ, ಕಾಜಲ್ ಅಗರ್ವಾ ಹೀಗೆ ಸಾಲು ಸಾಲು ನಟಿ ಮಣಿಯರು ವಿಮಾನ ಹತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights