ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: BJP ಕೌನ್ಸಿಲರ್, ಪೊಲೀಸರ ಹತ್ಯೆ; ಲಷ್ಕರ್-ಎ-ತೋಯಿಬಾ ಮೇಲೆ ಆರೋಪ!

ಕಳೆದ ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಎರಡನೇ ಬಾರಿಗೆ ಭಯೋತ್ಪಾದಕ ದಾಳಿ ನಡೆದಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣ ಪಂಚಾಯತಿ ಸಭೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ್ದು, ಪುರಸಭೆಯ ಬಿಜೆಪಿ ಸದಸ್ಯ ಮತ್ತು ಒಬ್ಬ ಪೊಲೀಸ್‌ ಹತ್ಯೆಯಾಗಿದ್ದಾರೆ. ಅಲ್ಲದೆ, ಈ ವೇಳೆ ಮತ್ತೊಕಾಬ್ಬ ಕೌನ್ಸಿಲರ್ ಗಾಯಗೊಂಡಿದ್ದಾರೆ.

ಈ ದಾಳಿಯನ್ನು ಲಷ್ಕರ್-ಎ-ತೋಯಿಬಾ ಸಂಘಟನೆ ನಡೆಸಿದೆ ಎಂದು ಪೊಲೀಸರು ದೂಷಿಸಿದ್ದಾರೆ. ಭಯೋತ್ಪಾದಕರ ಗುಂಡಿನ ದಾಳಿಗೆ ತೀಕ್ಷ್ಣ ಪ್ರತಿಕಾರ ಪ್ರದರ್ಶಿಸದ ಕಾರಣ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಮುನ್ಸಿಪಲ್ ಕೌನ್ಸಿಲ್ ಕಚೇರಿ ಕಡೆಗೆ ಉಗ್ರರು ಸ್ವಯಂಚಾಲಿತ ರೈಫಲ್‌ಗಳಿಂದ ಗುಂಡು ಹಾರಿಸಿದರು, ಈ ವೇಳೆ ಅಲ್ಲಿ ಸೋಪೋರ್ ಪುರಸಭೆಯ ಅಧ್ಯಕ್ಷರು ಮತ್ತು ಕೌನ್ಸಿಲರ್‌ಗಳು ಸಭೆ ನಡೆಸುತ್ತಿದ್ದರು.

ಉಗ್ರರ ದಾಳಿಯ ನಂತರ, ಪೊಲೀಸರು, ಸಿಆರ್‌ಪಿಎಫ್ ಮತ್ತು ಸೇನಾಧಿಕಾರಿಗಳು ಆ ಪ್ರದೇಶಕ್ಕೆ ಧಾವಿಸಿ ದಾಳಿಗೆ ಕಾರಣವಾದ ಉಗ್ರರನ್ನು ಪತ್ತೆ ಹಚ್ಚಲು ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆ ನಡೆಸಿದರು. ಆದರೆ, ಕಾರ್ಯಾಚರಣೆಯ ಸಮಯದಲ್ಲಿ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ.

ಏತನ್ಮಧ್ಯೆ, ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿಯೂ ದಾಳಿ ನಡೆದಿದ್ದು, ಭದ್ರತಾ ಪಡೆಗಳು ಐದು ಎಕೆ ಅಟ್ಯಾಕ್ ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಿಯಂತ್ರಣ ರೇಖೆಗೆ ಸಮೀಪವಿರುವ ಪ್ರದೇಶದಲ್ಲಿ ವಶಪಡಿಸಿಕೊಂಡಿದೆ ಎಂದು ಸೇನಾ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾ ಸರ್ಕಾರ ಬಿಕ್ಕಟ್ಟಿನಲ್ಲಿಲ್ಲ; ಪವಾರ್‌ ಮತ್ತು ಅಮಿತ್‌ ಶಾ ರಹಸ್ಯ ಭೇಟಿ ನಡೆಸಿಲ್ಲ: ಸಂಜಯ್‌ ರಾವತ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights