1993 ಬಾಂಬೆ ಸ್ಫೋಟದಂತೆ ದಾಳಿಗೆ ಸಂಚು : ಆರು ಭಯೋತ್ಪಾಕರ ಬಂಧನ!

1993 ಬಾಂಬೆ ಸ್ಫೋಟದಂತೆ ದಾಳಿಗೆ ಸಂಚು ರೂಪಿಸಿದ್ದ ಪಾಕಿಸ್ತಾನದ ಆರು ಭಯೋತ್ಪಾಕರನ್ನು ದೆಹಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮಂಗಳವಾರ ದೆಹಲಿ ಪೊಲೀಸರು ಪಾಕಿಸ್ತಾನ ಸಂಘಟಿತ ಭಯೋತ್ಪಾದಕ ಘಟಕವನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನ-ಐಎಸ್‌ಐ ತರಬೇತಿ ಪಡೆದ ಭಯೋತ್ಪಾದಕರು ಸೇರಿದಂತೆ ಆರು ಜನರನ್ನು ಬಂಧಿಸಿದ್ದಾರೆ. ಈ ಪಾಕಿಸ್ತಾನ ಭಯೋತ್ಪಾದನಾ ತಂಡ 1993 ರ ಬಾಂಬೆಯ ಸ್ಫೋಟದಂತಹ ದಾಳಿ ಪುನರಾವರ್ತಿಸಲು ಯೋಜಿಸುತ್ತಿತ್ತು. ಅದಕ್ಕಾಗಿ ಅನೇಕ ಸ್ಥಳಗಳನ್ನು ಗುರುತಿಸಿತ್ತು ಎನ್ನುವ ಮಾಹಿತಿ ಪಡೆದ ದೆಹಲಿ ವಿಶೇಷ ಪೊಲೀಸ್ ಪಡೆ ಭಯೋತ್ಪಾದಕರನ್ನು ಬಂಧಿಸಿದೆ. ಮಾತ್ರವಲ್ಲದೆ ಬಂಧಿತ ಭಯೋತ್ಪಾದಕರಿಂದ ಸುಮಾರು 1.5 ಕೆಜಿ ಆರ್‌ಡಿಎಕ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.

ಜನ್ ಮೊಹಮ್ಮದ್ ಶೇಖ್ (47) ಅಲಿಯಾಸ್ ‘ಸಮೀರ್’, ಒಸಾಮಾ (22), ಮೂಲ್‌ಚಂದ್ (47), ಜೀಶನ್ ಕಮಾರ್ (28), ಮೊಹಮದ್ ಅಬು ಬಕರ್ (23) ಮತ್ತು ಮೊಹಮದ್ ಅಮೀರ್ ಜಾವೇದ್ (31) ಬಂಧಿತ ಆರೋಪಿಗಳಾಗಿದ್ದಾರೆ. ಇವರು ದೆಹಲಿ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ದಾಳಿಗೆ ಸಂಚು ಮಾಡಿದ್ದರು. ಇವರು ಭಯೋತ್ಪಾದಕ ಘಟಕಕ್ಕೆ ಸಹಾಯ ಮಾಡಲು ಸ್ಲೀಪರ್ ಸೆಲ್‌ಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತಿದೆ.

ಒಸಾಮಾ ಮತ್ತು ಕಮರ್ ಸೇರಿದಂತೆ ಬಂಧಿತ ಎಲ್ಲ ಆರು ಆರೋಪಿಗಳನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪಾಕ್ ಭಯೋತ್ಪಾದಕ ಘಟಕವನ್ನು ಎರಡು ಘಟಕಗಳ ಮೂಲಕ ಅಂದರೆ ಭೂಗತ ಮತ್ತು ಪಾಕ್-ಐಎಸ್‌ಐ ತರಬೇತಿ ಪಡೆದ ಭಯೋತ್ಪಾದಕ ಘಟಕದ ಮೂಲಕ ನಡೆಸಲಾಗುತ್ತಿದೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಬಂಧಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights