ಐಪಿಎಲ್ ಪಂದ್ಯ ವೀಕ್ಷಣೆ ಬಿಟ್ಟು ಪ್ರೇಕ್ಷಕರಿಗೆ ಕಿರಿಕಿರಿ ಮಾಡಿದ ಕಿರುತೆರೆ ನಟಿ

ಐಪಿಎಲ್ ಪಂದ್ಯದ ವೀಕ್ಷಣೆಗೆಂದು ಸ್ನೇಹಿತರೊಂದಿಗೆ ತೆರಳಿದ್ದ ಕಿರುತೆರೆ ನಟಿಯೊಬ್ಬಳು ಕಾರ್ಪೊರೇಟ್ ಬಾಕ್ಸ್ ನಲ್ಲಿ ಕುಳಿತಿದ್ದ ವೇಳೆ ಮದ್ಯ ಸೇವಿಸಿ ಇತರ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ

Read more

ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ನವರಸ ನಾಯಕ ಜಗ್ಗೇಶ್ ಅಭಿನಯದ 8MM

ಕಾದವನು ಮೇಧಾವಿ ನುಗ್ಗಿದವನು ಮೂರ್ಖ…! ಕಾಯಣ ಅಂತ ಖಡಕ್ ಡೈಲಾಗ್ ಹೊಡೆದು ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದ ನವರಸ ನಾಯಕ ಜಗ್ಗೇಶ್ ಅವರ ಸಿನಿಮಾ 8MM. ಹೆಚ್ಚಾಗಿ ಹಾಸ್ಯ ಪ್ರಧಾನಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುವ ಜಗ್ಗೇಶ್ ಹಿಂದೆಂದೂ ಕಾಣದಂತಹ ವಿಭಿನ್ನ ಅವತಾರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರೋದು ವಿಶೇಷ. ಅಧಿಕಾರಶಾಹಿ ವ್ಯವಸ್ಥೆ, ವಯಸ್ಸಾದವರ ಅಸಹಾಯಕತೆ ಕುರಿತ ಚಿತ್ರಣ ಹೊಂದಿರುವ ‘8MM’ ಚಿತ್ರ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಹಿಡಿಸಿತ್ತು. ಸರಣಿ ಕೊಲೆಗಳ ಸುತ್ತ ಸಾಗುವ ‘8MM’ ಸಿನಿಮಾಗೆ ಪ್ರೇಕ್ಷಕರು ಜೈಕಾರಹಾಕಿದ್ದರು.ಗನ್ನು ಕದ್ದವನು, ಸರಣಿ ಕೊಲೆಗಾರ, ಪೊಲೀಸ್ ಅಧಿಕಾರಿ, ಒಬ್ಬ ಪತ್ರಕರ್ತೆ ಇವರ ಸುತ್ತ ಕಥೆ ಸಾಗುತ್ತ ಸಾಕಷ್ಟು ಕುತೂಹಲವನ್ನು ಸಿನಿಮಾ ಸೃಷ್ಟಿ ಮಾಡಿತ್ತು. ಹರಿಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ 8MM ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳು ಇದ್ದವು. ನವರಸ ನಾಯಕ ಜಗ್ಗೇಶ್ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡ್ರೆ, ತನ್ನ ಕಂಠದ ಮೂಲಕವೇಮನೆಮಾತಾಗಿರುವ ವಸಿಷ್ಠ ಸಿಂಹ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ನಿಭಾಯಿಸಿದ್ದಾರೆ. ಇನ್ನು ಮಯೂರಿ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರವನ್ನು ನಿಭಾಯಿಸಿದ್ದು  ಆದಿ ಲೋಕೇಶ್, ರಾಕ್‌ಲೈನ್ ವೆಂಕಟೇಶ್ ಅವರುಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ವಿಶೇಷತೆಯನ್ನು ಹೆಚ್ಚಿಸಿತ್ತು. ಇನ್ನು ಇಷ್ಟೆಲ್ಲಾ ವಿಶೇಷತೆಗಳನ್ನು ಹೊತ್ತು ಕಳೆದ ನವೆಂಬರ್‌ನಲ್ಲಿ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದ 8 MM ಸಿನಿಮಾ ಇದೇ ಭಾನುವಾರದಂದು ಅಂದ್ರೆ  ಮಾರ್ಚ್ 24 ಮಧ್ಯಾಹ್ನ 3:00 ಗಂಟೆಗೆ ನಿಮ್ಮನೆಚ್ಚಿನ ಜೀ಼ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Read more

Film news : Box office ಬ್ಲಾಕ್​ಬಸ್ಟರ್​ KGF ಚಾಪ್ಟರ್ 1 ಶೀಘ್ರದಲ್ಲಿ ಟಿವಿಯಲ್ಲಿ…!

50 ದಿನದತ್ತ ಸಾಗುತ್ತಿರುವಾತ್ತಿರುವ ‘ಕೆಜಿಎಫ್ ಚಾಪ್ಟರ್ 1‘ ಬ್ಲಾಕ್​ಬಸ್ಟರ್​ ಸಿನಿಮಾ ಈಗ ಟಿವಿಯಲ್ಲಿ ಪ್ರಸಾರವಾಗೊದು ನಿಜಕ್ಕೂ ಅಚ್ಚರಿಯೇ ಸರಿ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ

Read more

ಮುಂಬೈ : ಮನೆಗೆ ಮರಳುತ್ತಿದ್ದ ಟಿವಿ ಪತ್ರಕರ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ..!

ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಟಿವಿ ಪತ್ರಕರ್ತನ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ರವಿವಾರ ನಡೆದಿದೆ. ಖಾಸಗಿ ಚಾನೆಲ್ ಒಂದರಲ್ಲಿ ಕೆಲಸ

Read more

ಇನ್ಮುಂದೆ ಡ್ರಾಮಾ ಜೂನಿಯರ್ಸ್ ನಲ್ಲಿ ಟಿ.ಎನ್. ಸೀತಾರಾಮ್ ಇರೋದಿಲ್ಲ..! ಯಾಕೆ?

‘ಜೀ ಕನ್ನಡ’ ವಾಹಿನಿಯ ‘ಡ್ರಾಮಾ ಜೂನಿಯರ್ಸ್’ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಟಿ.ಎನ್. ಸೀತಾರಾಮ್ ಶೋ ನಿಂದ ಹೊರನಡೆದಿದ್ದಾರೆ. ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ನಿರ್ದೇಶಕ ಸೀತಾರಾಮ್, ಹಿರಿಯ ನಟಿ

Read more

ಕಲರ್ಸ್‍ ಕನ್ನಡದಲ್ಲಿ ಬಾಂಧವ್ಯ ಬೆಸೆಯುವ ಹಬ್ಬ-ಅನುಬಂಧ ಅವಾರ್ಡ್ಸ್ 2017

ಕಲರ್ಸ್‍ಕನ್ನಡದಧಾರಾವಾಹಿ, ರಿಯಾಲಿಟಿ ಶೋಗಳ ವೀಕ್ಷಕರಾಗಿ ನೀವು ಮೆಚ್ಚುಗೆ ನೀಡಿ, ಪರದೆಯ ಮೇಲೆ ಬರುವ ಪಾತ್ರಗಳನ್ನು ನಿಮ್ಮ ಮನೆಯವರಂತೆ ಸ್ವೀಕರಿಸಿದ್ದೀರಿ. ನೀವು ಪ್ರೀತಿ ನೀಡಿ ಬೆಳೆಸಿರುವ ನಿಮ್ಮ ಅಚ್ಚು

Read more

ಕಿರುತೆರೆಯಲ್ಲಿ ಶಿವಗಾಮಿ ಸ್ಟೋರಿ…ನಿರ್ದೇಶಿಸಲಿದ್ದಾರೆ ರಾಜಮೌಳಿ

ಬಾಹುಬಲಿ 2 ಸಿನಿಮಾ ನೋಡಿದವರಿಗೆಲ್ಲಾ ರಾಜಮಾತಾ ಶಿವಗಾಮಿ ಮೇಲೆ ವಿಪರೀತ ಕೋಪ ಬಂದಿರುತ್ತದೆ. ಅಷ್ಟೊಂದು ಉತ್ತಮ ಆಡಳಿತ ಮಾಡುತ್ತಿದ್ದ ರಾಜಮಾತೆ ಅದ್ಹೇಗೆ ಸ್ವಲ್ಪವೂ ಯೋಚಿಸಿ-ಪರಾಮರ್ಶಿಸಿ ನೋಡದೇ ಬಾಹುಬಲಿಯ

Read more
Social Media Auto Publish Powered By : XYZScripts.com