ಹೋಟೆಲ್‌ನಲ್ಲಿ ಪ್ರಚಾರ ಪಡೆಯಲು ಮುಂದಾದ ತೇಜಸ್ವಿ ಸೂರ್ಯ; ತಂಬಿ ಇದು ತಮಿಳುನಾಡು ಎಂದ ತಮಿಳರು!

ತಮಿಳುನಾಡು ಚುನಾವಣಾ ಸಿದ್ದತೆ ಭರದಿಂದ ಸಾಗುತ್ತಿದೆ ಈ ನಡುವೆ ಬಿಜೆಪಿ ಎಲ್ಲಾ ವಿಚಾರಗಳಲ್ಲಿ ಬಿಲ್ಡಪ್‌ ಹಾಕಿಕೊಳ್ಳುವುದನ್ನು ಭಾರೀ ಪ್ರಮಾಣದಲ್ಲಿ ಮುಂದುವರೆಸಿದೆ. ಹೋಟೆಲ್‌ನಲ್ಲಿ‌ ಊಟ ಮಾಡುವುದನ್ನೂ ಪ್ರಚಾರಕ್ಕೆ ಬಳಸಿಕೊಂಡ ಬಿಜೆಪಿ ಮುಜುಗರಕ್ಕೆ ಒಳಗಾಗಿದೆ.

ಶನಿವಾರ ತಮಿಳುನಾಡಿನ ‘ಶ್ರೀ ಅನ್ನಪೂರ್ಣ’ ಹೋಟೆಲ್‌ ಒಂದರಲ್ಲಿ ಊಟಕ್ಕೆ ತೆರಳಿದ್ದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಟ್ವಿಟರ್‌ನಲ್ಲಿ ಹೇಳಿಕೆಯೊಂದನ್ನು ಬರೆದಿದ್ದರು. ಆದರೆ ಆ ನಂತರ ಅದಕ್ಕೆ ಅನ್ನಪೂರ್ಣ ರೆಸ್ಟೋರೆಂಟ್ ನೀಡಿದ ಪ್ರತಿಕ್ರಿಯೆಗೆ ಸಂಸದ ಮುಜುಗರಕ್ಕೊಳಗಾಗುವಂತಾಗಿದೆ.

ಉಪಹಾರ ಸೇವಿಸಿದ ಬಗ್ಗೆ ಅವರು ತಮ್ಮ ಟ್ವೀಟ್‌ನಲ್ಲಿ, “ಇಂದು ರೆಸ್ಟೋರೆಂಟ್‌ನಲ್ಲಿ ಬೆಳಗಿನ ಉಪಾಹಾರದ ನಂತರ, ನಾನು ಸಹಜವಾಗಿ ಬಿಲ್ ಪಾವತಿಸಲು ಹೋದೆ. ಕ್ಯಾಷಿಯರ್ ಹಣವನ್ನು ಸ್ವೀಕರಿಸಲು ಹಿಂಜರಿದರು. ಒತ್ತಾಯದ ನಂತರ ಬಹಳ ಹಿಂಜರಿಕೆಯಿಂದಲೇ ಹಣ ಸ್ವೀಕರಿಸಲು ಒಪ್ಪಿಕೊಂಡರು. ಆಗ ನಾನು ಅವರಿಗೆ “ನಾವು ಬಿಜೆಪಿಯವರು. ನಮ್ಮದು ಎಲ್ಲರನ್ನು ಗೌರವಿಸುವ ಮತ್ತು ಎಲ್ಲರನ್ನೂ ರಕ್ಷಿಸುವ ಪಕ್ಷ. ಸಣ್ಣ ವ್ಯಾಪಾರಿಗಳಿಂದಲೂ ರೋಲ್-ಕಾಲ್ ಮಾಡಲು ಡಿಎಂಕೆಯಂತೆ ನಾವಲ್ಲ” ಎಂದು ಬರೆದಿದ್ದರು.

ಆದರೆ ಇದಕ್ಕೆ ಶನಿವಾರ ಸಂಜೆ ಪ್ರತಿಕ್ರಿಯಿಸಿರುವ ಶ್ರೀ ಅನ್ನಪೂರ್ಣ ರೆಸ್ಟೋರೆಂಟ್, “ಆತ್ಮೀಯ ತೇಜಸ್ವಿ ಸೂರ್ಯ ನಮ್ಮ ರೆಸ್ಟೋರೆಂಟ್‌ನಲ್ಲಿ ನಿಮಗೆ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ. ವಾಸ್ತವವಾಗಿ ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಯಾರೂ ನಮ್ಮನ್ನು ಉಚಿತವಾಗಿ ನೀಡುವಂತೆ ಒತ್ತಾಯಿಸಲಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಅಷ್ಟೇ” ಎಂದು ರೆಸ್ಟೋರೆಂಟ್ ತಮ್ಮ ಫೇಸ್‌ಬುಕ್ ‌ಪೇಜ್‌ ಮೂಲಕ ತಿಳಿಸಿದೆ.

ರೆಸ್ಟೋರೆಂಟ್ ತನ್ನ ಫೇಸ್‌ಬುಕ್ ಮೂಲಕ ನೀಡಿರುವ ಹೇಳಿಕೆಯ ನಂತರ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್‌ಗೆ ಒಳಗಾಗಿದ್ದಾರೆ.

ಲಕ್ಷ್ಮಿ ರಾಮಚಂದ್ರನ್ ಅವರು, “ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು. ನಿಮ್ಮ ನಾಟಕಗಳನ್ನು ಬೆಂಗಳೂರಲ್ಲೇ ಬಿಟ್ಟು ಬನ್ನಿ” ಎಂದು ವ್ಯಂಗ್ಯವಾಡಿದ್ದಾರೆ.

ಸರಣ್ ಆರ್‌. ಕೆ. ಅವರು, “ಈ ರೀತಿಯ ಬಿಗಿಯಾದ ಹೊಡೆತ ಪಡೆದ ನಂತರ ತೇಜಸ್ವಿ ಸೂರ್ಯ ನೋವು ಅನುಭವಿಸುತ್ತಿದ್ದಾರೆ’’ ಎಂದು ಹೇಳಿದ್ದಾರೆ.

https://twitter.com/manishahire/status/1378368293082329095?s=20

ಮಣಿ ಅವರು, “ಕೆಲವು ಚಪ್ಪಲಿಯೇಟು ತುಂಬಾ ಸದ್ದು ಮಾಡುವುದಿಲ್ಲ. ಆದರೆ ಅವು ವ್ಯಕ್ತಿಯ ಮೇಲೆ ಶಾಶ್ವತವಾದ ಮುದ್ರೆಯನ್ನು ಬಿಟ್ಟು ಬಿಡುತ್ತವೆ. ಇದು ಅಂತಹ ಅದ್ಭುತ ಮತ್ತು ವಿನಮ್ರ ಕಪಾಳಮೋಕ್ಷ ಆಗಿದೆ. ಏನಂತೀರಿ ತೇಜಸ್ವಿ ಸೂರ್ಯ” ಎಂದು ಹೇಳಿದ್ದಾರೆ.

ಇದನ್ನೂ ಓದಿ: BJP ಬಗ್ಗೆ ಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು: BJP ವಿರುದ್ದ ಕಾಂಗ್ರೆಸ್ ಅಪಹಾಸ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights