ಶಿಕ್ಷಕರ ದಿನ: ಕಲ್ಯಾಣ ಕರ್ನಾಟಕದಲ್ಲಿ 210 ಶಿಕ್ಷಕರು ಕೊರೊನಾಗೆ ಬಲಿ

ಇಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದೇ ವೇಳೆ ಹಲವಾರು ಭಾಗಗಳಲ್ಲಿ ಶಿಕ್ಷಕರ ದಿನಾಚರಣೆ ಕಳೆ ಗುಂದಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಇದೂವರೆಗೂ 210 ಶಿಕ್ಷಕರನ್ನು ಕೊರೊನಾಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೀದರ್​ನಲ್ಲಿ 64, ಕಲಬುರ್ಗಿಯಲ್ಲಿ 47, ಯಾದಗಿರಿಯಲ್ಲಿ 19, ಬಳ್ಳಾರಿಯಲ್ಲಿ 45, ರಾಯಚೂರಿನಲ್ಲಿ 17 ಮತ್ತು ಕೊಪ್ಪಳದಲ್ಲಿ 18 ಜನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಕೊರೊನಾದಿಂದ ಸಾವಪ್ಪಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆದ ಚುನಾವಣೆಗಳು ಹಾಗೂ ಸಭೆ ಸಮಾರಂಭಗಳ ಅವಾಂತರದಿಂದಾಗಿ 210 ಶಿಕ್ಷಕರು ಬಲಿಯಾಗಿದ್ದಾರೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ಭಾರೀ ಹೊಡೆತನೀಡಿದೆ ಎಂದು ಹೇಳಲಾಗಿದೆ.

ನೂರಾರು ವಿದ್ಯಾರ್ಥಿಗಳು ದಿವಂಗತರಾದ ತಮ್ಮ ನೆಚ್ಚಿನ ಶಿಕ್ಷಕರನ್ನೂ ನೆನಪಿಸಿಕೊಂಡು ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: ಯಾವುದೇ ಆತುರವಿಲ್ಲ; ವಿಧಾನಸಭೆಗೆ ಹೋಗಲು 2023 ರವರೆಗೆ ಕಾಯುತ್ತೇನೆ: ಬಿವೈ ವಿಜಯೇಂದ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights