7 ವರ್ಷದ ಬಾಲಕನನ್ನು ತಲೆಕಳಗೆ ಮಾಡಿ ನೇತಾಡಿಸಿದ ಶಿಕ್ಷಕ – ಬಂಧನ!

ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಎರಡನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನನ್ನು ತಲೆ ಕೆಳಗೆ ಮಾಡಿ ಕಾಲನ್ನು ಹಿಡಿದು ಶಾಲಾ ಕಟ್ಟಡದ ಮೇಲಿನಿಂದ ನೇತಾಡಿಸಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ನಡೆದಿದೆ.

ಆಘಾತಕಾರಿ ಘಟನೆಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ಕೃತ್ಯ ಎಸಗಿದ ಶಿಕ್ಷಕ ಮನೋಜ್ ವಿಶ್ವಕರ್ಮ ಎಂಬುವವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿ ಶಕ್ಷಕನನ್ನು ಬಂಧಿಸಲಾಗಿದೆ.

ಗುರುವಾರ ಊಟದ ವಿರಾಮದ ಸಮಯದಲ್ಲಿ ಆಟವಾಡುತ್ತಿದ್ದಾಗ ಎರಡನೇ ತರಗತಿ ವಿದ್ಯಾರ್ಥಿ ಸೋನು ಯಾದವ್‌ ಮತ್ತೊಬ್ಬ ವಿದ್ಯಾರ್ಥಿಯನ್ನು ಕಚ್ಚಿದ್ದರು. ಇದಕ್ಕಾಗಿ ಮನೋಜ್ ವಿಶ್ವಕರ್ಮ, ಸೋನು ಯಾದವ್ ಅವರ ಕಾಲಿನಿಂದ ಹಿಡಿದು ತಲೆಕೆಳಗಾಗಿ ಕಟ್ಟಡದ ಮೇಲಿನಿಂದ ನೇತಾಡಿಸಿದ್ದಾನೆ.

ಅಲ್ಲದೆ ಕಚ್ಚಿದ್ದಕ್ಕಾಗಿ ಕ್ಷಮೆ ಕೇಳದಿದ್ದರೆ ಕಟ್ಟಡದ ಮೇಲಿನಿಂದ ಬೀಳಿಸುವುದಾಗಿ ಮುಖ್ಯೋಪಾಧ್ಯಾಯ ಬೆದರಿಸಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಯುಟ್ಯೂಬ್‌ ವಿಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ; ಯುವಕನ ಬಂಧನ

ಈ ವೇಳೆ ಮಕ್ಕಳ ಗುಂಪು ಜಮಾಯಿಸಿದ್ದು, ಅಲ್ಲದೆ ಸೋನು ಜೋರಾಗಿ ಅತ್ತು ಕಿರುಚಾಡಿದ್ದರಿಂದ ಮುಖ್ಯೋಪಾಧ್ಯಾಯ ಕೆಳಗಡೆ ಇಳಿಸಿದ್ದಾನೆ.

“ಮುಖ್ಯೋಪಾಧ್ಯಾಯ ಹಾಗೆ ಮಾಡಬಾರದಿತ್ತು. ಆದರೆ ಅವರು ‘ಪ್ರೀತಿ’ಯಿಂದ ಅದನ್ನು ಮಾಡಿದ್ದಾರೆ ಆದ್ದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಬಾಲಕನ ತಂದೆ ರಂಜಿತ್ ಯಾದವ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ಹೇಳಿದೆ.

ಮುಖ್ಯೋಪಾಧ್ಯಾಯ ಮನೋಜ್ ವಿಶ್ವಕರ್ಮ‌ನನ್ನು ಬಾಲನ್ಯಾಯ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದೆ.

“ಸೋನು ತುಂಬಾ ಕಿಡಿಗೇಡಿ…ಮಕ್ಕಳಿಗೆ ಮತ್ತು ಶಿಕ್ಷಕರಿಗೂ ಆತ ಕಚ್ಚುತ್ತಿದ್ದ. ಸೋನುವಿನ ತಂದೆ ನಮ್ಮೊಂದಿಗೆ ಆತನನ್ನು ತಿದ್ದುವಂತೆ ಕೇಳಿಕೊಂಡಿದ್ದರು. ಆದ್ದರಿಂದ ನಾವು ಅವನನ್ನು ಹೆದರಿಸಲು ಪ್ರಯತ್ನಿಸಿದ್ದೇವೆ. ಭಯಪಡಿಸುವುದಕ್ಕಾಗಿ ಮೇಲಿನ ಮಹಡಿಯಿಂದ ತಲೆಕೆಳಗಾಗಿ ನೇತಾಡಿಸಲಾಯಿತು” ಎಂದು ಹಾಕಲಾಯಿತು,” ಎಂದು ಬಂಧನಕ್ಕೆ ಒಳಗಾರಿರುವ ಮನೋಜ್ ವಿಶ್ವಕರ್ಮ ಹೇಳಿದ್ದಾನೆ.

ಇದನ್ನೂ ಓದಿ: ಶಾಲಾ ಮಕ್ಕಳಿಗೆ ಮಧ್ಯಹ್ನದ ಊಟದಲ್ಲಿ ‘ಫಾರ್ಟಿಫಿಲ್ಡ್‌’ ಅಕ್ಕಿ ಬಳಕೆಗೆ ಕೇಂದ್ರ ನಿರ್ದೇಶನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights