ಬಿಗ್ ಬಾಸ್ ಮನೆಯಲ್ಲಿ ಟಾರ್ಗೇಟ್ ಆದ್ರಾ ನಿರ್ಮಲಾ ಚೆನ್ನಪ್ಪ…?

ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಗಳ ಮಧ್ಯೆ ಇಂಟ್ರಸ್ಟಿಂಗ್ ಆಟ ಇನ್ನೇನು ಶುರುವಾಗುತ್ತಿದೆ. ಇಷ್ಟು ದಿನ ತಣ್ಣಗಿದ್ದ ಮನೆ ಕೊಂಚ ಮನಸ್ತಾಪಗಳಿಗೆ ದಾರಿ ಮಾಡಿಕೊಡುವತ್ತ ಕಾಣಿಸಿಕೊಳ್ಳುತ್ತಿದೆ.

ಹೌದು… ಬಿಗ್ ಬಾಸ್ ನ 17 ಸ್ಪರ್ಧಿಗಳು ಮೊದಲ ವಾರ ತಣ್ಣಗೇ ಇದ್ದರಾದರೂ ಸದ್ಯ ಮನಸ್ಥಾಪಗಳು ಶುರುವಾಗಿವೆ. ಈ ಸಣ್ಣ ಪುಟ್ಟ ಮನಸ್ತಾಪಗಳು ಜಗಳಗಳ ನಡುವೆಯೂ ಬಿಗ್ ಬಾಸ್ ಮನೆಯಲ್ಲಿ ಒಬ್ಬರನ್ನೇ ಟಾರ್ಗೇಟ್ ಮಾಡಲಾಗುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಎಂಟ್ರಿ ನೀಡಿದ ಸ್ಪರ್ಧಿಗಳಲ್ಲಿ ನಟಿ, ನಿರ್ದೇಶಕಿ, ನಿರ್ಮಾಪಕಿ ನಿರ್ಮಲಾ ಚೆನ್ನಪ್ಪ ಕೂಡ ಒಬ್ಬರು. ಇವರೇ ಸದ್ಯ ಬಿಗ್ ಬಾಸ್ ಸ್ಪರ್ಧಿಗಳ ಮೇನ್ ಟಾರ್ಗೇಟಾ ಅನ್ನೋ ಅನುಮಾನ ಶುರುವಾಗಿದೆ. ಆರಂಭದಲ್ಲಿ ಸ್ಪರ್ಧಿಗಳಿಗೆ ಅತೀ ವಿನಯ ತೋರಿಸುವವರಂತೆ ಕಾಣುತ್ತಿದ್ದ ನಿರ್ಮಾಲ ಒಬ್ಬೊಬ್ಬರೇ ಮಾತನಾಡುವುದು. ಒಬ್ಬರೇ ಇರುವುದು. ಎಲ್ಲರು ಮಲಗುವ ಹೊತ್ತಲ್ಲಿ ಸೀರೆ ತೊಟ್ಟು ರೆಡಿಯಾಗುವ ವರ್ತನೆಗಳನ್ನು ಸ್ಪರ್ಧಿಗಳು ಕಿರಿಕಿರಿ ಎಂದು ಭಾವಿಸುತ್ತಿದ್ದಾರೆ.

ಎಲ್ಲರೊಂದಿಗೆ ಬೆರೆಯುತ್ತಿಲ್ಲಾ ಎನ್ನುವ ಆರೋಪಗಳು ನಿರ್ಮಲಾ ಅವರ ಮೇಲಿವೆ. ಹೀಗಾಗಿ ಸ್ಪರ್ಧಿಗಳು ನಿರ್ಮಲಾ ಅವರನ್ನು ಟಾರ್ಗೇಟ್ ಮಾಡುತ್ತಿರುವಂತೆ ಕಾಣಿಸುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights