ರೈತರ ಹೋರಾಟಕ್ಕೆ ತಮಿಳು ನಟ ಕಾರ್ತಿ ಬೆಂಬಲ!

ಕಳೆದ 09 ದಿನಗಳಿಂದ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ತಮಿಳು ನಟ ಕಾರ್ತಿ ಬೆಂಬಲ ಸೂಚಿಸಿದ್ದು, ರೈತರ ಕೋರಿಕೆಯನ್ನು ಪರಿಶೀಲಿಸಿ ರೈತರು ಸ್ವಾತಂತ್ರ್ಯವಾಗಿ ಬೇಸಾಯ ಮಾಡಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು ಎಂದು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದಿನವೂ ನಮ್ಮ ಹಸಿವನ್ನು ನೀಗಿಸಲು ದುಡಿಯುವ ಭಾರತ ದೇಶದ ರೈತರು, ಸಹಸ್ರ ಸಂಖ್ಯೆಯಲ್ಲಿ ಕಠಿಣ ಮಂಜು, ಮಳೆ ಮತ್ತು ಕೊರೊನವನ್ನು ಲೆಕ್ಕಿಸದೆ ಹೋರಾಟ ನಡೆಸುತ್ತಿದ್ದಾರೆ. ‘ರೈತರು’ ಎನ್ನುವ ಒಂದೇ ಒಂದು ಗುರುತಿನಲ್ಲಿ ರಾಜಧಾನಿ ಡೆಲ್ಲಿಯಲ್ಲಿ ಕಳೆದ ಒಂದು ವಾರದಿಂದ ದೆಹಲಿಯ ಗಡಿಯಲ್ಲಿದ್ದಾರೆ.  ವ್ಯವಸಾಯದಲ್ಲಿ ಹೆಣ್ಣಿನ ಬೆಂಬಲ ಎನ್ನುವುದು ಬಹಳಷ್ಟಿದೆ. ಈ ಹೋರಾಟಕ್ಕೆ ಮಹಿಳೆಯರೂ ಸಹ ಇಳಿದು ಹೋರಾಡುತ್ತಾ ಇರುವುದು ಇತಿಹಾಸ ಕಾಣದ ಒಂದು ಹೊಸ ಹೋರಾಟವಾಗಿರೋದು ಆಶ್ಚರ್ಯವನ್ನು ಉಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಾಧ್ಯಮಗಳು ರೈತ ಹೋರಾಟವನ್ನು ತಿರುಚುತ್ತಿರುವುದೇಕೆ? ಇಲ್ಲಿವೆ ಅಸಲಿ ಕಾರಣಗಳು!

ದಿನವೂ ದುಡಿದರಷ್ಟೇ ಬದುಕು ಎನ್ನುವ ರೈತರೆಲ್ಲರೂ, ತಮ್ಮ ತಮ್ಮ ಹಸು, ಭೂಮಿ, ಬೆಳೆಯನ್ನು ಹಾಗೆ ಬಿಟ್ಟು ಬಂದು ಹೋರಾಟಕ್ಕೆ ಇಳಿದಿರುವುದು ನಮ್ಮ ಮನಸಿಗೆ ವೇದನೆಯನ್ನು ನೀಡುತ್ತಿದೆ. ನೀರಿನ ಕೊರತೆ, ಪ್ರಕೃತಿಯ ನಾನಾ ಅನಾವುತ, ಬೆಳೆಯುವ ಬೆಳೆಗೆ ಉತ್ತಮ ಬೆಲೆ ಇಲ್ಲ ಹೀಗೆ ಅನೇಕ ವಿಷಯಗಳಲ್ಲಿ ಈಗಾಗಲೇ ಕಷ್ಟದಲ್ಲಿ ಇರುವ ರೈತ ಸಮುದಾಯ, ಇತ್ತೀಚಿಗೆ ತಂದಿರುವ ಮೂರು ರೈತರಿಗೆ ಸಂಬಂಧಿಸಿದ ಕಾಯಿದೆಗಳಿಂದ ತಮ್ಮ ಜೀವನಕ್ಕೆ ಇನ್ನೂ ಕಷ್ಟವಾಗುವುದಾಗಿ ರೈತರು ಭಾವಿಸಿದ್ದರೆ. ತಮ್ಮ ಮಣ್ಣಿನ ಮೇಲೆ ತಮಗೆ ಇರುವ ಹಕ್ಕನ್ನು, ತಾವು ಬೆಳೆಯುವ ಬೆಳೆಗಳ ಮೇಲೆ ತಮ್ಮ ಅಧಿಕಾರವನ್ನು, ದೊಡ್ಡ ದೊಡ್ಡ ಶ್ರೀಮಂತರ ಕೈಗೆ ಈ ಕಾಯಿದೆಗಳ ಒಪ್ಪಿಸುತ್ತವೆ ಎಂದು ಅದರಿಂದಲೇ ಈ ಕಾಯಿದೆಗಳನ್ನು ವಾಪಾಸ್ ಪಡೆಯಬೇಕು ಎನ್ನುವುದೇ ಅವರ ಕೋರಿಕೆಯಾಗಿದೆ.

ದೊಡ್ಡ ರೈತ ಸಮೂದಯದ ಕೂಗಿಗೆ ಕಿವಿಕೊಟ್ಟು, ಅವರ ಕೋರಿಕೆಗಳನ್ನು ಪರಿಶೀಲಿಸಿ. ರೈತರು ಸ್ವಾತಂತ್ರ್ಯವಾಗಿ ಬೇಸಾಯ ಮಾಡಲು ಕೇಂದ್ರ ಸರ್ಕಾರ ಅನುವು ಮಾಡಿಕೊಡಬೇಕು ಎನ್ನುವುದೇ ಎಲ್ಲಾ ಪ್ರಜೆಗಳ ಆಶಯ. ಅದನ್ನು ಕೇಂದ್ರ ಸರ್ಕಾರ ತಡ ಮಾಡದೆ ನೆರವೇರಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ನಟ ಕಾರ್ತಿ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಕೃಷಿ ನೀತಿಗಳು ರದ್ದಾಗದಿದ್ದರೆ ಅಗತ್ಯ ಸರಕುಗಳ ಸಾಗಾಣಿಕೆ ಬಂದ್‌: ಸಾಗಾಣಿದಾರರ ಒಕ್ಕೂಟ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights