ತೈವಾನ್ ನಲ್ಲಿ ರೈಲು ಅಪಘಾತ : 36 ಜನ ಸಾವು – 72ಕ್ಕೂ ಹೆಚ್ಚು ಜನರಿಗೆ ಗಾಯ!

ಇಂದು ಬೆಳಂಬೆಳಿಗ್ಗೆ ತೈವಾನ್‌ನಲ್ಲಿ ರೈಲು ಹಳಿ ತಪ್ಪಿ ಸರಂಗಕ್ಕೆ ಡಿಕ್ಕಿ ಹೊಡೆದ ಪರಿಣಾಮ 36 ಜನರು ಸಾವನ್ನಪ್ಪಿದ್ದು ಹಲವಾರು ಜನರು ಗಾಯಗೊಂಡಿದ್ದಾರೆ.

ಈ ರೈಲು ಸುಮಾರು 350 ಜನರನ್ನು ಹೊತ್ತೊಯ್ಯುತ್ತಿತ್ತು. ದೀರ್ಘ ರಜಾ ವಾರಾಂತ್ಯದ ಆರಂಭದಲ್ಲಿ ಅನೇಕ ಪ್ರವಾಸಿಗರು ಮತ್ತು ಮನೆಗೆ ತೆರಳುವಂತವರು ಈ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಜನರನ್ನು ರಕ್ಷಿಸಲು ಅಗ್ನಿಶಾಮಕ ಇಲಾಖೆ ಮುಂದಾಗಿದೆ. 44 ಜನರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.

“ನಮ್ಮ ತುರ್ತು ಸೇವೆಗಳನ್ನು ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯನ್ನು ರಕ್ಷಿಸಲು ಮತ್ತು ಸಹಾಯ ಮಾಡಲು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ” ಎಂದು ಅಧ್ಯಕ್ಷ ತ್ಸೈ ಇಂಗ್-ವೆನ್ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.

ತೈವಾನ್ ಒಂದು ಪರ್ವತ ದ್ವೀಪವಾಗಿ. ಈ ಅಪಘಾತವು 2018ರ ನಂತರ ನಡೆದ ದ್ವೀಪದ ಭೀಕರ ರೈಲು ದುರಂತವಾಗಿದೆ.

ತೈವಾನ್ ಒಂದು ಪರ್ವತ ದ್ವೀಪವಾಗಿದ್ದು, 24 ದಶಲಕ್ಷ ಜನ ಉತ್ತರ ಮತ್ತು ಪಶ್ಚಿಮ ಕರಾವಳಿಯ ಸಮತಟ್ಟಾದ ಪ್ರದೇಶಗಳಲ್ಲಿ ವಾಸವಿದ್ದಾರೆ. ಲಘುವಾಗಿ ಜನಸಂಖ್ಯೆ ಹೊಂದಿರುವ ಈ ಪ್ರದೇಶ ಪ್ರವಾಸಿಗರಿಗೆ ಜನಪ್ರಿಯವಾಗಿದೆ.

72ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಅಲ್ಲದೆ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ಪ್ರಧಾನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದು ದುರಂತದ ಕುರಿತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 9.30ಕ್ಕೆ ಈ ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ರೈಲಿನ ಸುಮಾರು 5ಕ್ಕೂ ಹೆಚ್ಚು ಬೋಗಿಗಳು ಜಖಂ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights