ಮೈಸೂರಿನಲ್ಲಿ 03 ಚಿರತೆಗಳ ಅನುಮಾನಸ್ಪದ ಸಾವು; ಅರಣ್ಯ ಇಲಾಖೆಯಿಂದ ತನಿಖೆ!

ಮೇ 22 ರಂದು ಮೈಸೂರಿನಲ್ಲಿ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಚಿರತೆಗಳ ಸಾವಿನ ಬಗ್ಗೆ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಶನಿವಾರ ಬೆಳಗ್ಗೆ ಮೂರು ಚಿರತೆಗಳು ಸಾವನ್ನಪ್ಪಿದ್ದು, ಇವುಗಳ ಪೈಕಿ 4-5 ವರ್ಷದ ಒಂದು ಹೆಣ್ಣು ಚಿರತೆ ಹಾಗೂ 08ರಿಂದ 10 ತಿಂಗಳಿನ ಎರಡು ಚಿರತೆ ಮರಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಚಿರತೆಗಳ ಮೃತದೇಹ ದೊರೆತ ಜಾಗಕ್ಕೆ ಮೈಸೂರಿನ ಪೋಲಿಸ್ ಇಲಾಖೆಯ ಶ್ವಾನ ದಳ ಹಾಗೂ ಅರಣ್ಯ ಇಲಾಖೆಯ ಬಂಡೀಪುರದ ಶ್ವಾನವಾದ ರಾಣಾ ಮತ್ತು ಸಿಬ್ಬಂದಿಗಳನ್ನು ಕರೆಸಿ ಘಟನೆ ನಡೆದ ಸ್ಥಳದಲ್ಲಿ ತನಿಖೆ ನಡೆಸಲಾಗಿದೆ‌ ಅರಣ್ಯ ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

ಮೃತ ಚಿರತೆಗಳ ಸನಿಹದಲ್ಲಿ ಅರ್ಧ ತಿಂದು ಬಿಟ್ಟ ಬೀದಿನಾಯಿಯೊಂದರ ಮೃತದೇಹವೂ ಕೂಡ ದೊರೆತಿದ್ದು, ಆ ಮೃತ ನಾಯಿಯ ದೇಹದ ಮೇಲೆ ಕೀಟನಾಶಕ ಸಿಂಪಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಂಗಾಂಗಗಳ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳಿಸಿಕೊಡಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಚಿರತೆಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಅರಣ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ಕಪಾಳಮೋಕ್ಷ: ಜಿಲ್ಲಾಧಿಕಾರಿ ಅಮಾನತು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights