ಕಾಶ್ಮೀರದಲ್ಲಿ ರಕ್ತದೋಕುಳಿ ನಿಲ್ಲಿಸಿ; ಶಾಂತಿ ನೆಲೆಸಲು ಪಾಕ್‌ ಜೊತೆ ಕೇಂದ್ರ ಸರ್ಕಾರ ಮಾತಕತೆ ನಡೆಸಬೇಕು: ಮೆಹಬೂಬಾ ಮುಫ್ತಿ

ಕಾಶ್ಮೀರದಲ್ಲಿ ಇತ್ತೀಚಿಗೆ ಉಗ್ರರ ದಾಳಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ರಕ್ತ ಹಡಿಯುವುದನ್ನು ನಿಲ್ಲಿಸಿ, ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರ್ಕಾರವು ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸಬೇಕು ಎಂದು ಪಿಡಿಪಿ ನಾಯಕಿ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿರುವ ಕಾಶ್ಮೀರದಲ್ಲಿ ಹಿಂಸಾಚಾರ-ಸಾವು-ನೋವುಗಳನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಬೇಕು. ಅದಕ್ಕಾಗಿ ಸರಿಯಾದ ಮಾರ್ಗವನ್ನು ಕಂಡುಕೊಳ್ಳುವ ಮೂಲಕ, ಪಾಕಿಸ್ಥಾನ ಮತ್ತು ಕಾಶ್ಮೀರ ರಾಜ್ಯದ ಜನರೊಂದಿಗೆ ಮಾತುಕತೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿ ಚುಟುವಟಿಕೆಗಳಿಂದಾಗಿ ಪೊಲೀಸರು-ಯೋಧರು ಹುತಾತ್ಮರಾಗಿದ್ದಾರೆ. ಇದು ಅತ್ಯಂತ ದೊಡ್ಡ ಸಮಸ್ಯೆ. ಈ ಬಗ್ಗೆ ಕೇಂದ್ರ ಸರ್ಕಾರ ಚರ್ಚಿಸಬೇಕು. ಕಾಶ್ಮೀರದ ಜನರು ಶಾಂತಿಯಿಂದ ಬದುಕುವಂತಹ ವಾತಾವರಣ ಸೃಷ್ಟಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಕಾಶ್ಮೀರದ ಪೊಲೀಸರು ಮತ್ತು ಯೋಧರ ಮೇಲೆ ದಾಳಿಗಳು ನಡೆಯುತ್ತಿವೆ. ಇಂತಹ ದಾಳಿಗೆ ಪಾಕ್‌ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸುತ್ತಲೇ ಇರುವ ಬಿಜೆಪಿ, ತಮ್ಮದೇ ಸರ್ಕಾರವಿದ್ದರೂ ಪಾಕ್‌ ಜೊತೆಗೆ ಏಕೆ ಮಾತುಕತೆ ನಡೆಸಿಲ್ಲ. ಈಗಲಾದರೂ ಮಾತುಕತೆ ಆರಂಭಿಸಲಿ ಎಂದು ಎಮಹಬೂಬ್‌ ಮುಕ್ತಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಪದಾಧಿಕಾರಿ ಬಾಂಗ್ಲಾದೇಶಿಗ; ನಕಲಿ ದಾಖಲೆಗಳೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಾರೆ: ಅನಿಲ್ ದೇಶ್ಮುಖ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights