ಇನ್ನೂ ಹಳೆಯ ಸ್ಮಾರ್ಟ್ ಫೋನೇ ಬಳಸ್ತಾಯಿದಿರಾ..? ಹಾಗಾದ್ರೆ ವಾಟ್ಸಾಪ್‌ ಮರೆತುಬಿಡಿ..!

ಮನುಷ್ಯ ಏನನ್ನಾದರೂ ಬಿಟ್ಟು ಇರಬಲ್ಲ ಆದರೆ ಫೋನ್ ವಿಚಾರಕ್ಕೆ ಇದು ಸಾಧ್ಯವಿಲ್ಲ. ಅಷ್ಟೊಂದು ಮನುಷ್ಯ ಫೋನ್ ಗೆ ಒಗ್ಗಿಕೊಂಡಿದ್ದಾನೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ನಿರತರಾಗಿರುವ ಜನ ಹೊಸ ಹೊಸ ವಿಚಾರಗಳನ್ನು ಸಂಗ್ರಹಿಸುತ್ತಲೇ ಇರುತ್ತಾರೆ. ಒಳ್ಳೆಯ ಕೆಟ್ಟ ವಿಚಾರಗಳು ಬಹುತೇಕ ಜನರಿಗೆ ತಿಳಿಯುವುದು ಫೋನ್ ಮೂಲಕವೇ. ಆದರೀಗ ಹೊಸ ಹೊಸ ಟೆಕ್ನಾಲಜಿಯಿಂದ ಹಳೆಯ ಫೋನ್ ಗಳಿಗೆ ಉಳಿಗಾಲ ಇಲ್ಲವೆಂಬಂತಾಗಿದೆ. ಈ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹೌದು… ದಿನನಿತ್ಯ ವಾಟ್ಸಪ್ ನಲ್ಲೇ ನಿರತರಾಗಿರುವ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ವಿಷಯ ಏನೆಂದರೇ ಹಳೆಯ ಫೋನುಗಳು ಅಂದರೆ ಹಿಂದಿನ ಆವೃತ್ತಿಯ ಆಪರೇಟಿಂಗ್ ಸಿಸ್ಟಮ್ ಇರುವ ಸಾಧನಗಳಲ್ಲಿ ತನ್ನ ವ್ಯವಹಾರ ನಿಲ್ಲಿಸಲು ವಾಟ್ಸಾಪ್ ನಿರ್ಧರಿಸಿದೆ.

ಹಾಗಾಗಿ ನೀವು ಇನ್ನೂ ಹಳೆಯ ಆವೃತ್ತಿಯ ಫೂನುಗಳನ್ನೇ ಬಳಸುತ್ತಿದ್ದರೇ ಒಂದೋ ವಾಟ್ಸಾಪ್‌ ಮರೆತುಬಿಡಿ ಇಲ್ಲವೇ ಫೋನ್ ಮರೆತು ಹೊಸದನ್ನು ತೆಗೆದುಕೊಳ್ಳಿ.. ವಾಟ್ಸಾಪ್ ಪ್ರಕಟಣೆಯ ಪ್ರಕಾರ ಇನ್ನು ಮುದೆ ಐಓಎಸ್ 8 ಮೇಲೆ ಓಡುವ ಆಪಲ್ ಫೂನಗಳು ಹಾಗೂ ಆಂಡ್ರಾಯ್ಡ್ 4.0.3ಗಿಂತ ಹಳೆಯ ಆವೃತ್ತಿಯ ಓಎಸ್‌ ಸಾಧನಗಳಲ್ಲಿ ಸೇವೆ ಅಲಭ್ಯವಾಗಲಿದೆ.

ಅಂದರೆ ನೀವಿನ್ನೂ ಐಫೋನ್ 4S, 5, 5S, 6, ಹಾಗೂ 6S ಬಳಸುತ್ತಿದ್ದರೇ ಒಮದೋ ಅದರ ಓಎಸ್‌ ಉನ್ನತೀಕರಿಸಿಕೊಳ್ಳಬೇಕು ಇಲ್ಲವೇ ವಾಟ್ಸಾಪ್‌ಗೆ ಬೈ ಹೇಳಬೇಕು.ಇದೇ ರೀತಿ ಆಂಡ್ರಾಯ್ಡ್ ಮೊಬೈಲುಗಳಿಗೆ ವಿಷಯಕ್ಕೆ ಬಂದರೆ HTC ಡಿಸೈರ್, LG ಆಪ್ಟಿಮಸ್ ಬ್ಲಾಕ್, Motorola ಆಂಡ್ರಾಯ್ಡ್ ರೇಜರ್, ಮತ್ತು Samsung ಗೆಲಾಕ್ಸಿ S2ಗಳಲ್ಲಿ ವಾಟ್ಸಾಪ್‌ ಆಟ ನಡೆಯುವುದಿಲ್ಲ. ಹೊಸ ವರ್ಷಕ್ಕೆ ಹಳೆಯ ಫೋನುಗಳಿಗೆ ವಿದಾಯ ಹೇಳಿ ಹೊಸದಕ್ಕೆ ಬನ್ನಿ ಇಲ್ಲ ವ್ಯಾಟ್ಸಪ್ ಮರೆಯಿರಿ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights