ಸ್ವಾತಂತ್ರ್ಯದ ಬಗೆಗಿನ ತನ್ನ ಹೇಳಿಕೆ ತಪ್ಪು ಎಂದು ಸಾಬೀತಾದರೆ ಪದ್ಮಶ್ರೀ ಹಿಂದಿರುಗಿಸುತ್ತೇನೆ: ಕಂಗನಾ ರಣಾವತ್

‘ಸ್ವಾತಂತ್ರ್ಯ’ದ ಮೇಲಿನ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಂಗನಾ ರಣಾವತ್‌, 1947 ರಲ್ಲಿ ನಡೆದ ಘಟನೆಯ ಬಗ್ಗೆ ಯಾರಾದರೂ ತನಗೆ ತಿಳಿಹೇಳಿದರೆ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ಸಿದ್ಧ ಎಂದು ಹೇಳಿದ್ದಾರೆ.

1947ರಲ್ಲಿ ದೇಶಕ್ಕೆ ದೊರೆತ ಸ್ವಾತಂತ್ರ್ಯವನ್ನು “ಭಿಕ್” ಅಥವಾ ಭಿಕ್ಷೆ ಎಂದು ಕರೆದಿದ್ದ ಕಂಗನಾ, 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರತವು ನಿಜವಾದ ಸ್ವಾತಂತ್ರ್ಯವನ್ನು ಗಳಿಸಿತು ಎಂದು ಕಂಗನಾ ಹೇಳಿ, ವಿವಾದ ಸೃಷ್ಟಿಸಿಕೊಂಡಿದ್ದರು. ಕಂಗನಾ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

“1857 ರ ಸ್ವಾತಂತ್ರ್ಯಕ್ಕಾಗಿ ಮೊದಲ ಸಾಮೂಹಿಕ ಹೋರಾಟದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ… ಜೊತೆಗೆ ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಜಿ ಅವರಂತಹ ಶ್ರೇಷ್ಠರ ತ್ಯಾಗವನ್ನು ಸ್ಮರಿಸಲಾಗಿದೆ. 1857ರ ಹೋರಾಟ ನನಗೆ ಗೊತ್ತು. ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ. ಆ ಬಗ್ಗೆ ಯಾರಾದರೂ ನನ್ನ ಅರಿವಿಗೆ ತರಲು ಸಾಧ್ಯವಾದರೆ ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ… ದಯವಿಟ್ಟು ನನಗೆ ಸಹಾಯ ಮಾಡಿ” ಎಂದು ಕಂಗನಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ವಿವಾದಾತ್ಮಕ ಪೋಸ್ಟ್ ಹಾಕಿದ ಕಂಗನಾ ರನೌತ್ ಟ್ವಿಟ್ಟರ್ ಖಾತೆ ಅಮಾನತು!

ಮುಂದುವರೆದು ಬರೆದಿರುವ ಅವರು, “ನಾನು ಹುತಾತ್ಮ ರಾಣಿ ಲಕ್ಷ್ಮಿ ಬಾಯಿಯವರ ಕುರಿತ ಚಲನಚಿತ್ರದಲ್ಲಿ ಕೆಲಸ ಮಾಡಿದ್ದೇನೆ… 1857ರ ಸ್ವಾತಂತ್ರ್ಯದ ಮೊದಲ ಹೋರಾಟದ ಬಗ್ಗೆ ವ್ಯಾಪಕವಾಗಿ ಸಂಶೋಧನೆ ಮಾಡಿದ್ದೇನೆ… ರಾಷ್ಟ್ರೀಯತೆಯು ಬಲಪಂಥೀಯವಾದದೊಂದಿಗೆ ಏರಿತು… ಆದರೆ, ಅದು ಏಕೆ ಹಠಾತ್ ಕಾಣೆಯಾಯಿತು? ಮತ್ತು ಗಾಂಧಿಯವರು ಭಗತ್ ಸಿಂಗ್ ಸಾಯಲು ಏಕೆ ಬಿಟ್ಟರು… ಏಕೆ ನೇತಾಜಿ ಬೋಸ್ ಕೊಲ್ಲಲ್ಪಟ್ಟರು ಮತ್ತು ಅವರು ಗಾಂಧಿಯವರ ಬೆಂಬಲವನ್ನು ಎಂದಿಗೂ ಪಡೆಯಲಿಲ್ಲ? ಬಿಳಿಯ ವ್ಯಕ್ತಿ ಏಕೆ ವಿಭಜನೆಯ ಗೆರೆಯನ್ನು ಎಳೆದಿದ್ದಾರೆ” ಎಂದು ಪೋಸ್ಟ್‌ ಮಾಡಿದ್ದಾರೆ..

“ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ನಾನು 2014ರ ಬಗ್ಗೆ ನಿರ್ದಿಷ್ಟವಾಗಿ ಹೇಳಿದ್ದೇನೆಂದರೆ, “ಭೌತಿಕ ಸ್ವಾತಂತ್ರ್ಯ ನಮ್ಮಲ್ಲಿರಬಹುದು, ಆದರೆ 2014 ರಲ್ಲಿ ಭಾರತದ ಪ್ರಜ್ಞೆ ಮತ್ತು ಆತ್ಮಸಾಕ್ಷಿಯನ್ನು ಮುಕ್ತಗೊಳಿಸಲಾಯಿತು, ಸತ್ತ ನಾಗರಿಕತೆಯು ಜೀವಂತವಾಯಿತು ಮತ್ತು ಈಗ ಅದು ಘರ್ಜಿಸುತ್ತಿದೆ ಮತ್ತು ಎತ್ತರಕ್ಕೆ ಏರುತ್ತಿದೆ… ಮೊದಲ ಬಾರಿಗೆ, ಜನರು ಇಂಗ್ಲಿಷ್ ಬಾರದಿದ್ದಕ್ಕಾಗಿ ಮತ್ತು ಸಣ್ಣ ಪಟ್ಟಣಗಳಿಂದ ಬರುವ ಅಥವಾ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಳಸುವುದಕ್ಕಾಗಿ ನಮ್ಮನ್ನು ನಾಚಿಕೆಪಡಿಸಲು ಸಾಧ್ಯವಿಲ್ಲ… ಈ ನಿದರ್ಶನದಲ್ಲಿ ಸ್ಪಷ್ಟವಾಗಿದೆ… ಜೈ ಹಿಂದ್‌” ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

“ದೇಶದ್ರೋಹಿ ಮತ್ತು ಪ್ರಚೋದನಕಾರಿ” ಹೇಳಿಕೆಗಳನ್ನು ಕಂಗನಾ ನೀಡಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷವು ಕಂಗನಾ ವಿರುದ್ದ ಮುಂಬೈ ಪೊಲೀಸರಿಗೆ ದೂರು ನೀಡಿದೆ

ಇದನ್ನೂ ಓದಿ: ಉತ್ತರ ಪ್ರದೇಶ: ” ಒಂದು ಜಿಲ್ಲೆ-ಒಂದು ಉತ್ಪನ್ನ” ಯೋಜನೆಯ ಬ್ರಾಂಡ್ ಅಂಬಾಸಿಡರ್ ಆಗಿ ಕಂಗನಾ ರಣಾವತ್ ನೇಮಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights