ಊಹಾಪೋಹ: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿಯನ್ನು ತೊರೆಯಲಿದ್ದಾರೆ ರಂದೀಪ್ ಸುರ್ಜೇವಾಲಾ?

ಕಾಂಗ್ರೆಸ್ ನಾಯಕ ರಂದೀಪ್ ಸಿಂಗ್ ಸುರ್ಜೆವಾಲಾ ಅವರು ತಮಗೆ ನೀಡಲಾಗಿರುವ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ಹಲವಾರು ಊಹಾಪೋಹಗಳು ಸುದ್ದಿಯಾಗುತ್ತಿವೆ. ಅವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಕರ್ನಾಟಕ ಉಸ್ತುವಾರಿ ಬದಲಾಗಿ ತಮ್ಮ ತವರು ಹರಿಯಾಣದ ಉಸ್ತುವಾರಿ ನೀಡಬೇಕು ಎಂದು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸುರ್ಜೇವಾಲಾ ಅವರು ದೆಹಲಿಗೆ ಹತ್ತಿರವಿರುವ ರಾಜ್ಯದ ಉಸ್ತುವಾರಿಯನ್ನು ಹುಡುಕುತ್ತಿದ್ದಾರೆ. ಬೆಂಗಳೂರಿಗೆ ದೀರ್ಘ ವಿಮಾನಯಾನ ಇರುವುದರಿಂದ ಅವರು ಹತ್ತಿರದ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇದೆಲ್ಲವೂ ಊಹಾಪೋಹ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: JDS ಶಾಸಕ ಜಿಟಿ ದೇವೇಗೌಡ ಕಾಂಗ್ರೆಸ್‌ಗೆ ಸೇರುತ್ತಾರೆ?; ಜಿಟಿಡಿ ಹೇಳಿದ್ದೇನು?

ಸುರ್ಜೆವಾಲಾ ಅವರು ಆರೋಗ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ದೃಢಪಡಿಸಿವೆ. ಆದರೆ, ಸುರ್ಜೇವಾಲ ಅವರು ಹುದ್ದೆಯ ಬದಲಾವಣೆಯನ್ನು ಬಯಸಿದ್ದಾರೆಂದು ಅಥವಾ ಹೈಕಮಾಂಡ್ ತನ್ನ ಜವಾಬ್ದಾರಿಯನ್ನು ಬದಲಾಯಿಸಲು ನಿರ್ಧರಿಸಿದೆ ಎಂದು ದೃಢೀಕರಿಸಲು ಹಿಂದೇಟು ಹಾಕಿದೆ. ಸುರ್ಜೆವಾಲಾ ಅವರು ರಾಹುಲ್ ಗಾಂಧಿಗೆ ಹತ್ತಿರವಾಗಿದ್ದಾರೆ ಮತ್ತು ಈಗ ಐದು ವರ್ಷಗಳಿಂದ ಎಐಸಿಸಿಯಲ್ಲಿ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದರು.

ಹರಿಯಾಣದಲ್ಲಿ ಚುನಾವಣೆಗಳು 2024 ರಲ್ಲಿ ನಡೆಯಲಿವೆ ಮತ್ತು ಅವರು ತಮ್ಮ ರಾಜ್ಯದಲ್ಲಿ ದೃಢವಾದ ರಾಜಕೀಯ ಪ್ರಭಾವವನ್ನು ಹೊಂದಲು ಬಯಸಿದ್ದಾರೆ ಎಂದು ಊಹಿಸಲಾಗಿದೆ.

ಸುರ್ಜೆವಾಲಾ ಅವರನ್ನು ಸುಮಾರು 10 ತಿಂಗಳ ಹಿಂದೆ ಕರ್ನಾಟಕದ ಉಸ್ತುವಾರಿಯಾಗಿ ನೇಮಿಸಲಾಗಿತ್ತು.

ಇದನ್ನೂ ಓದಿ: ನನ್ನ ತಪ್ಪಿನಿಂದಾಗಿ ರಾಹುಲ್‌ಗಾಂಧಿ ಕೆಟ್ಟ ಟ್ರೋಲ್‌ಗೆ ಒಳಗಾದರು; ಕಾಂಗ್ರೆಸ್‌ ಐಟಿ ಸೆಲ್‌ ತೊರೆಯಲು ಕಾರಣ ಬಿಚ್ಚಿಟ್ಟ ರಮ್ಯಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights