ನೀರೊಳಗೆ ಟ್ಯಾಂಗೋ ಡ್ಯಾನ್ಸ್ : ಮೋಡಿ ಮಾಡಿದ ಸ್ಪ್ಯಾನಿಷ್ ನರ್ತಕಿ – ವಿಡಿಯೋ ವೈರಸ್!

ನೀರೋಳಗೆ ನೃತ್ಯ ಮಾಡುವುದನ್ನ ನೀವು ಎಂದಾದರೂ ನೋಡಿದ್ದೀರಾ? ನೋಡಿಲ್ಲ ಅಂದರೆ ಈ ವಿಡಿಯೋವನ್ನು ನೋಡಿ. ಸ್ಪ್ಯಾನಿಷ್ ನ ನರ್ತಕಿ ಅರಿಯಡ್ನಾ ಹಫೆಜ್ ನೀರೊಳಗೆ ಟ್ಯಾಂಗೋ ನೃತ್ಯದ ಅದ್ಭುತ ಪ್ರದರ್ಶನ ನೀಡಿದ್ದಾಳೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ನೃತ್ಯ ಪ್ರಿಯರ ಮೆಚ್ಚುಗೆ ಪಡೆದುಕೊಂಡಿದೆ.

ಅಂಡರ್ವಾಟರ್ ಟ್ಯಾಂಗೋ ನೃತ್ಯವನ್ನು ಮಾಡಲು 10 ಮೀಟರ್ ಆಳದ ನೀರೊಳಗೆ ಇಳಿದು ಶೂಟಿಂಗ್ ಮಾಡಲಾಗಿದೆ. ಸೊಲೈಲ್ ಅವರು ಉಸಿರು ಬಿಗಿ ಹಿಡಿದು ನೃತ್ಯ ಮಾಡಿದ್ದಾರೆ.

ಸೊಲೈಲ್ ಅವರ ಪೋಸ್ಟ್ ಪ್ರಕಾರ, ದೃಶ್ಯಗಳನ್ನು ಯಾವುದೇ ವಾಯು ಸಹಾಯವಿಲ್ಲದೆ ಚಿತ್ರೀಕರಿಸಲಾಗಿದೆ. ಕ್ಯಾಮರಾಮನ್ ಮತ್ತು ನರ್ತಕಿ ಚಿತ್ರೀಕರಣ ಪೂರ್ಣಗೊಳಿಸಲು 120 ಬಾರಿ ನೀರಿಗಿಳಿಯಬೇಕಾಯಿತು.

ವೀಡಿಯೊವನ್ನು ಪ್ರಪಂಚದೊಂದಿಗೆ ಹಂಚಿಕೊಂಡು ಸೊಲೈಲ್ , “ಕೆಲವೊಮ್ಮೆ, ಕಲೆ ಏನನ್ನಾದರೂ ಮಾಡುತ್ತದೆ ಏಕೆಂದರೆ ಅದು ಸುಂದರವಾಗಿದೆ. ನೀರು, ಬೆಳಕು ಮತ್ತು ನರ್ತಕಿ ಅರಿಯಡ್ನಾ ಅವರ ಪ್ರತಿಭೆಯ ಸಂಯೋಜನೆಯೊಂದಿಗೆ ಟ್ಯಾಂಗೋ ವೀಕ್ಷಕರಿಗೆ ನೀರೊಳಗಿನ ವಿಡಿಯೋಗ್ರಫಿ ನವೀನತೆಯನ್ನು ನೀಡುತ್ತದೆ” ಎಂದು ಬರೆದಿದ್ದಾರೆ.

ವೀಡಿಯೊ ವೈರಲ್ ಆದಾಗಿನಿಂದ 17,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 1,200 ಲೈಕ್‌ಗಳನ್ನು ಹೊಂದಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದೆ. ಇದು 290 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights