ಈ ಸೂಪರ್ಸ್ಟಾರ್ ಮೇಲೆ ಮೋಹಗೊಂಡಿದ್ದರಂತೆ ಬಾಲಿವುಡ್ ನಟಿ ಸೋನಾಕ್ಷಿ!

ಬಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ದಬಾಂಗ್ ಹುಡುಗಿ ಎಂದೇ ಖ್ಯಾತಿ ಪಡೆದಿರುವ ನಟಿ ಸೋನಾಕ್ಷಿ ಸಿನ್ಹಾ ಅವರು ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸೋನಾಕ್ಷಿ ಬಗ್ಗೆ ಒಂದು ವಿಚಾರ ಗೊತ್ತಾಗಲೇಬೇಕು. ಸೋನಾಕ್ಷಿ 13 ನೇ ವಯಸ್ಸಿನಲ್ಲಿ ಸೂಪರ್ಸ್ಟಾರ್ ಮೇಲೆ ದೊಡ್ಡ ಫ್ಯಾನ್ ಆಗಿದ್ರಂತೆ.

ಹಿರಿಯ ನಟ ಶತ್ರುಘನ್ ಸಿನ್ಹಾ ಅವರ ಪುತ್ರಿ ಸೋನಾಕ್ಷಿ 2010 ರಲ್ಲಿ ಬಿಡುಗಡೆಯಾದ ‘ದಬಾಂಗ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಮದುವೆಯ ಗಾಸಿಪ್‌ಗಳ ಬಗ್ಗೆ ಬಾಲಿವುಡ್ ಕಾರಿಡಾರ್‌ನಲ್ಲಿ ಸೋನಾಕ್ಷಿ ಯಾವಾಗಲೂ ಮಾತನಾಡುತ್ತಾರೆ. ಸೋನಾಕ್ಷಿ ಅವರು ಬಂಟಿ ಸಚ್‌ದೇವ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗುತ್ತೆ. ಇದರ ಜೊತೆಗೆ ಸಂದರ್ಶನವೊಂದರಲ್ಲಿ, ಸೋನಾಕ್ಷಿ ತನ್ನ ವರ ಹೇಗಿರಬೇಕು ಎಂದು ಹೇಳಿದ್ದಲ್ಲದೆ, ಆಕೆಯ ಹೃದಯ ಯಾವ ನಟನಿಗೆ ಅಂಟಿಕೊಂಡಿದೆ ಎಂದು ಸಹ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸೋನಾಕ್ಷಿ ಸಂದರ್ಶನದಲ್ಲಿ, ‘ನನ್ನ ಮುಂಬರುವ ಪತಿ ನನಗೆ ಜಾಗವನ್ನು ನೀಡಬೇಕು ಮತ್ತು ನನ್ನನ್ನು ಬಂಧನದಲ್ಲಿರಿಸಬಾರದು. ಸೋನಾಕ್ಷಿ ತಾನು ಬಯಸಿದವರನ್ನು ಮದುವೆಯಾಗುತ್ತೇನೆಂದು ಹೇಳಿದ್ದಳು, ಆದರೆ ತಪ್ಪುಕಂಡುಬಂದರೆ ಎಂದಿಗೂ ಮದುವೆಯಾಗುವುದಿಲ್ಲ’ ಎಂದಿದ್ದರು.

ನಂತರ ಯಾವ ನಟನ ಮೇಲೆ ಮೋಹವಿದೆ ಎಂದು ಸೋನಾಕ್ಷಿಯನ್ನು ಕೇಳಿದಾಗ, ಸೋನಾಕ್ಷಿ ಅವರು ಬಾಲಿವುಡ್ ಸೂಪರ್ ಹೀರೋ ಹೃತಿಕ್ ರೋಷನ್ ಎಂದು ಹೆಸರಿಸಿದ್ದಾರೆ. ‘ಕಹೋ ನಾ ಪ್ಯಾರ್ ಹೈ ಚಿತ್ರದಲ್ಲಿ ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗಿನಿಂದ ಹೃತಿಕ್ ಮೇಲೆ ಮೋಹವಿದೆ’ ಎಂದು ಸೋನಾಕ್ಷಿ ಹೇಳಿದ್ದಾರೆ. ಅಷ್ಟೇ ಅಲ್ಲ, ಹೃತಿಕ್ ರೋಷನ್ ಮೇಲೆ ಮೋಹವಿದ್ದ ಆ ಸಮಯದಲ್ಲಿ ನನಗೆ 13 ವರ್ಷ ಮತ್ತು ಹೃತಿಕ್‌ಗೆ 26 ವರ್ಷ ಇತ್ತು ಎಂದಿದ್ದಾರೆ. ‘ಕಹೋ ನಾ ಪ್ಯಾರ್ ಹೈ’ ಚಿತ್ರ 2000 ರಲ್ಲಿ ತೆರೆ ಕಂಡಿದೆ.

ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಮತ್ತು ನಟ ಸೊಹೈಲ್ ಖಾನ್ ಅವರ ಸೋದರ ಮಾವ ಬಂಟಿ ಸಚ್‌ದೇವ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರು ಬಹಳ ಸಮಯದಿಂದ ಸಂಬಂಧ ಹೊಂದಿದ್ದರು, ನಂತರ ಬೇರೆಯಾದರು. ಇದಲ್ಲದೆ ಸೋನಾ ಅವರ ಹೆಸರು ಅರ್ಜುನ್ ಕಪೂರ್, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅವರೊಂದಿಗೂ ತಳುಕು ಹಾಕಿಕೊಂಡಿದೆ.

ಸೋನಾಕ್ಷಿ ಕೊನೆಯ ಬಾರಿಗೆ ಸಲ್ಮಾನ್ ಖಾನ್ ಅವರೊಂದಿಗೆ ದಬಾಂಗ್ 3 ಚಿತ್ರದಲ್ಲಿ ಕಾಣಿಸಿಕೊಂಡರು. ಇದಲ್ಲದೆ, ಸೋನಾಕ್ಷಿ ರೌಡಿ ರಾಥೋಡ್, ಸನ್ ಆಫ್ ಸರ್ದಾರ್, ಲೂಟೆರಾ, ಬಾಸ್, ಹಾಲಿಡೇ, ತೇವಾರ್, ಮಿಷನ್ ಮಂಗಲ್, ಖಂಡಾನಿ ಶಫಖಾನಾ, ಆರ್ ರಾಜ್‌ಕುಮಾರ್ ಮತ್ತು ನೂರ್ ಮುಂತಾದ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights