ಬೈಕ್‌ನಲ್ಲಿ ನಿಮ್ಮ ಹಿಂಬದಿ ಸವಾರರು ಮಕ್ಕಳಾಗಿದ್ದರೆ ಕೆಲವು ನಿಯಮಗಳು ಕಡ್ಡಾಯ!

ದ್ವಿಚಕ್ರ ವಾಹನದಲ್ಲಿ ಮಕ್ಕಳು ಪಿಲಿಯನ್ ರೈಡರ್ (ಹಿಂಬದಿ ಸವಾರ) ಆಗಿದ್ದ ಸಮಯದಲ್ಲಿ ಸವಾರರು ಇನ್ನುಮುಂದೆ ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತ ಹೆದ್ದಾರಿ ಸಚಿವಾಲಯ ಹೇಳಿದೆ.

ಈ ಬಗ್ಗೆ ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ಕಳಿಸಿರುವ ಸಚಿವಾಲಯ, ಹಿಂಬದಿಯಲ್ಲಿ ಮಕ್ಕಳು ಕುಳಿತಿದ್ದ ಸಂದರ್ಭದಲ್ಲಿ ಬೈಕ್‌ ಸವಾರರು ವಾಹನವನ್ನು ಗಂಟೆಗೆ 40 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಓಡಿಸುವಂತಿಲ್ಲ ಎಂದು ಹೇಳಿದೆ.

“ಮಕ್ಕಳನ್ನು ಹಿಂದುಗಡೆ ಸೀಟಿನಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸುವ ಪಾಲಕರು ನಿರ್ಲಕ್ಷ್ಯದಿಂದ, ವೇಗವಾಗಿ ವಾಹನ ಚಲಾಯಿಸಿ ಅಪಾಯಕ್ಕೆ ಗುರಿಯಾದ ಹಲವು ನಿದರ್ಶನಗಳು ಗಮನಕ್ಕೆ ಬಂದಿವೆ. ಇದನ್ನು ನಿಯಂತ್ರಿಸಲು ಸರ್ಕಾರ ನೂತನ ನಿಯಮ ಜಾರಿಗೊಳಿಸಿದೆ” ಎಂದು ಹೆಚ್ಚುವರಿ ಸಾರಿಗೆ ಆಯುಕ್ತರಾದ ನರೇಂದ್ರ ಹೊಲ್ಕರ್ ತಿಳಿಸಿದ್ದಾರೆ.

ಇದುವರೆಗೂ ಮಕ್ಕಳು ಪಿಲಿಯನ್ ರೈಡರ್ ಗಳಾಗಿದ್ದಾಗ ಸವಾರರು ಮಾತ್ರವಲ್ಲದೆ ಅವರಿಗೂ ಹೆಲ್ಮೆಟ್ ಕಡ್ಡಾಯ ನಿಯಮವನ್ನು ಹೇರಲಾಗಿತ್ತು. ಈಗ ಅದರ ಜೊತೆಗೆ ಗಂಟೆಗೆ 40 ಕಿ.ಮೀ ವೇಗಮಿತಿ ಚಾಲನೆ ನಿಯಮ ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಲ್ಲಿ ಈ ನೂತನ ನಿಯಮ 4 ವರ್ಷದೊಳಗಿನ ಮಕ್ಕಳಿಗೆ ಅನ್ವಯ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಲಬುರ್ಗಿ ಬಸ್ ನಿಲ್ದಾಣದಲ್ಲಿ ಸರ್ಕಾರಿ ನೌಕರನ ಬರ್ಬರ ಹತ್ಯೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights