ಮದ್ಯಕ್ಕೆ ಬದಲಾಗಿ ಸ್ಯಾನಿಟೈಸರ್ ಸೇವಿಸಿ ಆರು ಜನ ದಾರುಣ ಸಾವು..!

ಮದ್ಯಕ್ಕೆ ಬದಲಿಯಾಗಿ ಸ್ಯಾನಿಟೈಸರ್ ಸೇವಿಸಿ ಆರು ಜನ ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ಸಂಭವಿಸಿದೆ.

ಶುಕ್ರವಾರ ಮತ್ತು ಶನಿವಾರ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ವಾನಿ ಪಟ್ಟಣದಲ್ಲಿ ಮದ್ಯಕ್ಕೆ ಬದಲಿಯಾಗಿ ಸ್ಯಾನಿಟೈಸರ್ ಸೇವಿಸಿ ಆರು ಜನರು ಸಾವನ್ನಪ್ಪಿದ್ದಾರೆ.

ಯವತ್ಮಾಲ್ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಭುಜ್ಬಾಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, “ವಾನಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಆರು ಜನರು ಮದ್ಯಕ್ಕೆ ಬದಲಿಯಾಗಿ ಸ್ಯಾನಿಟೈಸರ್ ಸೇವನೆಯಿಂದ ಸಾವನ್ನಪ್ಪಿದ್ದಾರೆ. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಮೂವರನ್ನು ವಾನಿಯ ಗ್ರಾಮೀಣ ಆಸ್ಪತ್ರೆಗೆ (ಆರ್‌ಹೆಚ್) ದಾಖಲಿಸಲಾದ ಬಳಿ ಸಾವನ್ನಪ್ಪಿದರೆ, ಇತರ ಮೂವರು ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಮೃತರನ್ನು ಸುನಿಲ್ ಧೆಂಗ್ಲೆ (32), ದತ್ತಾ ಲಂಜೆವಾರ್ (57), ಭಾರತ್ ರುಯಿಕರ್ (38), ಗಣೇಶ್ ಶೆಲಾರ್ (45), ಸಂತೋಷ್ ಮೆಹ್ರೆ (35) ಮತ್ತು ರಾಹುಲ್ ಪಾರ್ಥತ್ಕರ್ (35) ಎಂದು ಗುರುತಿಸಲಾಗಿದೆ. ಎಲ್ಲರೂ ವಾನಿಯ ನಿವಾಸಿಗಳು.

ಭುಜ್ಬಾಲ್ ಅವರು ಮಾತನಾಡಿ, “ಸಾವನ್ನಪ್ಪಿದ ಕಾರ್ಮಿಕರು ವಿವಿಧ ಕಂಪನಿಗಳಿಂದ ತಯಾರಿಸಿದ ಸ್ಯಾನಿಟೈಸರ್ ಬಾಟಲಿಗಳನ್ನು ಖರೀದಿಸಿ ಅದನ್ನು ಸೇವಿಸಿದ್ದಾರೆ. ಬಳಿಕ ವಾಂತಿ, ಹೊಟ್ಟೆ ನೋವಿನಿಂದಾಗಿ ಮೂವರನ್ನು ಶುಕ್ರವಾರ ವಾನಿ ಆರ್.ಎಚ್. ಪ್ರವೇಶದ ಮನೆಯಲ್ಲಿ ಸಾನನ್ನಪ್ಪಿದ್ದಾರೆ. ಇದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ ಇತರ ಮೂವರ ಬಗ್ಗೆಯೂ ನಾವು ತಿಳಿದುಕೊಂಡಿದ್ದೇವೆ, ಆದರೆ ಅವರ ಬಗ್ಗೆ ಸಂಬಂಧಿಕರು ವರದಿ ಮಾಡಿಲ್ಲ. ಅವರು ಈಗಾಗಲೇ ಅವರ ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ. ಆದ್ದರಿಂದ, ನಾವು ಎಲ್ಲಾ ಆರು ಪ್ರಕರಣಗಳಲ್ಲಿ ಆಕಸ್ಮಿಕ ಸಾವೆಂದು ದಾಖಲಿಸಿದ್ದೇವೆ ” ಎಂದಿದ್ದಾರೆ.

ಮಹಾರಾಷ್ಟ್ರವು ಕಟ್ಟುನಿಟ್ಟಾದ ಲಾಕ್ ಡೌನ್ ಅಡಿಯಲ್ಲಿರುವುದರಿಂದ, ಮದ್ಯ ಗ್ರಾಹಕರ ಕೈಗೆಟುಕುತ್ತಿಲ್ಲ. ಸ್ಯಾನಿಟೈಸರ್ ಹೆಚ್ಚಾಗಿ ಆಲ್ಕೋಹಾಲ್ ಅನ್ನು ಹೊಂದಿರುವುದರಿಂದ, ಮದ್ಯ ವ್ಯಸನಿಗಳು ಸ್ಯಾನಿಟೈಸರ್ ಅನ್ನು ಸೇವಿಸುತ್ತಿದ್ದಾರೆ.

“ಸ್ಯಾನಿಟೈಸರ್ ಸೇವಿಸುವುದನ್ನು ತಡೆಯಬೇಕೆಂದು ನಾವು ಜನರಿಗೆ ಮನವಿ ಮಾಡಿದ್ದೇವೆ. ಏಕೆಂದರೆ ಇದು ಮಾರಕವೆಂದು ಇತ್ತೀಚಿನ ಪ್ರಕರಣದಿಂದ ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ” ಎಂದು ಭುಜ್ಬಾಲ್ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights