ಪಾಕ್‌ ಸೇನೆಯಿಂದ ಸಿಂಧ್‌ ಡಿಜಿಪಿ ಅಪಹರಣ ವದಂತಿ; ಸೇನೆ ಮತ್ತು ಪೊಲೀಸರ ನಡುವೆ ತಿಕ್ಕಾಟ

ಪಾಕಿಸ್ಥಾನದ ರಾಜಕೀಯ ತಿಕ್ಕಾಗಿ ಹಿಂಸಾಚಾರಕ್ಕೆ ಇಳಿದಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಸಿಂಧ್ ಪೊಲೀಸ್ ಮುಖ್ಯಸ್ಥ ಮುಷ್ಟಾಕ್ ಅಹಮದ್ ಮುಹರ್ ಅವರನ್ನು ಪಾಕಿಸ್ಥಾನ ಸೇನೆ ಅಪಹರಿಸಿದೆ ಎಂಬ ವದಂತಿಗಳು ಕೇಳಿಬಂದಿದ್ದು, ಸೇನಾ ಮುಖ್ಯಸ್ಥ ಖ್ವಮಾರ್ ಜಾವೇದ್ ಬಾಜ್ವಾ ತನಿಖೆಗೆ ಆದೇಶಿಸಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಳಿಯ ಸಫ್ದರ್ ಅವನ್ ಅವರನ್ನು ಬಂಧಿಸುವಂತೆ ಕರಾಚಿ ಪೊಲೀಸರ ಮೇಲೆ ಒತ್ತಡ ಹೇರಲಾಗಿದ್ದು, ಅದಕ್ಕಾಗಿಯೇ ಸಿಂಧ್ ಪೊಲೀಸ್ ಮುಖ್ಯಸ್ಥರನ್ನು ಪಾಕಿಸ್ತಾನ ಸೇನಾ ಪಡೆಗಳು ಅಪಹರಿಸಿದ್ದಾರೆ ಎಂದು ದೂರಲಾಗಿದೆ. ಇದರಿಂದಾಗಿ ಪಾಕಿಸ್ಥಾನದ ಕರಾಚಿಯಲ್ಲಿ ಆಂತಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ (ನಿನ್ನೆ) ರಾತ್ರಿ ನಡೆದ ಹಿಂಸಾಚಾರದಲ್ಲಿ ಹತ್ತು ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿದೆ. ಸೇನೆ ಮತ್ತು ಪೊಲೀಸರ ನಡುವಿನ ಸಂಘರ್ಷದಿಂದ ನಾಗರಿಕ ಯುದ್ಧದಂತಹ ಬಿಕ್ಕಟ್ಟು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಪಾಕಿಸ್ಥಾನ ಸೇನಾ ಪಡೆ ಮುಖ್ಯಸ್ಥ ಖ್ವಮಾರ್ ಜಾವೇದ್ ಬಾಜ್ವಾ  ಎಂದು ಇಂಟರ್ ನ್ಯಾಶನಲ್ ಹೆರಾಲ್ಡ್ ವರದಿ ಮಾಡಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ವಿರುದ್ಧ ವಿರೋಧ ಪಕ್ಷಗಳು ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ್ದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಹಾಗೂ  ಪಾಕಿಸ್ತಾನ್ ಮುಸ್ಲಿಮ್ ಲೀಗ್ (ನವಾಜ್) ಪಕ್ಷದ ಹಿರಿಯ ನಾಯಕಿಯಾಗಿರುವ ಮರಿಯಮ್ ನವಾಜ್ ಅವರು, ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿಪಕ್ಷಗಳು ಉತ್ತರ ಕೊಡಿ ಎಂದು ಒತ್ತಾಯಿಸಿದಾಗ ನೀವು (ಇಮ್ರಾನ್) ಪಾಕ್ ಸೇನೆಯ ಹಿಂದೆ ಅಡಗಿಕೊಂಡಿರುತ್ತೀರಿ. ನೀವೊಬ್ಬ ಹೇಡಿ! ನೀವು ಸೇನೆಗೆ ಅಪಖ್ಯಾತಿ ತರುತ್ತಿದ್ದೀರಿ. ನಿಮ್ಮ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಸೇನೆಯನ್ನು ಬಳಸಿಕೊಳ್ಳುತ್ತಿದ್ದೀರಿ. ನಿಮಗೆ ಈ ಅಧಿಕಾರ ಕೊಟ್ಟವರು ಯಾರು? ಎಂದು ಮರಿಯಮ್ ಪ್ರಶ್ನಿಸಿದ್ದರು.

ಈ ಬೆನ್ನಲ್ಲೇ ಮರಿಯಮ್ ನವಾಜ್ ಪತಿ ಕ್ಯಾಪ್ಟನ್ ಸಫ್ದಾರ್ ಅವಾನ್ ಅವರನ್ನು ಕರಾಚಿ ಪೊಲೀಸರು ಸೋಮವಾರ ಬಂಧಿಸಿದ್ದರು. ಇದರಿಂದಾಗಿ ರಾಜಕೀಯ ತಿಕ್ಕಾಟ ಉದ್ಭವಿಸಿದ್ದು, ಅದು ಹಿಂಸಾಚಾರದ ರೂಪ ಪಡೆದುಕೊಂಡಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: ಯತ್ನಾಳ್‌ ಆಕ್ರೋಶ: ಕೋಪವನ್ನು ಹೊರಹಾಕುವುದಾ? ಬಿಎಸ್‌ವೈಗೆ ಸೆಡ್ಡು ಹೊಡೆದು ತನ್ನ ಉದ್ದೇಶವನ್ನು ಮುಂದಿಡುವುದಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights