ಕುಂಭಮೇಳದ ಕುರಿತ ದಿವ್ಯ ಮೌನ – ಮುಸ್ಲಿಮರೇ ಕೋವಿಡ್ ಹರಡುತ್ತಾರೆಂಬ ಭ್ರಮೆ!

ಸತ್ಯಕ್ಕಿಂತ ಹೆಚ್ಚು ಮುಕ್ತಿದಾಯಕವಾದುದು ಯಾವುದೂ ಇಲ್ಲ. ಅಲ್ಪಸಂಖ್ಯಾತ ಸಮುದಾಯವೊಂದು ತನ್ನ ಧಾರ್ಮಿಕ ಪದ್ಧತಿಗಳನ್ನು, ವಿಶೇಷವಾಗಿ ಕೋವಿಡ್ ಕಾಲದಲ್ಲಿ ಆಚರಿಸುವುದು ದುರುದ್ದೇಶದಿಂದ ಕೂಡಿರುತ್ತದೆ ಎಂದೇ ನಿರ್ಧರಿಸಿ ಬಿಡುವುದು ಇವತ್ತಿನ ಭಾರತದ ಸತ್ಯವಾಗಿದೆ.

ಕಳೆದ ವರ್ಷ ಮಾರ್ಚ್ ನಲ್ಲಿ ಭಾರತದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ಆರಂಭಗೊಳ್ಳುತ್ತಿದ್ದಾಗ ದಿಲ್ಲಿಯ ನಿಝಾಮುದ್ದೀನ್ ನ ಮರ್ಕಝ್ ನಲ್ಲಿ ಆಯೋಜಿಸಲಾಗಿದ್ದ ತಬ್ಲೀಗಿ ಜಮಾಅತ್ ನ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತ ಸರಕಾರದಿಂದ ವೀಸಾಗಳು ಮತ್ತು ಅನುಮತಿಯನ್ನು ಪಡೆದಿದ್ದ ವಿದೇಶಿ ಪ್ರಜೆಗಳು ಸೇರಿದಂತೆ 3,000ಕ್ಕೂ ಅಧಿಕ ಜನರು ಸೇರಿದ್ದಾಗ ಮುಸ್ಲಿಮರಿಗೆ ಜಿಹಾದಿಗಳು ಮತ್ತು ಕೋವಿಡ್ ನ ‘ಸೂಪರ್ ಸ್ಪ್ರೆಡರ್’ಗಳೆಂಬ ಹಣೆಪಟ್ಟಿಯನ್ನು ಅಂಟಿಸಲಾಗಿತ್ತು.

ಇನ್ನೊಂದು ಉದಾಹರಣೆ; ಈ ವರ್ಷದ ಜ.26ರಂದು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಸಂದರ್ಭದಲ್ಲಿ ಸಿಕ್ಖರು ದಿಲ್ಲಿಯ ಕೆಂಪುಕೋಟೆಯ ಮೇಲೆ ‘ನಿಶಾನ್ ಸಾಹಿಬ್’ ಧ್ವಜವನ್ನು ಹಾರಿಸಿದ್ದರು. ಪ್ರತಿಭಟನಾಕಾರರ ಆಯ್ದ ಗುಂಪೊಂದರ ಈ ಕೃತ್ಯವು ಕಾನೂನುಬಾಹಿರವಾಗಿತ್ತು. ಆದರೆ ಸಿಕ್ಖರಿಗಾಗಿ ತಮ್ಮದೇ ಸ್ವಂತ ದೇಶವನ್ನು ಸ್ಥಾಪಿಸಲು ಭಾರತವನ್ನು ಒಡೆಯಲು ಬಯಸಿದವರು ಎಂದು ಹಣೆಪಟ್ಟಿ ಕಟ್ಟಿ ಅವರಿಗೆ ತಕ್ಷಣವೇ ‘ಖಲಿಸ್ತಾನಿ ಭಯೋತ್ಪಾದಕರು ’ಎಂದು ಬ್ರಾಂಡ್ ಮಾಡಲಾಗಿತ್ತು.

ಇನ್ನು ಕ್ರೈಸ್ತರ ವಿಷಯಕ್ಕೆ ಬಂದರೆ ಅವರ ಮೇಲೆಯೂ ಧಾಳಿಗಳು ನಡೆದಿದ್ದವು. ತಮ್ಮ ಮಿಶನರಿ ಕಾರ್ಯಗಳ ಮೂಲಕ ಬಡ ಹಿಂದುಗಳು ಮತ್ತು ಬುಡಕಟ್ಟು ಜನರನ್ನು ಮತಾಂತರಕ್ಕಾಗಿ ಬಲಾತ್ಕರಿಸುತ್ತಿದ್ದಾರೆ ಎಂಬ ಆರೋಪದಲ್ಲಿ ಅವರನ್ನು ‘ರೈಸ್ ಬ್ಯಾಗ್ಗಳು’ಎಂದು ಬಣ್ಣಿಸಲಾಗಿತ್ತು. ಸಂವಿಧಾನವು ಖಾತರಿಪಡಿಸಿರುವ ಆರಾಧನಾ ಹಕ್ಕಿನ ರಕ್ಷಣೆಯ ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಎನ್ಜಿಒ ‘ಪ್ರಾಸಿಕ್ಯೂಷನ್ ರಿಲೀಫ್’ನ ವರದಿಯಂತೆ ಲಾಕ್ ಡೌನ್ ಸಂದರ್ಭದಲ್ಲಿ ಕ್ರೈಸ್ತರ ವಿರುದ್ಧದ ಅಪರಾಧಗಳು ಶೇ.40.87ರಷ್ಟು ಏರಿಕೆಯಾಗಿದ್ದವು. ಈಗ, ಹೊಸ ಪ್ರಕರಣಗಳ ಸಂಖ್ಯೆ ಹಣದುಬ್ಬರಕ್ಕಿಂತ ವೇಗವಾಗಿ ಹೆಚ್ಚುತ್ತಿರುವ ಸಾಂಕ್ರಾಮಿಕದ ಎರಡನೇ ಅಲೆಯ ಕಾಲದಲ್ಲಿ 11 ವರ್ಷಗಳ ಬಳಿಕ ತನ್ನ ಪೂರ್ಣ ವೈಭವದೊಂದಿಗೆ ಮಹಾಕುಂಭವು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಮಹಾಕುಂಭ್, ಕೋವಿಡ್ ಗೆ ಮಹಾ ಅವಕಾಶ:

ಹಿಂದಿನ ಸಲ 2010ರಲ್ಲಿ ಮಹಾಕುಂಭವು ನಡೆದಿತ್ತು. ನೀವು ಭಯಂಕರ ಆಶಾವಾದಿಗಳಾಗಿದ್ದಲ್ಲಿ, ಲಕ್ಷಾಂತರ ಜನರು ಭಕ್ತಿಯಿಂದ ಸಮಾವೇಶಗೊಳ್ಳುವ ಮಹಾಕುಂಭವನ್ನು ನಡೆಸುವುದು ಕಳೆದೊಂದು ವರ್ಷದಿಂದ ವಿಶ್ವವು ಎದುರಿಸುತ್ತಿರುವ ಆಪತ್ತಿನ ಮತ್ತು ಹತಾಶ ಸ್ಥಿತಿಯಿಂದ ಹೊರಬರಲು ಇದೊಂದು ಒಳ್ಳೆಯ ಅವಕಾಶ ಎಂಬಂತೆ ಕಂಡುಬರಬಹುದು. ಆದರೆ ನೀವು ತತ್ಯಾಧಾರಿತವಾಗಿ ನೋಡುವವರಾದರೆ 1,68,912 ಕೆಂಪು ಬಾವುಟಗಳನ್ನೂ ನೋಡುತ್ತೀರಿ. ಇದು ಸೋಮವಾರ ಒಂದೇ ದಿನ ವರದಿಯಾಗಿರುವ ದೇಶದಲ್ಲಿಯ ಹೊಸ ಕೊರೋನವೈರಸ್ ಪ್ರಕರಣಗಳ ಸಂಖ್ಯೆಯಾಗಿದ್ದು, ಸಾಂಕ್ರಾಮಿಕವು ಆರಂಭಗೊಂಡಾಗಿನಿಂದ ದೈನಂದಿನ ಏರಿಕೆಯ ಸಾರ್ವಕಾಲಿಕ ದಾಖಲೆಯಾಗಿದೆ ಮತ್ತು ಏರಿಕೆಯ ಈ ಪ್ರಮಾಣ ಸದ್ಯೋಭವಿಷ್ಯದಲ್ಲಿ ಕಡಿಮೆಯಾಗುವಂತೆ ಕಂಡುಬರುತ್ತಿಲ್ಲ. ನಾವು ಎರಡನೇ ಅಲೆಯ ಸುಳಿಯಲ್ಲಿದ್ದೇವೆ.

ಪ್ರಯಾಗರಾಜ್ ಅರ್ಧ ಕುಂಭಮೇಳ: ಯುಪಿ ಪ್ರವಾಸೋದ್ಯಮಕ್ಕೆ 1.2 ಲಕ್ಷ ಕೋಟಿ ರೂ. ಆದಾಯ ಸಂಗ್ರಹ  · ವಾರ್ತಾ ಮಿತ್ರ

ಆದರೆ ಇದು ಕೇವಲ ಸಂಖ್ಯೆಗಳ ಕುರಿತ ವಿಷಯ ಅಲ್ಲ. ಇದು ಮಾಧ್ಯಮಗಳ ವರದಿಗಾರಿಕೆಯಲ್ಲಿ ಮತ್ತು ಅಲ್ಪಸಂಖ್ಯಾತರಿಗೆ ಹೋಲಿಸಿದರೆ ಇಂತಹ ಧಾರ್ಮಿಕ ಸಮಾವೇಶಗಳಿಗೆ ಸರಕಾರದ ಅನುಮತಿಗಳಲ್ಲಿ ನಿಚ್ಚಳ ತಾರತಮ್ಯದ ಕುರಿತಾಗಿದೆ. ಶುಕ್ರವಾರ ಮಥುರಾದ ಬಾಂಕೆ ಬಿಹಾರಿ ದೇವಸ್ಥಾನದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಲು ಅಧಿಕಾರಿಗಳು ಅವಕಾಶ ನೀಡಿದ್ದರು ಮತ್ತು ಈ ಸಂದರ್ಭದಲ್ಲಿ ಕೋವಿಡ್ ನಿಯಮಗಳೆಲ್ಲ ಗಾಳಿಯಲ್ಲಿ ತೂರಿಹೋಗಿದ್ದವು. ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ದೇವಸ್ಥಾನಗಳು ಮತ್ತು ಧರ್ಮಶಾಲೆಗಳಿಗೆ ಸೂಚಿಸಲಾಗಿದೆ ಎಂದು ಮಥುರಾ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿಗಳು ಹೇಳಿಕೊಂಡಿದ್ದಾರಾದರೂ ದೇವಸ್ಥಾನದಿಂದ ಹೊರಬಂದಿರುವ ವೀಡಿಯೋಗಳು ಬೇರೆಯದ್ದನ್ನೇ ಹೇಳುತ್ತಿವೆ.

ತಬ್ಲೀಗಿ ಜಮಾಅತ್ ಪ್ರಹಸನದ ಸಂದರ್ಭ ಗಂಟಲು ಹರಿಯುವಂತೆ ಬೊಬ್ಬಿರಿದಿದ್ದ ಮಾಧ್ಯಮ ಪ್ರತಿನಿಧಿಗಳು ಈಗ ತಮ್ಮ ಧ್ವನಿಗಳನ್ನೇ ಕಳೆದುಕೊಂಡಿರುವಂತಿದೆ. ಕೇವಲ ಮುಸ್ಲಿಮರು ಕೊರೋನ ವೈರಸ್ ಹರಡುತ್ತಾರೆ ಮತ್ತು ಇತರ ಯಾವುದೇ ಧಾರ್ಮಿಕ ಸಮಾವೇಶಗಳು ಶಿಷ್ಟಾಚಾರಗಳನ್ನು ಗಾಳಿಗೆ ತೂರಿದ್ದರೂ ಅವು ಕೋವಿಡ್ ಮುಕ್ತವಾಗಿರುವಂತೆ ಕಂಡುಬರುತ್ತಿದೆ.

Photos: Kumbh Mela 2021 In Haridwar | ಚಿತ್ರಗಳು: ಹರಿದ್ವಾರ ಕುಂಭಮೇಳ 2021 -  Oneindia Kannada

ಸತ್ಯ ಹೇಳಬೇಕೆಂದರೆ, ಯಾವುದೇ ಧಾರ್ಮಿಕ ಪದ್ಧತಿಯ ಆಚರಣೆ ಸಮಸ್ಯಾತ್ಮಕವಲ್ಲ. ಜನರಿಗೆ ಈ ಸಾಂಕ್ರಾಮಿಕದ ಬಗ್ಗೆ ಮತ್ತು ಅದು ಒಡ್ಡಿರುವ ಅಪಾಯಗಳ ಬಗ್ಗೆ ಗೊತ್ತಿದೆ. ಹೀಗಿದ್ದರೂ ಅವರು ಕೋವಿಡ್ ಶಿಷ್ಟಾಚಾರಗಳ ಉಲ್ಲಂಘನೆಯನ್ನು ಆಯ್ಕೆ ಮಾಡಿಕೊಂಡರೆ ಅದು ಅವರ ಸಂವೇದನಾಶೂನ್ಯತೆಯನ್ನು ತೋರಿಸುತ್ತದೆ. ಬಹುಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಹೋಲಿಸಿದರೆ ಅಲ್ಪಸಂಖ್ಯಾತರ ವಿಷಯದಲ್ಲಿ ಕೈಗೊಳ್ಳಲಾದ ಆಯ್ದ ದಂಡನಾ ಕ್ರಮಗಳಲ್ಲಿ ನಿಜವಾದ ಸಮಸ್ಯೆ ಅಡಗಿದೆ. ಆಮದು ವೈರಸ್ ಬಗ್ಗೆ ಭಾರತಕ್ಕೆ ಹೆಚ್ಚಿನ ಅರಿವು ಇಲ್ಲದಿದ್ದ ಮತ್ತು ಎಲ್ಲ ಧಾರ್ಮಿಕ ಸ್ಥಳಗಳು ಎಂದಿನಂತೆ ಕಾರ್ಯಾಚರಿಸುತ್ತಿದ್ದ ಸಮಯದಲ್ಲಿ ತಬ್ಲೀಗಿ ಜಮಾಅತ್ ಸದಸ್ಯರ ವಿರುದ್ಧ ಐಪಿಸಿ, ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ,ಅಷ್ಟೇ ಏಕೆ…ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ)ಯಡಿಯೂ ಪ್ರಕರಣಗಳನ್ನು ಜಡಿದಿದ್ದರೆ, ಈಗ 1.7 ಲಕ್ಷ ಸಾವುಗಳ ಬಳಿಕ ಇತರ ಸಮುದಾಯಗಳ ಇಂತಹುದೇ ಧಾರ್ಮಿಕ ಸಮಾವೇಶಗಳ ಮೇಲೆ ಯಾವುದೇ ಸರಕಾರಿ ಕ್ರಮ ಇಲ್ಲದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.

ಮಸೀದಿಗಳಲ್ಲಿ ಕೋವಿಡ್ – ದೇವಸ್ಥಾನಗಳಲ್ಲಿ ಶ್ರದ್ಧೆ

ಮಾಧ್ಯಮಗಳು ಸಾಮಾನ್ಯವಾಗಿಸಿಬಿಟ್ಟಿರುವ, ಕ್ಷಮಿಸಲಾಗದ ಮತ್ತು ಎಗ್ಗಿಲ್ಲದ ಭೇದಾತ್ಮಕ ನಿಲುವಿನಲ್ಲಿಯೂ ಸಮಸ್ಯೆ ಅಡಗಿದೆ. ಜನರಿಂದ ತುಂಬಿರುವ ಮಸೀದಿಯಿಂದ ವರದಿ ಮಾಡುವುದು ಜನರಿಂದ ತುಂಬಿರುವ ದೇವಸ್ಥಾನದಿಂದ ವರದಿ ಮಾಡುವುದಕ್ಕಿಂತ ತುಂಬ ಭಿನ್ನವಾಗಿದೆ. ಎರಡೂ ತಪ್ಪಾಗಿದ್ದರೂ, ಒಂದನ್ನು ಭಕ್ತಿ-ಶ್ರದ್ಧೆಯ ವಿಷಯವೆಂದು ತೋರಿಸಲಾಗಿದ್ದರೆ ಇನ್ನೊಂದನ್ನು ಭಯೋತ್ಪಾದನೆಯೆಂದು ಬಿಂಬಿಸಲಾಗಿದೆ. ಇದೇನೂ ಹೊಸದಲ್ಲ, ಆದರೆ ನಮಗೆ ಸಾಧ್ಯವಿರುವವರೆಗೆ ಈ ಬಗ್ಗೆ ನಾವು ಮಾತನಾಡುತ್ತಲೇ ಇರಬೇಕು.
ಮುಸ್ಲಿಮರು ಯಾವುದೇ ಒಳ್ಳೆಯ ಕೆಲಸವನ್ನು ಮಾಡುವುದಿಲ್ಲ ಎಂಬಂತೆ ಕಂಡುಬರುತ್ತಿದೆ ಎಂಬ ಮತಾಂಧ ಪರಿಕಲ್ಪನೆಯನ್ನು ನಮ್ಮ ಟಿವಿ ಪರದೆಗಳಲ್ಲಿ ಮುಕ್ತವಾಗಿ ತೋರಿಸಲಾಗಿತ್ತು. ಮುಸ್ಲಿಂ ಯುಪಿಎಸ್ಸಿ ಸ್ಪರ್ಧಾಕಾಂಕ್ಷಿಗಳನ್ನು ಅಧಿಕಾರಿಶಾಹಿಯನ್ನು ಪ್ರವೇಶಿಸಿ ‘ಪವಿತ್ರ ಯುದ್ಧ’ವನ್ನು ಸಾರಲು ಪ್ರಯತ್ನಿಸುತ್ತಿರುವ ಜಿಹಾದಿಗಳು ಎಂದು ಬಣ್ಣಿಸಲಾಗುತ್ತಿದೆ. ಮತಾಂಧತೆಯ ಇಂತಹ ಪ್ರತಿಪಾದಕರ ವಿರುದ್ಧ ಯಾವುದೇ ಕಾನೂನು ಕ್ರಮವಿಲ್ಲ.

Tableeghi Jamaat's 24 Members Killed In Bus Accident

ತನ್ನ ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದರ ವ್ಯಂಗ್ಯಚಿತ್ರವನ್ನು ತೋರಿಸಿದ್ದಕಾಗಿ ಫ್ರೆಂಚ್ ಶಾಲಾ ಶಿಕ್ಷಕ ಸ್ಯಾಮ್ಯುಯೆಲ್ ಪ್ಯಾಟಿ ಅವರನ್ನು ವ್ಯಕ್ತಿಯೋರ್ವ ಕೊಲೆ ಮಾಡಿದಾಗ ಹೆಚ್ಚಿನ ಮುಸ್ಲಿಮರು ಈ ಬರ್ಬರ ಕೃತ್ಯವನ್ನು ನಿಸ್ಸಂದಿಗ್ಧವಾಗಿ ಖಂಡಿಸಿದ್ದರು, ಆದರೆ ಅವಮಾನಕಾರಿ ವ್ಯಂಗ್ಯಚಿತ್ರಕ್ಕಾಗಿ ತಮ್ಮ ಅಸಂತೋಷವನ್ನೂ ವ್ಯಕ್ತಪಡಿಸಿದ್ದರು. ಈ ವ್ಯಂಗ್ಯಚಿತ್ರದ ಬಗ್ಗೆ ನಾನೂ ನನ್ನ ಅಸಂತೋಷವನ್ನು ವ್ಯಕ್ತಪಡಿಸಿದ್ದೆ. ಆದರೆ ಹಾಗೆ ಮಾಡಿದ್ದಕ್ಕಾಗಿ ನಮ್ಮನ್ನು ತೀವ್ರವಾದಿಗಳು ಎಂದು ಕರೆಯಲಾಗಿತ್ತು. ಇದು ‘ಪದ್ಮಾವತಿ’ಯಂತಹ ಚಲನಚಿತ್ರವೊಂದು (ಕೆಲವರು ಪದ್ಮಾವತಿಯನ್ನು ದೇವಿ ಎಂದು ಕಾಣುತ್ತಾರೆ) ರಾಣಿಯನ್ನು ಬಿಂಬಿಸಿದ್ದ ರೀತಿಗಾಗಿ ಜನರು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವ ಘಟನೆ ದೇಶದಲ್ಲಿ ನಡೆದಿತ್ತು. ವ್ಯಂಗ್ಯಚಿತ್ರದ ಕುರಿತು ಅಸಹಿಷ್ಣುತೆ ಪ್ರದರ್ಶಿಸಿದ್ದಕ್ಕಾಗಿ (ಇದು ತಮ್ಮ ಅಭಿವ್ಯಕ್ತಿ ಸ್ವಾತಂತ್ರ ಎಂದು ಅವರು ಹೇಳಿದ್ದರು) ಮುಸ್ಲಿಮರನ್ನು ಹಿಗ್ಗಾಮುಗ್ಗ ಟೀಕಿಸಿದವರು ಎಂ.ಎಫ್.ಹುಸೇನರ ಹಿಂದು ದೇವತೆಗಳ ನಗ್ನ ಕಲಾಕೃತಿಗಳಿಂದ ಭಾರೀ ಮನನೊಂದುಕೊಂಡಿದ್ದರು. ಹುಸೇನ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು,ಇದೇ ಕಾರಣದಿಂದ ಅವರು ದೇಶಭ್ರಷ್ಟರಾಗಿದ್ದರು.

ನಿಜಕ್ಕೂ ಸತ್ಯಕ್ಕಿಂತ ಹೆಚ್ಚು ಮುಕ್ತಿದಾಯಕವಾದುದು ಯಾವುದೂ ಇಲ್ಲ. ಭಾರತವು ಆಳವಾಗಿ ಊರಿಕೊಂಡಿರುವ ಕೋಮುವಾದದ ಕೋರೆಹಲ್ಲುಗಳನ್ನು ಹೊಂದಿದೆ ಎನ್ನುವುದು ಸತ್ಯವಾಗಿದೆ. ಕೋಮುವಾದವು ಹೆಚ್ಚೇನು ಗಮನ ನೀಡಬೇಕಾಗಿಲ್ಲದ ಸಣ್ಣ ಪಟ್ಟಿಗಳಲ್ಲಿಯ ಸಂಕುಚಿತ ಮನಸ್ಸಿನ ವಿದ್ಯಮಾನ ಎಂದು ಈಗಲೂ ನಂಬಿರುವವರನ್ನು ಇದು ಎಚ್ಚರಿಸಬೇಕಿದೆ. ಅದು ಈಗ ನಮ್ಮ ದೇಶದ ಆತ್ಮವನ್ನೇ ಬದಲಿಸುತ್ತಿರುವ ಭಾರತದಾದ್ಯಂತದ ನಗರಗಳಲ್ಲಿಯ ವಿದ್ಯಮಾನವಾಗಿದೆ.

(ಲೇಖನದಲ್ಲಿಯ ಅಭಿಪ್ರಾಯಗಳು ಲೇಖಕರ ವೈಯಕ್ತಿಕ ಅಭಿಪ್ರಾಯಗಳಾಗಿವೆ)

– ಝೈನಬ್ ಸಿಕಂದರ್
ರಾಜಕೀಯ ವಿಶ್ಲೇಷಕಿ


ಇದನ್ನೂ ಓದಿ: ಉದ್ಯೋಗ ಕೇಳಿದ್ರೆ ಮೋದಿ ಪಕೋಡ ಮಾರಿ ಅಂತಾರೆ; ಸಚಿವರು ಮಂಚ ಹತ್ತಿ ಅಂತಾರೆ: BJP ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights