ಠೇವಣಿ ಕಳೆದುಕೊಳ್ಳುವ ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟುಕೊಡಬೇಕೇ?: ಲಾಲೂ

ಬಿಹಾರದಲ್ಲಿ ಕಾಂಗ್ರೆಸ್‌ ಪಕ್ಷವು ಆರ್‌ಜೆಡಿ ಜೊತೆಗಿನ ಮೈತ್ರಿಯನ್ನು ತೊರೆದಿದ್ದು, ಮುಂದಿನ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್. “ಠೇವಣಿಯನ್ನೂ ಉಳಿಸಿಕೊಳ್ಳಲು ಆಗದ ಕಾಂಗ್ರೆಸ್‌ಗೆ ಒಂದು ವಿಧಾನಸಭಾ ಉಪಚುನಾವಣೆಯನ್ನು ಬಿಟ್ಟು ಕೊಡಬೇಕಿತ್ತೇ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಾಂಗ್ರೆಸ್‌ನ ಮಹಾಮೈತ್ರಿ ಎಂದರೇನು?” ಎಂದು ಲಾಲು ಪ್ರಸಾದ್ ಪ್ರಶ್ನಿಸಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕ್ಷೇತ್ರವನ್ನು ಬಿಟ್ಟುಕೊಡಲು RJD ನಿರಾಕರಿಸಿದ್ದಕ್ಕಾಗಿ ತಮ್ಮ ಮೈತ್ರಿಯನ್ನು ಕಾಂಗ್ರೆಸ್‌ ಮುರಿದುಕೊಂಡಿದ್ದರ ಬಗ್ಗೆ ಮಾತನಾಡುತ್ತಿದ್ದರು.

“ತನ್ನ ಠೇವಣಿಯನ್ನೂ ಉಳಿಸಿಕೊಳ್ಳಲು ಆಗದ ಕಾಂಗ್ರೆಸ್‌ಗೆ ಸೋಲಲು ಬೇಕಾಗಿ ನಾವು ಒಂದು ಸ್ಥಾನವನ್ನು ಬಿಟ್ಟುಕೊಡಬೇಕಿತ್ತೇ?” ಎಂದು ಅವರು ತಿರಸ್ಕಾರದಿಂದ ಹೇಳಿದ್ದಾರೆ. ಕಳೆದ ವಿಧಾನಸಭಾ ಚುಣಾವಣೆಯಲ್ಲಿ ಆರ್‌ಜೆಡಿಯ ಉತ್ತಮವಾಗಿ ಪ್ರದರ್ಶನ ನೀಡಿದ್ದು, ಆದರೆ ಮತ್ರಿ ಪಕ್ಷವಾದ ಕಾಂಗ್ರೆಸ್‌ ಕಳಪೆಯಾಗಿ ಪ್ರದರ್ಶನ ನೀಡಿತ್ತು. ಈ ಹಿನ್ನಲೆಯಲ್ಲಿ ಅವರು ಕಾಂಗ್ರೆಸ್‌ ಅನ್ನು ಕಾಲೆಳೆದಿದ್ದಾರೆ. ಮಹಾಮೈತ್ರಿಯನ್ನು ಮುರಿದು ಆರ್‌ಜೆಡಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದ ಬಿಹಾರ ಕಾಂಗ್ರೆಸ್‌ ನಾಯಕ ಚರಣ್ ದಾಸ್‌ ಅವರನ್ನು ಲಾಲು ಪ್ರಸಾದ್ ಲೇವಡಿ ಮಾಡಿದ್ದಾರೆ.

ಇದನ್ನೂ ಓದಿ: ಬಿಹಾರ: ಕನ್ಹಯ್ಯಾ, ಜಿಗ್ನೇಶ್, ಹಾರ್ದಿಕ್ ಮೇಲೆ ಕಾಂಗ್ರೆಸ್‌ಗೆ ಬಲವಾದ ನಂಬಿಕೆ; ಆರ್‌ಜೆಡಿ ಜೊತೆ ಮೈತ್ರಿ ಕಟ್!

ರಾಜ್ಯದಲ್ಲಿ ಆರ್‌ಜೆಡಿ ನೇತೃತ್ವದ ಮೈತ್ರಿಕೂಟದೊಂದಿಗೆ ಕಾಂಗ್ರೆಸ್ ಇನ್ನು ಮುಂದೆ ಇರುವುದುಲ್ಲ ಎಂದು ಚರಣ್‌ ದಾಸ್ ಇತ್ತೀಚೆಗೆ ಹೇಳಿದ್ದರು ಮತ್ತು ಆರ್‌ಜೆಡಿ ಬಿಜೆಪಿಯೊಂದಿಗೆ ತೆರೆಮರೆಯಲ್ಲಿ ಸಂಬಂಧ ಹೊಂದಿದೆ ಎಂದು ಆರೋಪಿಸಿದ್ದರು.

ಅಕ್ಟೋಬರ್ 30 ರಂದು ನಡೆಯಲಿರುವ ಎರಡು ಕ್ಷೇತ್ರಗಳ ಉಪಚುನಾವಣೆಗಳ ಕ್ಷೇತ್ರ ಹಂಚಿಕೆಯಲ್ಲಿ ಮಹಾಮೈತ್ರಿಯ ಪ್ರಮುಖ ಪಕ್ಷಗಳ ನಡುವೆ ಬಿರುಕು ಮೂಡಿದೆ. ಕಾಂಗ್ರೆಸ್‌ ಮೈತ್ರಿಯಿಂದ ಹೊರ ಬಂದು ಸ್ವಂತ ಬಲದಿಂದ ಸ್ಪರ್ಧಿಸುವುದಾಗಿ ಹೇಳಿದೆ. ಜೊತೆಗೆ ಆರ್‌ಜೆಡಿ ಕೂಡಾ ಎರಡು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ.

ಇದನ್ನೂ ಓದಿ:ಬಿಹಾರ ಎನ್‌ಡಿಎಯಲ್ಲಿ ಬಿರುಕು? ಶಾಸಕಾಂಗ ಸಭೆ ಬಹಿಷ್ಕರಿಸಿದ ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights