Shocking News : ರಾಜ್ಯದಲ್ಲಿಂದು 515 ಹೊಸ ಕೊರೊನಾ ಕೇಸ್…!

ರಾಜ್ಯದಲ್ಲಿಂದು ಕೊರೊನಾ ಸೋಂಕಿತರ ಸಂಖ್ಯೆ 515 ದಾಖಲಾಗಿದ್ದು, ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಹೌದು…. ದಿನ ಕಳೆದಂತೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇಂದು ಮೊದಲ ಬಾರಿಗೆ 515 ಸೋಂಕಿತರ ಸಂಖ್ಯೆ ದಾಖಲಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಯಲ್ಲಿ ದಾಖಲಾದ 515 ಕೊರೊನಾ ಸೋಂಕಿತರ ಪೈಕಿ ಉಡುಪಿ 204, ಕಲಬುರಗಿ 42, ಬೆಂಗಳೂರು ನಗರ 10, ಬೆಂಗಳೂರು ಗ್ರಾಮಾಂತರ 12 ,ಯಾದಗಿರಿ 74, ಮಂಡ್ಯ 13, ಬೆಳಗಾವಿ 36, ಬೀದರ್ 39, ವಿಜಯಪುರ 53, ಹಾಸನ 3, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ದಾವಣಗೆರೆ 1, ಬಾಗಲಕೋಟೆ 1, ಧಾರವಾಡ 3, ಬಳ್ಳಾರಿ 1, ಕೋಲಾರ 1, ಹಾವೇರಿ 2, ರಾಮನಗರ 2, ಚಿಕ್ಕಬಳ್ಳಾಪುರ 3 ಕೇಸ್ ಪತ್ತೆಯಾಗಿದೆ.

ಇದುವರೆಗೂ ರಾಜ್ಯದಲ್ಲಿ 1688 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 3088 ಸಕ್ರಿಯ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿದೆ. ಈವರೆಗೂ 57 ಜನರು ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 13 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂದು ವರದಿಯಾಗಿರುವ 515 ಪ್ರಕರಣಗಳ ಪೈಕಿ 473 ಜನರು ಮಹಾರಾಷ್ಟ್ರ ರಾಜ್ಯದಿಂದ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ. ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 768ಕ್ಕೆ ಏರಿದೆ. ಕಲಬರುಗಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 552ಕ್ಕೆ ಜಿಗಿದಿದೆ. ಬೆಂಗಳೂರಿನಲ್ಲಿ ಒಟ್ಟು 434 ಜನರಿಗೆ ವೈರಸ್ ಅಂಟಿಕೊಂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights