ಆಘಾತಕಾರಿ ಸುದ್ದಿ: ಕೆಂಪುಕೋಟೆಯಲ್ಲಿ ಸಿಖ್‌ ‍ಧ್ವಜ ಹಾರಿಸಿದ್ದು BJP ಕಾ‍ರ್ಯಕರ್ತ ದೀಪ್‌ ಸಿಧು

ಬಹಳ ಆಶ್ಚರ್ಯಕಾರಿ ಮತ್ತು ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ. ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸಿದ ಗುಂಪಿನ ಪ್ರಮುಖ ವ್ಯಕ್ತಿಗಳಲ್ಲೊಬ್ಬ ಪಂಜಾಬ್ ಚಿತ್ರ ನಟ ದೀಪ್ ಸಿಧು ಎಂದು ಗುರುತಿಸಲಾಗಿದ್ದು, ಬಿಜೆಪಿಯೊಂದಿಗಿನ ಈತನ ಸಂಬಂಧದ ಕುರಿತು ಒಂದಾದ ಮೇಲೆ ಒಂದು ಪುರಾವೆಗಳು ಹೊರಬರುತ್ತಿದೆ.

ಇಂದಿನ ಗಣರಾಜ್ಯೋತ್ಸವದ ಭಾಗವಾಗಿ ಹೋರಾಟ ನಿರತ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಿದ್ದಾರೆ. ಈ ವೇಳೆ, ಕೆಂಪುಕೋಟೆಗೆ ಧಾವಿಸಿದ ರೈತರ ಗುಂಪಿನಲ್ಲಿದ್ದ ಕೆಲವರು ನಿಶಾನ್ ಸಾಹಿಬ್ (ಸಿಖ್ ಧರ್ಮದ ಬಾವುಟ)ವನ್ನೂ ಮತ್ತು ರೈತ ಧ್ವಜವನ್ನು ಹಾರಿಸಿದ್ದಾರೆ. ಇದೂ ದೇಶಾದ್ಯಂತ ಚರ್ಚೆಯಾಗುತ್ತಿದ್ದು, ಇದೀಗ ಹೊರಬಂದಿರುವ ವಿಚಾರವೆಂದರೆ, ಆ ಗುಂಪಿನ ಪ್ರಮುಖ ವ್ಯಕ್ತಿ ದೀಪ್ ಸಿಧು ಆಗಿದ್ದಾನೆ. ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವಾಗಲೇ ಆತ ಅಲ್ಲಿದ್ದುದರ ವಿಡಿಯೋ ಈಗ ಬಹಿರಂಗವಾಗಿದೆ.

ಈ ಕುರಿತು ಈಗಾಗಲೇ ಚಂಢೀಗಡದ ಪ್ರಮುಖ ಪತ್ರಿಕೆ ದಿ ಟ್ರಿಬ್ಯೂನ್ ಹಾಗೂ ಪಂಜಾಬ್ ನ್ಯೂಸ್ ಎಕ್ಸ್‍ಪ್ರೆಸ್‍ಗಳ ಜಾಲತಾಣಗಳು ಸುದ್ದಿ ಪ್ರಕಟಿಸಿವೆ. ಜೊತೆಗೆ ಈ ಬಗ್ಗೆ ಟ್ವೀಟ್ ಮಾಡಿರುವ ವಕೀಲ, ಸಾಮಾಜಿಕ ಚಿಂತಕ ಪ್ರಶಾಂತ್ ಭೂಷಣ್ ಅವರು, ಮೋದಿ ಮತ್ತು ಅಮಿತ್‍ಶಾ ಅವರೊಂದಿಗೆ ದೀಪು ಸಿಧು ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೋದಿ-ಶಾ ಜೊತೆಗೆ ಇರುವ ದೀಪು ಸಿಧು ಇಂದು ಕೆಂಪು ಕೋಟೆಗೆ ರೈತರ ಗುಂಪನ್ನು ಕರೆದೊಯ್ದರು ಮತ್ತು ಅಲ್ಲಿ ಸಿಖ್ ಧಾರ್ಮಿಕ ಧ್ವಜವನ್ನು ಹಾರಿಸಿದ್ದಾರೆ ಎಂದು ಪೋಟೋ ಮಾಡಿದ್ದಾರೆ.

ಇದಕ್ಕೂ ಮುನ್ನವೇ, ಪಂಜಾಬ್‍ನ ಶಂಭು ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿಯೇ ದೀಪ್ ಸಿಧು ಅವರ ನಡವಳಿಕೆಯನ್ನು ಗಮನಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯು ಆತನನ್ನು ಪ್ರತಿಭಟನೆಯಿಂದ ಹೊರಗಿಟ್ಟಿತ್ತು. ಒಬ್ಬ ರೈತ ನಾಯಕರು ಈತನನ್ನು ‘ಈತ ರೈತ ಹೋರಾಟದ ಶತ್ರು’ ಎಂದೂ ಕರೆದಿದ್ದರು.

ಈತ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‍ನ ಗುರುದಾಸ್‍ಪುರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಪರವಾರಿ ಚುನಾವಣಾ ಪ್ರಚಾರ ನಡೆಸಿದ್ದರು. ಪ್ರಚಾರದ ಉಸ್ತುವಾರಿಯನ್ನೂ ವಹಿಸಿದ್ದರು ಎಂದು ವರದಿಯಾಗಿದೆ. ಅಂದರೆ 2019ರ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದಲ್ಲದೇ ಮೋದಿ ಮತ್ತು ಅಮಿತ್‍ಶಾರ ಜೊತೆಗೆ ಫೋಟೋ ತೆಗೆಸಿಕೊಳ್ಳುವಷ್ಟು ಹತ್ತಿರದಲ್ಲಿದ್ದ ಎಂಬುದು ಆಘಾತಕಾರಿಯಾಗಿದೆ.

ಮೂರು ಕೃಷಿ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸುವ ಮತ್ತು ಹಿಂಸಾಚಾರವನ್ನು ಬಿತ್ತುವ ಉದ್ದೇಶದಿಂದ ಈ ರೀತಿಯ ಘಟನೆಯನ್ನು ಉದ್ದೇಶಪೂರ್ವಕವಾಗಿ ನಡೆಸಲಾಗಿದೆಯೆಂದು ಹಲವರು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights