ಶಾಸಕರನ್ನು ಕಾಪಾಡಲು ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು: ಸೇನಾ ಶಾಸಕ

ಶಿವಸೇನೆಯ ಹಲವು ಶಾಸಕರಿಗೆ ಕೇಂದ್ರ ಸರ್ಕಾರವು ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಳಿಸಿಕೊಂಡು ಬೆದರಿಕೆ ಹಾಕುತ್ತಿದೆ. ನಮ್ಮ ಶಾಸಕರನ್ನು ಕಾಪಾಡಲು, ಮಹಾರಾಷ್ಟ್ರದಲ್ಲಿ ಶಿವಸೇನೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಸೇನಾದ ಶಾಸಕ ಪ್ರತಾಪ್ ಸರ್ನಾಯಕ್ ಹೇಳಿದ್ದಾರೆ.

ಥಾಣೆಯ ಮಜಿವಾಡ ಕ್ಷೇತ್ರದ ಶಾಸಕರಾಗಿರುವ ಪ್ರತಾಪ್‌ ಸರ್ನಾಯಕ್ ಅವರು ಮಹಾರಾಷ್ಟ್ರ ಸಿಎಂ ಉದ್ದವ್‌ ಠಾಕ್ರೆಗೆ ಪತ್ರ ಬರೆದಿದ್ದು, ಪತ್ರದಲ್ಲಿ, “ನನ್ನನ್ನು ಸೇರಿಸಿದಂತೆ ಶಿವಸೇನೆ ನಾಯಕರುಗಳಾದ ಅನಿಲ್‌ ಪರಬ್‌, ರವೀಂದ್ರ ವಾಯ್ಕರ್‌ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಒಕ್ಕೂಟ ಸರ್ಕಾರದ ತನಿಖಾ ಸಂಸ್ಥೆಗಳು ನಿರಂತರ ಮಾನಸಿಕ ಹಿಂಸೆ ನೀಡುತ್ತಿವೆ” ಎಂದು ಹೇಳಿದ್ದಾರೆ.

“ಶಿವಸೇನೆಯ ನಾಯಕರುಗಳನ್ನು ಇಂತಹ ಮಾನಸಿಕ ಹಿಂಸೆಗಳಿಂದ ರಕ್ಷಿಸಿಕೊಳ್ಳಲು ಶಿವಸೇನೆಯು ಬಿಜೆಪಿಯೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು. ತುಂಬಾ ತಡವಾಗುವ ಮೊದಲು ಶಿವಸೇನೆಯ ಉನ್ನತ ನಾಯಕರು ಈ ಕುರಿತು ಮುಂದುವರೆಯಬೇಕು. ಮೈತ್ರಿ ಅಲ್ಲದಿದ್ದರೂ ಉತ್ತಮ ಬಾಂಧವ್ಯವನ್ನಾಗದರೂ ಬೆಳೆಸಬೇಕು” ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ವರ್ಚಸ್ಸು ಕುಸಿತ; ಪ್ರಾಬಲ್ಯವನ್ನು ಹೆಚ್ಚಿಸಲು BJPಯ 5 ತಂತ್ರಗಳು ಹೀಗಿವೆ!

ಮಹಾರಾಷ್ಟ್ರದ ಮುಂಬೈ, ಥಾಣೆ ಹೀಗೆ ಮೊದಲಾದ ಮಹಾನಗರ ಪಾಲಿಕೆಗಳ ಚುಣಾವಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಶಾಸಕ ಪ್ರತಾಪ್ ಸರ್ನಾಯಕ್‌‌ ಅವರ ಪತ್ರದಲ್ಲಿನ ಆರೋಪಗಳು ಮಹತ್ವದ್ದೆನಿಸಿದೆ.

ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಚುನಾವಣೆಗಳು ನಡೆಯಲಿರುವ ಸಮಯದಲ್ಲೇ ತನ್ನ ರಾಜಕೀಯ ಎದುರಾಳಿಗಳ ಮೇಲೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ನಡೆಸಿರುವ ಹಲವು ಉದಾಹರಣೆಗಳಿವೆ. ಇತ್ತೀಚೆಗೆ ವಿಧಾನಸಭಾ ಚುನಾವಣೆ ಎದುರಿಸಿದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯದಲ್ಲೂ ಇಂತಹ ವಿದ್ಯಾಮಾನಗಳು ನಡೆದಿದ್ದವು.

ಇದನ್ನೂ ಓದಿ: ರಾಜ್ಯದಲ್ಲಿ ಅನ್‌ಲಾಕ್‌ 2.0: ಆದರೂ ಹಲವು ಜಿಲ್ಲೆಗಳು ಲಾಕ್‌!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights