ಷೇರುಪೇಟೆಯನ್ನೇ ಬುಡಮೇಲು ಮಾಡಿದ್ದ‌ ಹಡಗು ಮುಟ್ಟುಗೋಲು; 916 ಮಿಲಿಯನ್‌ ಡಾಲರ್‌ ದಂಡ!

ಕಳೆದ ತಿಂಗಳು ಸುಮಾರು ಇಂದು ವಾರಗಳ ಕಾಲ ಈಜಿಪ್ಟ್‌ನ ಸೂಯೆಜ್ ಕಾಲುವೆಯನ್ನು ನಿರ್ಬಂಧಿಸಿದ್ದ ಮತ್ತು ವಿಶ್ವ ವ್ಯಾಪಾರವನ್ನು ಕುಂಠಿತಗೊಳಿಸಿದ್ದ ಎವರ್‌ ಗಿವೆನ್ ಹಡಗಿನ ಮಾಲೀಕರಿಗೆ (ಎವರ್‌ಗ್ರೀನ್‌ ಕಂಪನಿ) 916 ಮಿಲಿಯನ್ ಡಾಲರ್ (6750 ಕೋಟಿ ರೂ.)‌ ದಂಡ ವಿಧಿಸಿದ್ದು, ದಂಡ ಪಾವತಿಯಾಗುವವರೆಗೂ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಲುವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

200 ಸಾವಿರ ಟನ್‌ಗಳನ್ನು ಸರಕು ಸಾಗಿಸುತ್ತಿದ್ದ ಎಂವಿ ಎವರ್ ಗಿವೆನ್‌ ಹಡಗು ಮಾರ್ಚ್ 23 ರಂದು ಸುಯೇಜ್‌ ಕಾಲುವೆಯಲ್ಲಿ ಕೆಟ್ಟು ನಿಂತಿತ್ತು. ಕಾಲುವೆಯಲ್ಲಿ ಬೀಸಿದ ಬಿರುಗಾಳಿಗೆ ಕಾಲುವೆಯ ಅಡ್ಡಲಾಗಿ ತಿರುಗಿದ ಹಡಗು ಇತರ ಹಡಗುಗಳ ಸಂಚಾರಕ್ಕೂ ಅಡ್ಡಿಯುಂಟು ಮಾಡಿತ್ತು. ಕಾಲುವೆಯ ಡರಡೂ ಬದಿಯ ಮರಳಿಗೆ ಒತ್ತಿಕೊಂಡು ನಿಂತ ಹಗಡನ್ನು ಸಡಿಲಗೊಳಿಸಿ, ಮತ್ತೆ ಸಂಚರಿಸುವಂತೆ ಮಾಡಲು ಈಜಿಪ್ಟ್ ಸಿಬ್ಬಂದಿ ಮತ್ತು ಅಂತರರಾಷ್ಟ್ರೀಯ ರಕ್ಷಣಾ ತಜ್ಞರು ಆರು ದಿನಗಳ ಕಾಲದ ಮಹತ್ತರವಾದ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದರು.

400 ಮೀ ಉದ್ದವಿದ್ದ ಹಡಗು ಕಾಲುವೆಯಲ್ಲಿ ಅಡ್ಡಲಾಗಿ ನಿಂತಿದ್ದರಿಂದ ಏಷ್ಯಾ ಮತ್ತು ಯುರೋಪ್ ನಡುವೆ ಪ್ರತಿದಿನ $ 9.6 ಬಿಲಿಯನ್ ಮೌಲ್ಯದ ಸರಕು ಸಾಗಾಟವನ್ನು ತಡೆಹಿಡಿದಿತ್ತು. ಇದರಿಂದಾಗಿ ಜಲಮಾರ್ಗ ಮುಚ್ಚಿದ್ದರಿಂದಾಗಿ ಈಜಿಪ್ಟ್ ಪ್ರತಿದಿನ  $ 12 ರಿಂದ 15 ಮಿಲಿಯನ್‌ನಷ್ಟು ಆದಾಯವನ್ನು ಕಳೆದುಕೊಂಡಿದೆ ಎಂದು ಕಾಲುವೆ ಪ್ರಾಧಿಕಾರ ಹೇಳಿದೆ.

ಹೀಗಾಗಿ ನ್ಯಾಯಾಲಯದಲ್ಲಿ ಹಡಗು ಮಾಲೀಕರ ವಿರುದ್ದ ದಾವೆ ಹೂಡಲಾಗಿದ್ದು, ನ್ಯಾಯಾಲಯವು ಹಡಗಿನ ಮಾಲೀಕರಿಗೆ 900 ಮಿಲಿಯನ್‌ ದಂಡ ವಿಧಿಸಿದೆ. ಆದರೆ, ದಂಡವನ್ನು ಪಾವತಿಸಲು ವಿಫಲವಾದ ಕಾರಣ ಎಂವಿ “ಎವರ್ ಗಿವನ್‌” ಹಡಗನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಸೂಯೆಜ್ ಕಾಲುವೆ ಪ್ರಾಧಿಕಾರದ ಮುಖ್ಯಸ್ಥ ಒಸಾಮಾ ರಾಬಿ ಅವರು ಸರ್ಕಾರಿ ಪತ್ರಿಕೆ ಅಲ್-ಅಹ್ರಾಮ್ ಹೇಳಿದ್ದಾರೆ.

ಎವರ್‌ ಗಿವೆನ್‌ ಹಡಗು ಜಪಾನ್‌ ಮೂಲದ ಕಂಪನಿ ಎವರ್‌ ಗ್ರೀನ್‌ನ ಮಾಲೀಕರಾದ ಷೋಯಿ ಕಿಸೆನ್ ಕೈಶಾ ಅವರಿಗೆ ಸೇರಿದ್ದಾಗಿದೆ ಎಂದು ಹೇಳಲಾಗಿದೆ.

ದಂಡವನ್ನು ‘ಹಡಗಿನಿಂದ ಉಂಟಾದ ನಷ್ಟಗಳು, ಪ್ಲೋಟೇಶನ್‌ ಮತ್ತು ನಿರ್ವಹಣಾ ವಚ್ಚಗಳ ಆಧಾರದ ಮೇಲೆ ಲೆಕ್ಕಹಾಲಾಗಿದೆ. ಅಲ್ಲದೆ, ಹಗಡಗನ್ನು ತೆರವುಗೊಳಿಸುವುದಕ್ಕಾಗಿ ನಡೆದ ಕಾರ್ಯಾಚರಣೆಯಲ್ಲಿ ಕಾಲುವೆಗೆ ಗಮನಾರ್ಹವಾಗಿ ಹಾನಿಯುಂಟಾಗಿದೆ ಎಂದು ಪ್ರಾಧಿಕಾರ ಹೇಳಿದೆ.

ಇದನ್ನೂ ಓದಿ: ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದ ಕೆಟ್ಟುನಿಂತ ಹಡಗು; 06 ದಿನಗಳ ಬಳಿಕ ಮತ್ತೆ ಸಂಚಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights