Shaadi.comನಲ್ಲಿ ವರ್ಣ ತಾರತಮ್ಯ; ವಿರೋಧಕ್ಕೆ ಮಣಿದು ಸ್ಕಿನ್‌ ಟೋನ್‌ ಫಿಲ್ಟರ್‌ ತೆಗೆದ ವೆಬ್‌ಸೈಟ್

ಏಷ್ಯನ್ ಮ್ಯಾರೇಜ್ ವೆಬ್‌ಸೈಟ್‌ ಎಂದೇ ಹೆಸರು ಪಡೆದಿರುವ ಶಾದಿ ಡಾಕ್‌ ಕಾಂ (Shaadi.com), ಬಳಕೆದಾರ ವಿರೋಧ ಮತ್ತು ಒತ್ತಡಕ್ಕೆ ಮಣಿದು ಸ್ಕಿನ್‌ ಟೋನ್ ಫಿಲ್ಟರ್‌ (ಚರ್ಮದ ಬಣ್ಣವನ್ನು ನವೀಕರಿಸುವ) ಆಪ್ಶನ್ಅನ್ನು ತೆಗೆದು ಹಾಕಿದೆ.

Shaadi.com ವೆಬ್‌ಸೈಟ್‌ನಲ್ಲಿದ್ದ ಫಿಲ್ಟರ್‌ ಆಪ್ಶನ್‌ ವಿರುದ್ಧ ಅಮೆರಿಕದ ಡಲ್ಲಾಸ್‌ನ ಹೆಟಾಲ್ ಲಖಾನಿ ಎಂಬುವವರು ಆರಂಭಿಸಿದ ಆನ್‌ಲೈನ್‌ ಅಭೀಯಾನದಿಂದಾಗಿ ಕಂಪನಿಯು ಆ ಆಪ್ಶನ್‌ ತೆಗೆದುಹಾಕಿದೆ.

ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ, ಕಪ್ಪುವರ್ಣೀಯ ಜಾರ್ಜ್‌ ಪಾಯ್ಡ್‌ ಅವರ ಹತ್ಯೆಯಾದ ನಂತರ ಬುಗಿಲೆದ್ದಿರುವ ವರ್ಣಭೇದ ನೀತಿ ವಿರೋಧಿ ಪ್ರತಿಭಟನೆಯಿಂದಾಗಿ ಲಖಾನಿಯವರು Shaadi.comನಲ್ಲಿದ್ದ ಫಿಲ್ಟರ್ ಆಪ್ಶನ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು.

“ಬಳಕೆದಾರರು ಸೈಟ್‌ಗೆ ಸೇರಿದಾಗ ‘ಸ್ಕಿನ್ ಟೋನ್’ ಆಯ್ಕೆಯ ಅಡಿಯಲ್ಲಿ ಅವರ ಚರ್ಮ ಎಷ್ಟು ಕಪ್ಪು ಅಥವಾ ಬಿಳುಪಾಗಿದೆ ಎಂದು ಕೇಳಲು ಅಯ್ಕೆಯಿದೆ. ಇದರಿಂದಾಗಿ ಅವರು ಸಂಭಾವ್ಯ ಸಂಗಾತಿಯನ್ನು ಹುಡುಕಬಹುದು. ಆದರೆ ಈ ಫಿಲ್ಟರ್ ಕಾರ್ಯನಿರ್ವಹಿಸಲಿಲ್ಲ. ಅಲ್ಲದೆ, ಹುಡುಕುವಾಗ ಎಲ್ಲಾ ರೀತಿಯ ಚರ್ಮದ ಹೊಂದಾಣಿಕೆಗಳನ್ನು ತೋರಿಸುತ್ತದೆ” ಎಂದು Shaadi.com ಹೇಳಿದೆ.

The petition on change.org

ಚರ್ಮದ ಬಣ್ಣವನ್ನು ಫಿಲ್ಟರ್ ಮಾಡುವ ಬಣ್ಣದ ಆಧಾರದಲ್ಲಿ ಸಾಂಭವ್ಯ ಸಂಗಾತಿಗಳನ್ನು ಸೂಚಿಸುವ ವೆಬ್‌ಸೈನ್‌ನ ವಿರುದ್ಧ ಆರಂಭವಾಗಿರುವ ಆನ್‌ಲೈನ್‌ ಅಭಿಯಾನಕ್ಕೆ 14 ಗಂಟೆಗಳಲ್ಲಿ 1,500 ಸಹಿಗಳು ಸಂಗ್ರಹವಾಗಿವೆ. ಈ ನಡುವೆ ಶಾದಿ ಡಾಟ್‌ ಕಾಂ ಆ ಆಪ್ಶನ್‌ ಅನ್ನು ತೆಗೆದು ಹಾಕಿದೆ.

“ಭಾರತೀಯ ಬಾಲಿವುಡ್‌ ಸಿನಿಮಾ ಸ್ಟಾರ್‌ಗಳು ಒಂದು ಕಡೆ ಬಣ್ಣ ಬದಲಿಸುವ ಕ್ರೀಮ್‌ಗಳ ಜಾಹೀರಾತುಗಳಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ಮತ್ತೊಂದೆಡೆ, ವರ್ಣಭೇದದ ವಿರುದ್ಧ ‘ಬ್ಲ್ಯಾಕ್ ಲೈವ್ಸ್‌ ಮ್ಯಾಟರ್‌’ ಆದೋಂಲನವನ್ನು ಬೆಂಬಲಿಸುದ್ದಾರೆ. ಇವರದ್ದು ಮೂರ್ಖತನವನಲ್ಲವೇ” ಎಂದು Shaadi.comನ ಆಪ್ಶನ್‌ ವಿರೋಧಿ ಅಭಿಯಾನದಲ್ಲಿ ಭಾಗಿಯಾಗಿರುವ ಭಾರತೀಯ ಮೇಘನ್ ಹೇಳಿದ್ದಾರೆ.

“ದಕ್ಷಿಣ ಏಷ್ಯಾದ ಸಂಸ್ಕೃತಿಯಲ್ಲಿ ಚರ್ಮಾಧಾರಿತ ತಾರತಮ್ಯದ ಮನಸ್ಥಿತಿ ಇದೆ ಎಂಬುದು ತಿಳಿದಿತ್ತು. ಅದು ಈಗ ಮ್ಯಾರೇಜ್ ವೆಬ್‌ಸೈಟ್‌ಗಳಿಗೂ ಹರಡುತ್ತಿದೆ. ನಮ್ಮ ಸಮುದಾಯದಲ್ಲಿ ಪುರುಷರಿಗಿಂತ ಮಹಿಳೆಯರ ಬಗ್ಗೆ ಕಾಮೆಂಟ್‌ಗಳು ಹೆಚ್ಚಾಗಿರುತ್ತವೆ. ‘ಅವಳು ಸೂಟ್‌ ಆಗುತ್ತಾಳೆ, ಅವಳು ತುಂಬಾ ಸುಂದರವಾಗಿದ್ದಾಳೆ’ಎಂಬುದು ಕೇಳಿ ಬರುತ್ತದೆ. ಇದು ವರ್ಣ ತಾರತಮ್ಯದ ಪಕ್ಷಪಾತ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

Meghan and Hetal

 

“ಅಂತರರಾಷ್ಟ್ರೀಯ ವ್ಯಾಪ್ತಿಯನ್ನು ಹೊಂದಿರುವ ಕಂಪನಿಯು ಹೆಚ್ಚು ಜವಾಬ್ದಾರಿಯನ್ನು ಹೊಂದಿರಬೇಕು. ಜನರ ಮಧ್ಯೆ ಇರುವ ತಾರತಮ್ಯವನ್ನು ಒಂದು ಕಂಪನಿಯೂ ಸಂಸ್ಕೃತಿಯನ್ನಾಗಿ ಬೆಳೆಸಬಾರದು” ಎಂದು ಹೆಟಾಲ್ ಹೇಳುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights