ಆಕ್ಸಿಜನ್‌ಗಾಗಿ ಸೆಕ್ಸ್: ತನ್ನೊಂದಿಗೆ ಮಲಗಿದರೆ ಆಕ್ಸಿಜನ್‌ ಸಿಲಿಂಡರ್‌ ನೀಡುತ್ತೇನೆ ಎಂದ ದುಷ್ಟ; ನೆಟ್ಟಿಗರ ಆಕ್ರೋಶ

ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ. ಆಕ್ಸಿಜನ್‌ ಸಿಗದೇ ಸಾವಿರಾರು ಜನರು ಆಸ್ಪತ್ರೆಗಳ ಬಾಗಿಲಿನಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ತನ್ನ ತಂದೆಗೆ ಆಕ್ಸಿಜನ್‌ ಹುಡುಕುತ್ತಿದ್ದ ಮಹಿಳೆಯೊಬ್ಬರಿಗೆ ಆಕೆಯ ನೆರೆಹೊರೆಯ ವ್ಯಕ್ತಿಯೊಬ್ಬ ತನ್ನೊಂದಿಗೆ ಮಲಗಿದರೆ ಆಕ್ಸಿಜನ್‌ ನೀಡುವುದಾಗಿ ಬೇಡಿಕೆ ಇಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇತ್ತೀಚೆಗೆ ಈ ಘಟನೆ ಸಂಭವಿಸಿದ್ದು, ದೆಹಲಿ ಮೂಲದ ಟ್ವಿಟರ್‌ ಬಳಕೆದಾರರೊಬ್ಬರು ಈ ಬಗ್ಗೆ ಟ್ವೀಟ್‌ ಮಾಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ. “ಕಿರಿಯ ತಂಗಿಯಂತೆ ಪರಿಗಣಿಸುವ ನನ್ನ ಸ್ನೇಹಿತರ ತಂಗಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆಗೆ ಆಮ್ಲಜನಕ ಸಿಲಿಂಡರ್‌ ಪಡೆಯಲು ಅದಕ್ಕೆ ಪ್ರತಿಯಾಗಿ ತನ್ನೊಂದಿಗೆ ಮಲಗಬೇಕು ಎಂದು ಆಕೆಯ ನೆರೆಹೊರೆಯವನೊಬ್ಬನ ಬೇಡಿಕೆಯನ್ನು ಎದುರಿಸಿದ್ದಾಳೆ” ಎಂದು ಭಾರ್ವೀನ್‌ ಖಂದರಿ ಎಂಬುವವರು ವಿಷಯವನ್ನು ಹಂಚಿಕೊಂಡಿದ್ದು, ಟ್ವಿಟರ್‌ ಬಳಕೆದಾರರನ್ನು ಇದು ಆಘಾತಕ್ಕೀಡು ಮಾಡಿದೆ.

ಅನೇಕ ಟ್ವಿಟ್ಟರ್ ಬಳಕೆದಾರರು ಪೊಲೀಸರಿಗೆ ದೂರು ದಾಖಲಿಸುವಂತೆ ಸಂತ್ರಸ್ತೆಗೆ ಒತ್ತಾಯಿಸಿದ್ದಾರೆ. ಅವರೆಲ್ಲರೂ ಘಟನೆಯಿಂದಾಗಿ ಆಘಾತಕ್ಕೊಳಗಾಗಿದ್ದಾರೆ ಮತ್ತು ಆಕ್ರೋಶಗೊಂಡಿದ್ದಾರೆ.

ಸಾಂಕ್ರಾಮಿಕ ರೋಗದ ಮಧ್ಯೆ ಇಂತಹ ಹಲವಾರು ಘಟನೆಗಳು ನಡೆಯುತ್ತಿವೆ. ಏಪ್ರಿಲ್ 14 ರಂದು, ಮುಂಬೈನ ಅಂಧೇರಿಯ ಹೋಟೆಲ್‌ವೊಂದರಲ್ಲಿ ಕೊರೊನಾ ರೋಗಿಯೊಬ್ಬರಿಗೆ ಉತ್ತಮ ಚಿಕಿತ್ಸೆಗಾಗಿ ಲೈಂಗಿಕ ಬೇಡಿಕೆಯನ್ನು ಎದುರಿಸಿದ್ದಾರೆ. ಅಲ್ಲದೆ, ಅಕೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಆರೋಪದ ಮೇಲೆ ವೈದ್ಯಕೀಯ ಸಂಯೋಜಕರನ್ನು ಬಂಧಿಸಲಾಗಿದೆ.

Read Also: ಎರಡನೇ ವಿವಾಹವಾದ ಮಹಿಳೆಗೆ ಉಗುಳನ್ನು ನೆಕ್ಕುವ ಶಿಕ್ಷೆ ನೀಡಿದ ಜಾತಿ ಪಂಚಾಯತ್‌; ಎಫ್‌ಐಆರ್‌ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights