ಕಾಂಗ್ರೆಸ್, ಎಎಪಿ, ನಾಗರಿಕರ ಪ್ರತಿಭಟನೆಗೂ ಮುಂಚೆ ಇಂಡಿಯಾ ಗೇಟ್ ಸುತ್ತಲೂ ಸೆಕ್ಷನ್ 144 ಜಾರಿ!

ಇಂದು ಇಂಡಿಯಾ ಗೇಟ್‌ನ ಸುತ್ತಲೂ ಯೋಜಿತ ಪ್ರತಿಭಟನೆಗಳ ಮುಂದೆ ದೆಹಲಿ ಪೊಲೀಸರು ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಿದ್ದು, ಇದು ಐದು ಕ್ಕೂ ಹೆಚ್ಚು ಜನರ ಕೂಟವನ್ನು ನಿಷೇಧಿಸಿದೆ. ಇಂಡಿಯಾ ಗೇಟ್ ಸುತ್ತಲೂ ಯಾವುದೇ ಜನರ ಗುಂಪುಗಳಿಗೆ ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಆದಾಗ್ಯೂ, ಜಂತರ್ ಮಂತರ್‌ನಲ್ಲಿ 100 ಜನರ ಕೂಟಗಳನ್ನು ಅನುಮತಿಸಲಾಗಿದೆ. ನಾಗರಿಕ ಗುಂಪುಗಳು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ನಂತರದ ದಿನಗಳಲ್ಲಿ ಇಂಡಿಯಾ ಗೇಟ್‌ನಲ್ಲಿ ಪ್ರತಿಭಟನೆ ಮತ್ತು ಪ್ರದರ್ಶನಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ಇಂದು ಇಂಡಿಯಾ ಗೇಟ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಳೆದ ಎರಡು ವಾರಗಳ ಹಿಂದೆ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಮಂಗಳವಾರ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದಳು. ಈ ಪ್ರಕರಣದಲ್ಲಿ ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ದೇಶಾದ್ಯಂತ ಭಾರಿ ಪ್ರತಿಭಟನೆ ಮತ್ತು ಆಕ್ರೋಶ ಬುಗಿಲೆದ್ದಿದೆ. ಹೀಗಾಗಿ ನಿನ್ನೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರು ಹದ್ರಾಸ್‌ಗೆ ತೆರಳಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 19 ವರ್ಷದ ಯುವತಿಯ ಕುಟುಂಬವನ್ನು ಭೇಟಿಯಾಗಲು ರಾಜ್ಯವನ್ನು ಪ್ರವೇಶಿಸಲು ಯತ್ನಿಸಿದ್ದರು. ಈ ವೇಳೆ ರಾಹುಲ್ ಗಾಂಧಿಯನ್ನು ತಡೆಲಾಗಿತ್ತು. ಜೊತೆಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಯುಪಿ ಗಡಿಯ ಬಳಿ ಗುರುವಾರ ಬಂಧಿಸಲಾಯಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights