ಮೇ 24ರಿಂದ ಜೂನ್ 10ರವರೆಗೆ ದ್ವಿತೀಯ ಪಿಯು ಪರೀಕ್ಷೆ : ವೇಳಾಪಟ್ಟಿ ಬಿಡುಗಡೆ!

ಮೇ 24ರಿಂದ ಜೂನ್ 10ರವರೆಗೆ ದ್ವಿತೀಯ ಪಿಯು ಪರೀಕ್ಷಾ ದಿನಾಂಕವನ್ನು ನಿಗಧಿ ಮಾಡಲಾಗಿದೆ. ಇಂದು ಬೆಂಗೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಲ್ಲಾ ಶಾಲೆಗಳಿಗೆ ವೇಳಾಪಟ್ಟಿಯನ್ನು ವರ್ಗಾಹಿಸಲಾಗುವುದು ಎಂದು ತಿಳಿಸಿದ್ದಾರೆ.

ಜೊತೆಗೆ ಶಾಲಾ ಶುಲ್ಕವನ್ನು 70%ಕ್ಕೆ ಕಡಿತಗೊಳಿಸಿರುವುದಾಗಿ ಹೇಳಿದ್ದಾರೆ. 2019ರಲ್ಲಿ ಶಾಲೆಗಳು ಪಡೆಯುತ್ತಿದ್ದ ಶುಲ್ಕದಲ್ಲಿ ಶೇಕಡ 70 ರಷ್ಟು ಶುಲ್ಕ ಮಾತ್ರ ಶಾಲೆಗಳು ಪಡೆಯಬೇಕು ಎಂದಿದ್ದಾರೆ. ಈ ನಿಯಮ ಎಲ್ಲಾ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ ಹೀಗಿದೆ:-

ಮೇ24-ಬೌತಶಾಸ್ತ್ರ,ಇತಿಹಾಸ

ಮೇ25—ಮೈನಾರಿಟಿ ಲಾಂಗ್ವೇಜಸ್

ಮೇ26-ಲಾಜಿಕ್,ಹೋಮ್ ಸೈನ್ಸ್,ಬೇಸಿಕ್ ಮ್ಯಾತ್ಸ್,ಜಿಯಾಲಜಿ ಪರೀಕ್ಷೆ

ಮೇ27-ಐಚ್ಚಿಕ ಕನ್ನಡ, ಅಕೌಂಟೆನ್ಸಿ,ಗಣಿತ

ಮೇ28-ಉರ್ದು

ಮೇ31-ರಸಾಯನಶಾಸ್ತ್ರ,ಬ್ಯುಸಿನೆಸ್ ಸ್ಟಡೀಸ್

ಜೂ1 –ಕರ್ನಾಟಕ ಸಂಗೀತ

ಜೂ2 –ಸೈಕಾಲಜಿ,ಬಯಾಲಜಿ,ಎಲೆಕ್ಟ್ರಾನಿಕ್ಸ್,ಕಂಪ್ಯೂಟರ್ ಸೈನ್ಸ್

ಜೂ3-ಹಿಂದಿ

ಜೂ4-ಎಕನಾಮಿಕ್ಸ್

ಜೂ5- ಕನ್ನಡ

ಜೂ7 -ಇಂಗ್ಲೀಷ್

ಜೂ8 -ಬ್ಯೂಟಿ&ವೆಲೆನೆಸ್, ಹೆಲ್ತ್ಕೇರ್, ರೀಟೇಲ್ ಆಟೋಮೋಬೈಲ್,ಇನ್ಫಾರ್ಮೇಷನ್ ಟೆಕ್ನಾಲಜಿ

ಜೂ9- ಸಮಾಜ, ಸಂಖ್ಯಾಶಾಸ್ತ್ರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights