School : ತರಾತುರಿಯಲ್ಲಿ ಶಾಲೆಗಳ ಪುನಾರಂಭ ಇಲ್ಲ – ಶಿಕ್ಷಣ ಸಚಿವ ಸುರೇಶ್ ಕುಮಾರ್..

ಲಾಕ್‌ಡೌನ್ ಮೂರನೇ ಹಂತದ ಮುಕ್ತಾಯದ ಹಂತದಲ್ಲಿ ಆದಷ್ಟು ಬೇಗ ಶಾಲೆಗಳು ಪುನಾರಂಭ ಆಗಬಹುದೆಂಬ ವದಂತಿಗಳಿಗೆ ಶೀಕ್ಷಣ ಸಚಿವ ಸುರೇಶ್ ಕುಮಾರ್ ಮಂಗಳ ಹಾಡಿದ್ದಾರೆ. ಸದ್ಯಕ್ಕೆ ಶಾಲೆಗಳು ತೆರೆಯುವುದಿಲ್ಲ. ಈ ವಿಷಯದಲ್ಲಿ ಸರಕಾರ ಯಾವುದೇ ತರಾತುರಿಯಲ್ಲಿ ಇಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ತರಾತುರಿಯಲ್ಲಿ ನಮ್ಮ ರಾಜ್ಯದ ಶಾಲೆಗಳನ್ನು ತೆರೆಯುವುದಿಲ್ಲ. ಮಕ್ಕಳ ಹಿತ ಕಾಪಾಡುವ ಜವಾಬ್ದಾರಿ ನಮ್ಮದು. ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸಚಿವರು ಹೇಳಿದ್ದಾರೆ. ಇಲಾಖಾ ಮಟ್ಟದಲ್ಲಿ ತಯಾರಾದ ಶಾಲಾ ಮಾರ್ಗಸುಚಿಯನ್ನೇ ಆಧಾರವಾಗಿಟ್ಟುಕೊಂಡು ಶಾಲೆಗಳು ಶೀಘ್ರವೇ ತೆರೆಯಲಿವೆ ಎಂದು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಈ ಸುದ್ದುಗಳು ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ..

ಶಾಳೆಗಳಲ್ಲಿ ಪಾಳಿ ಮಾದರಿ ಅನುಸರಿಸಲಾಗುತ್ತದೆ. ಯಾವಾಗ ಯಾವ ಪಾಳಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಿದೆ ಎಂದು ವರದಿಗಳು ಹರಿದಾಡಿದ್ದವು. ಆದರೆ ಸುರೇಶ್ ಕುಮಾರ್‍ ಅವರ ಸ್ಪಷ್ಟನೇ ಹಿನ್ನೆಲೆಯಲ್ಲಿ ಈ ವರದಿ ರೂಪದ ವದಂತಿಗಳಿಗೆ ತೆರೆ ಬಿದ್ದಿದೆ. ಆದರೆ ಈ ವರದಿಗಳು ಕೇವಲ ಕಪೋಲಕಲ್ಪಿತ ಮತ್ತು ಆಧಾರ ರಹಿತ ಎಂದು ಸಚಿವರು ಮಾತ್ರವಲ್ಲದೇ ಇಲಾಖೆಯೂ ಸ್ಪಷ್ಟೀಕರಣ ನೀಡಿದೆ.

ಶಾಲೆಗಳಲ್ಲಿ ಇನ್ನೂ ಪ್ರವೇಶ ಪ್ರಕ್ರಿಯೆ ಸಹ ಆರಂಭವಾಗಿಲ್ಲ. ಲಾಕ್‌ಡೌನ್ ಯಾವಾಗ ಮುಗಿಯುತ್ತೆ ಎಂಬುದು ಖಚಿತವಾಗಿಲ್ಲ. ಹೀಗಿರುವಾಗಿ ಶಾಲೆಗಳನ್ನು ತೆರೆಯಲು ಹೇಗೆ ಸಾಧ್ಯ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಲಾಕ್‌ಡೌನ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆಯಬೇಕಿದ್ದ SSLC ಮತ್ತು ಬಾಕಿ ಉಳಿದಿದ್ದ ಪಿಯುಸಿ ಎರಡನೇ ವರ್ಷದ ಇಂಗ್ಲಿಷ್ ವಿಷಯದ ಪರೀಕ್ಷೆಗಳು ಇನ್ನೂ ನಡೆಯಬೇಕಿದೆ. ಇದಕ್ಕೂ ಯಾವುದೇ ದಿನಾಂಕ ನಿಗದಿಯಾಗಿಲ್ಲ.

ಈ ಮಧ್ಯೆ CBSE  ಹಾಗೂ 12ನೇ ತರಗತಿಗಳಿಗೆ ಪರೀಕ್ಷಾ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಅವರು ಹೇಳಿದ್ದಾರೆ. ಈ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಬೇಕಿತ್ತು. ಆದರೆ ತಾಂತ್ರಿಕೆ ಸಮಸ್ಯೆಯ ನೆಪ ನೀಡಿ ವೇಳಾಪಟ್ಟಿ ಬಿಡುಗಡೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights