ಟಿವಿ ಆಂಕರ್ ಅರ್ನಾಬ್ ಗೋಸ್ವಾಮಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ!

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಸುಪ್ರೀಂ ಕೋರ್ಟ್ ಬುಧವಾರ ‘ಮಧ್ಯಂತರ ಜಾಮೀನು’ ನೀಡಿದೆ. ಅನ್ವಯ್ ನಾಯಕ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿ ಮತ್ತು ಇತರ ಇಬ್ಬರು ಕಳೆದ ವಾರ ಬಂಧಿಸಲ್ಪಟ್ಟಿದ್ದರು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಾಧೀಶರ ಪೀಠ ‘ರಾಜ್ಯ ಸರ್ಕಾರಗಳು ಹೀಗೆ ವ್ಯಕ್ತಿಯೊಬ್ಬರನ್ನು ಗುರಿಯಾಗಿಸುವುದಾದರೆ, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಗೆ ಸುಪ್ರಿಂ ಕೋರ್ಟ್ ಇದೆ ಎನ್ನುವುದನ್ನು ಅರಿಯಬೇಕು’ ಎಂದು ಹೇಳಿದೆ.

ರಾಜ್ಯ ಸರ್ಕಾರಗಳು ಸಿದ್ದಾಂತ ಮತ್ತು ಭಿನ್ನಾಭಿಪ್ರಾಯದ ಆಧಾರದ ಮೇಲೆ ಕೆಲವು ವ್ಯಕ್ತಿಗಳನ್ನು ಗುರಿಯಾಗಿಸಿರುವ ಕುರಿತು ಕಳವಳ ವ್ಯಕ್ತಪಡಿಸಿದ ನ್ಯಾಯಪೀಠ, ಗೋಸ್ವಾಮಿಯವರ ಪ್ರಕರಣ ‘ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿರುವುದರಿಮದ ಅವರನ್ನು ಕಸ್ಟಡಿ ವಿಚಾರಣೆ ಮಾಡುವುದವ ಅಗತ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದೆ.

ಗೋಸ್ವಾಮಿ ಅವರ ಬಂಧನ ಮತ್ತು ಪ್ರಕರಣವನ್ನು ಮತ್ತೆ ತೆರೆಯುವುದರ ವಿರುದ್ಧ ಬಾಂಬೆ ಹೈಕೋರ್ಟ್ ಮೇಲ್ಮನವಿ ತಿರಸ್ಕರಿಸಿದ 2 ದಿನಗಳ ನಂತರ ವಿಚಾರಣೆ ನಡೆಯುತ್ತದೆ. “ನಾನು ಚಾನೆಲ್ ವೀಕ್ಷಿಸುವುದಿಲ್ಲ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು, ಆದರೆ ಸಾಂವಿಧಾನಿಕ ನ್ಯಾಯಾಲಯಗಳು ಮಧ್ಯಪ್ರವೇಶಿಸದಿದ್ದರೆ, “ನಾವು ವಿನಾಶದ ಹಾದಿಯಲ್ಲಿ ನಿರ್ವಿವಾದವಾಗಿ ಪ್ರಯಾಣಿಸುತ್ತಿದ್ದೇವೆ” ಎಂದು ಪ್ರತಿಪಾದಿಸಿದರು.

ಈ ಪ್ರಕರಣದಲ್ಲಿ ಸಹ ಆರೋಪಿಗಳಾದ ನೀತೀಶ್ ಸರ್ದಾ ಮತ್ತು ಫಿರೋಜ್ ಮೊಹಮ್ಮದ್ ಶೇಖ್ ಅವರನ್ನು ಮಧ್ಯಂತರ ಬಿಡುಗಡೆ ಮಾಡಲು ಉನ್ನತ ನ್ಯಾಯಾಲಯ ಅನುಮತಿ ನೀಡಿದೆ. ಬಾಂಬೆ ಹೈಕೋರ್ಟ್‌ನ ನವೆಂಬರ್ -9 ರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳಿಗೆ ತುರ್ತು ವಿಚಾರಣೆಯ ನಂತರ ನ್ಯಾಯಪೀಠ ಈ ಆದೇಶವನ್ನು ಅಂಗೀಕರಿಸಿತು. ಬಿಡುಗಡೆಯ ಆದೇಶವನ್ನು ತಕ್ಷಣವೇ ಪಾಲಿಸುವಂತೆ ರಾಯಗಡ್ ಪೊಲೀಸರು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಆರೋಪಿಗಳು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ವೈಯಕ್ತಿಕ ಬಾಂಡ್ ಅನ್ನು 50,000 / – ರೂ. ನೀಡಬೇಕಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights