ರಮೇಶ ಮುಸ್ಲಿಂ ಟೋಪಿ ಹಾಕಿದನ್ನು ನೋಡಿದ್ದೇನೆ; ಖಾಕಿ ಚಡ್ಡಿ ಧರಿಸಿದ್ದು ನೋಡಿಲ್ಲ: ಸತೀಶ್‌ ಜಾರಕಿಹೊಳಿ

ರಮೇಶ ಮುಸ್ಲಿಂ ಟೋಪಿ ಹಾಕಿದ್ದನ್ನು ಮಾತ್ರ ನೋಡಿದ್ದೇನೆ. ಆತ ಕಪ್ಪು ಟೋಪಿ ಧರಿಸಿ, ಖಾತಿ ಪ್ಯಾಂಟ್‌ ಹಾಕಿದ್ದನ್ನು ಎಂದೂ ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ರಮೇಶ್‌ ಜಾರಕಿಹೊಳಿ ಅವರ ಬಗ್ಗೆ ಹೇಳಿದ್ದಾರೆ.

ಇತ್ತೀಚೆಗೆ, ನಾನು ಜನಸಂಘದವನು. ನಾನು ಕರಿ ಟೋಪಿ ಮತ್ತು ಖಾತಿ ಬಣ್ಣದ ಚಡ್ಡಿ ಹಾಕಿಕೊಳ್ಳುತ್ತಿದ್ದ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸತೀಶ್‌ ಜಾರಕಿಹೊಳಿ, ನಮಗೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ರಮೇಶ ಕಪ್ಪು ಟೋಪಿ ಹಾಕಿದ್ದನ್ನು ನಾನು ನೋಡಿಲ್ಲ ಎಂದು ಹೇಳಿದ್ದಾರೆ.

ನಮ್ಮ ತಂದೆಯ ಸ್ನೇಹಿತರಾದ ಪತ್ರಾವಳಿ ಎನ್ನುವವರು ಸಂಘಪರಿವಾರದಲ್ಲಿದ್ದರು. ಸ್ನೇಹಿತರಾಗಿದ್ದರಿಂದ ನಮ್ಮ ತಂದೆ ಅವರ ಜೊತೆ ಹೋಗಿ ಕೂರುತ್ತಿದ್ದರು. ಮಾತನಾಡುತ್ತಿದ್ದರು. ಇದನ್ನೇ ರಮೇಶ ನಮ್ಮ ತಂದೆ ಆರ್‌ಎಸ್‌ಎಸ್‌ನಲ್ಲಿದ್ದರು ಎಂಬಂತೆ ಬಿಂಬಿಸುತ್ತಿದ್ದಾರೆ. ನಮ್ಮ ಕುಟುಂಬಕ್ಕೂ ಸಂಘಪರಿವಾರಕ್ಕೂ ಸಂಬಂಧವಿಲ್ಲ ಎಂದು ಅವರು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

Jarkiholi family not associated with RSS, says Satish Jarkiholi | Deccan  Herald

30 ವರ್ಷಗಳಲ್ಲಿ ರಮೇಶ ಆರ್‌ಎಸ್‌ಎಸ್‌ ಮೂಲದ ಬಗ್ಗೆ ಹೇಳಿರಲೇ ಇಲ್ಲ. ಈಗ ತಾನು ಸಂಘಪರಿವಾರದಲ್ಲಿದ್ದೆ ಎಂದು ಹೇಳಿಕೆ ಕೊಟ್ಟಿರುವುದು ಆಶ್ಚರ್ಯಕರವಾಗಿದೆ. ಅವರು ಕಪ್ಪು ಟೋಟಿ, ಬಾಕಿ ಚಡ್ಡಿ ಧರಿಸಿದ್ದನ್ನು ನಾನು ನೋಡಿಲ್ಲ. ಆದರೆ, ಮುಸ್ಲಿಂ ಟೋಪಿಹಾಕಿದ್ದನ್ನು ನೋಡಿದ್ದೇನೆ ಎಂದು ರಮೇಶ್‌ ಜಾರಕಿಹೊಳಿ ಮುಸ್ಲಿಮರ ಟೋಪಿ ಧರಿಸಿದ್ದ ಫೋಟೋವನ್ನು ತೋರಿಸಿದ್ದಾರೆ.

ನಾವು ಹಿಂದಿನಿಂದಲೂ ಮುಸ್ಲಿಮರ ಪರವಾಗಿ, ಸೌಹಾರ್ದತೆಗಾಗಿ ಹೋರಾಡಿದವರು. ನಾವು ಎಂದಿಗೂ ಆರ್‌ಎಸ್‌ಎಸ್‌ ಭಾಗವಾಗಿರಲಿಲ್ಲ. ಮುಂದೆಯೇ ರಮೇಶ್ ಜಾರಕಿಹೊಳಿ ಹೀಗೆಯೇ ಇರುತ್ತಾರೆ. ಬಿಜೆಪಿಯಲ್ಲಿದ್ದರೂ ಮುಸ್ಲಿಮರು, ಶೋಷಿತರ ಪರವಾಗಿ ಹೋರಾಟ ನಡೆಸುತ್ತಾರೆ ಎಂಬ ಭರವಸೆಯಿದೆ. ಹಿಂದಿನ ಹೋರಾಟ, ಇತಿಹಾಸವನ್ನು ಮರೆಯಬಾರದು. ಸಿದ್ಧಾಂತಗಳನ್ನು ಬದಲಿಸಬಾರದು’ ಎಂದು ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.


ಇದನ್ನೂ ಓದಿ: ರಾಜ್ಯದಲ್ಲಿ BJPಯನ್ನು ಅಧಿಕಾರಕ್ಕೆ ತರಲು ಯೋಗೇಶ್ವರ್ 09 ಕೋಟಿ ಸಾಲ ಮಾಡಿದ್ದರು: ರಮೇಶ್‌ ಜಾರಕಿಹೊಳಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights