ಸಾಮಾಜಿಕ ಜಾಲತಾಣದಲ್ಲಿ ‘ಅಕ್ಕಿನೇನಿ’ ಸರ್‌ನೇಮ್‌ ತೆಗೆದು ಹಾಕಿದ ನಟಿ ಸಮಂತಾ..!

ದಿಢೀರ್ ಎಂದು ನಟಿ ಸಮಂತಾ ರುತ್ ಪ್ರಭು ಸಾಮಾಜಿಕ ಜಾಲತಾಣದಲ್ಲಿ ತನ್ನ ಕೊನೆಯ ಹೆಸರನ್ನು ತೆಗೆದುಹಾಕಿದ್ದು ಅಭಿಮಾನಿಗಳಲ್ಲಿ ಅನುಮಾನಕ್ಕೆಡೆ ಮಾಡಿದೆ.

ಸಮಂತಾ ರುತ್ ಪ್ರಭು ತನ್ನ ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಪ್ರೊಫೈಲ್‌ಗಳಲ್ಲಿ ತನ್ನ ಕೊನೆಯ ಹೆಸರನ್ನು ಕೈಬಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಕ್ಕಿನೇನಿ ಎಂಬ ಹೆಸರನ್ನು ಸಮಂತ್ ಸಾಮಾಜಿಕ ಜಾಲತಾಣದಲ್ಲಿ ತೆಗೆದು ಹಾಕಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಮಂತ ಮೌನ ಮುರಿದಿದ್ದಾರೆ.

ಅಂದಹಾಗೆ, ಮದುವೆ ಬಳಿಕವೂ ಸಮಂತಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 2017ರಲ್ಲಿ ನಾಗರ್ಜುನ ಅವರ ಪುತ್ರ, ನಟ ನಾಗಚೈತನ್ಯ ಅಕ್ಕಿನೇನಿ ಜೊತೆಗೆ ಮದುವೆಯಾದ ಸಮಂತಾ, ಈಗಲೂ ಸಿನಿಮಾರಂಗದಲ್ಲಿ ಬ್ಯುಸಿ ನಟಿ. ‘ಯೇ ಮಾಯ ಚೇಸಾವೆ’ ಚಿತ್ರದ ಮೂಲಕ ಸಮಂತಾ ಚಿತ್ರಜೀವನ ಶುರುವಾಯಿತು.

ತಮ್ಮ ವೃತ್ತಿ ಜೀವನದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಸಮಂತಾ ನೀಡಿದ್ದಾರೆ. ಈಚೆಗೆ ‘ದಿ ಫ್ಯಾಮಿಲಿ ಮ್ಯಾನ್ 2’ ಮೂಲಕ ಒಟಿಟಿ ವೇದಿಕೆಗೂ ಸಮಂತಾ ಕಾಲಿಟ್ಟರು. ಅಲ್ಲಿ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿದೆ. ಸದ್ಯ ‘ಶಾಕುಂತಲಂ’ ಸೇರಿದಂತೆ 2-3 ಚಿತ್ರಗಳಲ್ಲಿ ಸಮಂತಾ ಕೆಲಸ ಮಾಡುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights