Salary cut : ಕೊರೊನಾ ಲಾಕ್‌ಡೌ‌ನ್ ನಿಂದ ತೆಲಂಗಾಣ ನೌಕರರ ಪಗಾರಕ್ಕೆ ಬರೆ ಎಳೆದ CM…

ದೇಶಾದ್ಯಂತ ಜಾರಿಯಲ್ಲಿರುವ ಕೊರೊನಾ ಲಾಕ್‌ಡೌ‌ನಿನ ಕಾರಣ ತೆಲಂಗಾಣದಲ್ಲಿ ಸರಕಾರಿ ನೌಕರರ ಸಂಬಳ ಕಟ್ ಮಾಡಲಾಗಿದೆ.ಮುಖ್ಯಮಂತ್ರಿ ಆದಿಯಾಗಿ ಅತ್ಯಂತ ಕೆಳ ದರ್ಜೆ ನೌಕರನವರೆಗೆ ಎಲ್ಲರ ಪಗಾರಕ್ಕೂ ಕೊರೋನಾ ಲಾಕ್‌ಡೌನ್‌ ಬರೆ ಎಳೆದಿದೆ. ವಹಿವಾಟು ಸ್ಥಗಿತದಿಂದ ತತ್ತಿರಿಸಿಹೋಗಿರುವ ರಾಜ್ಯದ ಹಣಕಾಸು ಸ್ಥಿತಿಯ ಹಿನ್ನೆಲೆಯಲ್ಲಿ ನೌಕರರ ಸಂಬಳ ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ಅಲ್ಲಿನ ಸರಕಾರ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಸೇರಿದಂತೆ ಎಲ್ಲ ಶಾಸಕರು ನಿಗಮ ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ವೇತನವನ್ನು ಶೇ 75ರಷ್ಟು ಕಡಿತಗೊಳಿಸಲಾಗಿದೆ.

ಇನ್ನು ಎಲ್ಲ ರೀತಿಯ ಆಡಳಿತ ಸೇವೆಯಲ್ಲಿರುವ ಅಧಿಕಾರಿಗಳು (ಐಎಸ್, ಐಪಿಎಸ್, ಐಎಫ್‌ಎಸ್) ಶೇ. 60ರಷ್ಟು ಕಡಿಮೆ ಸಂಬಳ ಪಡೆದರೇ ಸರಕಾರಿ ನೌಕರರ ಸಂಬಳ ಶೇ. 50ರಷ್ಟು ಇಳಿಕೆಯಾಗಲಿದೆ.

ಏತನ್ಮಧ್ಯೆ ನಾಲ್ಕನೇ ದರ್ಜೆ ನಾಕರರು ಹಾಗೂ ಗುತ್ತಿಗೆ ನೌಕರರ ಸಂಬಳದಲ್ಲಿ ಶೇ. 10ರ ಕಡಿತಕ್ಕೆ ಕೆಸಿಆರ್‍ ಸರಕಾರವು ನಿರ್ಧರಿಸಿದೆ. ಕೇವಲ ವೇತನದಾರರಿಗಷ್ಟೇ ಅಲ್ಲ ಪಂಚಣಿದಾರರಿಗೂ ಈ ನಿಯಮಗಳು ಅನ್ವಯವಾಗಲಿದೆ ಎಂದು ಸಿಎಂ ಚಂದ್ರಶೇಖರ ರಾವ್ ಹೇಳಿದ್ದಾರೆ.

ಈ ಸಂಬಳ ಕಡಿತ ಎಷ್ಟು ದಿನ ಚಾಲ್ತಿಯಲ್ಲಿರುತ್ತದೆ ಮತ್ತು ಮುಂದೆ ಈ ಕಡಿತವನ್ನು ವಾಪಸ್ ಮಾಡುವ ಬಗ್ಗೆ ಸರಕಾರ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ತೆಲಂಗಾಣದಲ್ಲಿ ಈವರೆಗೆ ಕೊರೋನಾ ವೈರಸ್‌ಗೆ ಈವರೆಗೆ ಒಂಬತ್ತು ಮಂದಿ ಅಸು ನೀಗಿದ್ದಾರೆ ಎಂದು ಅಧಿಕೃತ ವರದಿಗಳು ಹೇಳಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights