ಸಚಿನ್‌ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ: ಆರ್‌ಜೆಡಿ ನಾಯಕ ಶಿವಾನಂದ್‌ ತಿವಾರಿ

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟ ಜಾಗತಿಕ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಈ ನಡುವೆ ಸರ್ಕಾರವನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ಸಂದರ್ಭದಲ್ಲಿ ಸಚಿನ್‌ ಭಾರತ ರತ್ನ ಪ್ರಶಸ್ತಿಗೆ ಅರ್ಹರಲ್ಲ ಎಂದು ಬಿಹಾರದ ಆರ್‌ಜೆಡಿ ಪಕ್ಷದ ಉಪಾಧ್ಯಕ್ಷ ಶಿವಾನಂದ್‌ ತಿವಾರಿ ಹೇಳಿದ್ದಾರೆ.

ತೆಂಡೂಲ್ಕರ್ ಪ್ರತಿಷ್ಠಿತ ಭಾರತ ರತ್ನ ಗೌರವಕ್ಕೆ ಅರ್ಹರಲ್ಲ . ಅವರ ಬದಲಾಗಿ ಹಾಕಿ ಕ್ರಿಡಾಪಟು ಧ್ಯಾನ್ ಚಂದ್ ಅವರಿಗೆ ಭಾರತ ರತ್ನವನ್ನು ಕೊಡಬೇಕಿತ್ತು ಎಂದು ತಿವಾರಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ರೈತರು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಟ್ವಿಟ್ಟರ್ ನಲ್ಲಿ ಏನು ಬರೆಯಲಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ತಿಳಿದಿಲ್ಲ. ಇಬ್ಬರು ವಿದೇಶಿಯರು ರೈತರ ಪ್ರತಿಭಟನೆಯನ್ನು ಬೆಂಬಲಿಸಿದಾಗ, ಸಚಿನ್ ಅದರ ವಿರುದ್ಧ ಮಾತಾಡಿದರು. ಸಚಿನ್ ಹಲವಾರು ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಭಾರತ್ ರತ್ನ ಪಡೆಯಲು ಅರ್ಹರಲ್ಲ. ಧ್ಯಾನ್‌ ಚಂದ್‌ ರಂತಹ ಅನೇಕ ಅರ್ಹರು ಅದನ್ನು ಪಡೆಯಬೇಕಾಗಿತ್ತು “ಎಂದು ತಿವಾರಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಪಾಪ್‌ ಸಿಂಗರ್‌ ರಿಹಾನಾ ಅವರು ರೈತ ಹೋರಾಟದ ಬಗ್ಗೆ ನಾವೇಕೆ ಮಾನತಾಡುತ್ತಿಲ್ಲ? ಎಂದು ಟ್ವೀಟ್‌ ಮಾಡಿದ್ದರು. ಇದು ಜಾಗತಿಕ ಮಟ್ಟದಲ್ಲಿ ವೈರಲ್‌ ಅಗಿದ್ದು, ರೈತ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಹೀಗಾಗಿ ಸರ್ಕಾರವನ್ನು ಸಮರ್ಥಿತಿಸಿಕೊಳ್ಳಲು ಭಾರತೀಯ ಹಲವು ಸೆಲೆಬ್ರೆಟಿಗಳು ಮುಂದಾಗಿದ್ದರು. ಅವರಲ್ಲಿ ಸಚಿನ್‌ ಕೂಡ ಒಬ್ಬರು.

ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಮತ್ತು ದೇಶದ ಆಂತರಿಕ ವಿಷಯಗಳಲ್ಲಿ ಭಾಗವಹಿಸದಂತೆ ವಿದೇಶಿ ನಾಗರಿಕರಿಗೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಚಿನ್ ಟ್ವೀಟ್ ಮಾಡಿದ್ದರು.

Read Also: ಅನಿಲ್ ಕುಂಬ್ಳೆಗೆ ನಾಚಿಕೆಯಾಗಬೇಕು ಎಂದ ಕನ್ನಡಿಗರು; ಕುಂಬ್ಳೆ ವಿರುದ್ಧ ಕನ್ನಡಿಗರು ಸಿಡಿದಿದ್ದೇಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights