ಭಕ್ತರಿಗಾಗಿ ತೆರೆದ ಶಬರಿಮಲೆ: ದರ್ಶನಕ್ಕೆ ಹೋಗುವವರಿಗೆ ಹಲವು ಕಟ್ಟುಪಾಡುಗಳು!

ಪ್ರತಿವರ್ಷದ ಸಂಪ್ರದಾಯದ ಮಕರವಿಳಕ್ಕು ಋತುವಿನ ಪೂಜಾ ಕೈಂಕರ್ಯ ಮತ್ತು ದರ್ಶನಕ್ಕೆ ಶಬರಿಮಲೆ ಅಯ್ಯಪ್ಪ ದೇವಾಲಯ ಮುಕ್ತವಾಗಿದೆ. ಸೋಮವಾರದಿಂದ ಮುಂದಿನ 62 ದಿನಗಳ ಕಾಲ ಸ್ವಾಮಿ ಅಯ್ಯಪ್ಪ ದೇಗುಲವು ದರ್ಶನಾರ್ಥಿಗಳಿಗೆ ತೆರೆಯಲಿದೆ.

ಕೊರೊನಾ ಸಂಧರ್ಭ ಕಾರಣ ಪ್ರತಿದಿನ ಕೇವಲ 1000 ಭಕ್ತರಿಗೆ ಮಾತ್ರ ಅಯ್ಯಪ್ಪ ದರ್ಶನಕ್ಕೆ ಅವಕಾಶವಿದ್ದು, ಎಲ್ಲರೂ ಕೋವಿಡ್ ನೆಗೆಡಿವ್ ಪ್ರಮಾಣಪತ್ರ ಕೊಂಡೊಯ್ಯುವುದು ಕಡ್ಡಾಯವಾಗಿದೆ.

ದಿನಂಪ್ರತಿ ಕೇವಲ ಸಾವಿರ ಭಕ್ತರಿಗೆ ಅವಕಾಶವಿದ್ದರೂ ವಾರಾಂತ್ಯದ ಎರಡು ದಿನ ತಲಾ ಎರಡು ಸಾವಿರ ಭಕ್ತರಿಗೆ ಸ್ವಾಮಿ ದರ್ಶನಕ್ಕೆ ಅನುಕೂಲ ಮಾಡಿಕೊಡಲು ದೇವಾಲಯದ ಆಡಳಿತ ಮಂಡಳಿಯು ತೀರ್ಮಾನಿಸಿದೆ.

ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತರು ಶಬರಿಮಲೆಯಲ್ಲಿ ತಂಗಲು ಯಾವುದೇ ಅವಕಾಶ ಇರುವುದಿಲ್ಲ. ಸ್ವಾಮಿಯ ದರ್ಶನ ಮಾಡಿಕೊಂಡು ಎಲ್ಲರೂ ಅಂದೇ ವಾಪಸಾಗಬೇಕು ಎಂದು ಕಟ್ಟಳೆ ಹಾಕಲಾಗಿದೆ.

ಈ ಮಧ್ಯೆ ಪಾಂಬಾ ಮತ್ತು ನೀಳಕ್ಕಲ್‌ನಲ್ಲಿ ಕೋವಿಡ್ ತಪಾಸಣಾ ಶಿಬಿರಗಳನ್ನು ತೆರೆಯಲಾಗಿದ್ದು, ಭಕ್ತರು ಅದರ ಉಪಯೋಗ ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ: ರಾಜ್ಯದಲ್ಲಿ ಆನ್‌ಲೈನ್‌ ಗೇಮ್‌ ನಿಷೇಧಿಸಿ: ಸರ್ಕಾರಕ್ಕೆ ದಿನೇಶ್‌ ಗುಂಡೂರಾವ್ ಒತ್ತಾಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights