ಸ್ವಪಕ್ಷದವರಿಂದಲೇ ರೂಲ್ಸ್ ಬ್ರೇಕ್ : ರಾಜ್ಯ ಸರ್ಕಾರದ ಆದೇಶಕ್ಕಿಲ್ವಾ ಕಿಮ್ಮತ್ತು..?

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ಪೇಟ, ಶಾಲು ನೀಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರದ ಈ ಆದೇಶವನ್ನು ಸ್ವಪಕ್ಷದವರೇ ಬ್ರೇಕ್ ಮಾಡಿದ್ದಾರೆ.

ಆಗಸ್ಟ್ 10ಕ್ಕೆ ಪೊಲೀಸ್ ಅಧಿಕಾರಿಗಳ ಸಭೆಗೆ ಹೋಗಿದ್ದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೂಗುಚ್ಚ ಸ್ವೀಕರಿಸಲು ನಿರಾಕರಿಸಿದ್ದರು. ಇದು ಅನವಶ್ಯಕ ವೆಚ್ಚ. ಸಭೆಗಳಲ್ಲಿ ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಛ, ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಆ ಸಂಪ್ರದಾಯ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ಮುಖ್ಯಮಂತ್ರಿ ತಿಳಿಸುತ್ತಿದ್ದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶವನ್ನು ಜಾರಿಗೊಳಿಸಿದ್ದರು.

ಆದರೆ ಸರ್ಕಾರಿ ಸೌಮ್ಯದಲ್ಲಿ ಕೆಲಸ ಮಾಡುವ ಸಚಿವರೇ ರಾಜ್ಯ ಸರ್ಕಾರದ ಆದೇಶಕ್ಕೆ ಕಿಂಚಿತ್ತು ಕಿಮ್ಮತ್ತಿಲ್ಲದಂತೆ ನಡೆದುಕೊಂಡಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಿಜೆಪಿ ಸಚಿವರು ಈ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಜನಪ್ರತಿನಿಧಿಗಳಿಗೆ ಹೂಗುಚ್ಚ, ಹಾರ, ಪೇಟ, ಶಾಲು ನೀಡಿ ಅದ್ದೂರಿ ಸ್ವಾಗತ ಕೋರಲಾಗಿದೆ.

ಕೇಂದ್ರದಲ್ಲಿ ಸಚಿವರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್ ಮತ್ತು ಎ.ನಾರಾಯಣಸ್ವಾಮಿ ಅವರು ನಾನಾ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಜನಾಶೀರ್ವಾದ ಕೋರಿದರು. ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಿದ ನಾಲ್ವರು ಸಚಿವರರಿಗೆ ಅದ್ದೂರಿ ಸ್ವಾಗತದ ವೇಳೆ ದುಬಾರಿ ವೆಚ್ಚದ ಹಾರಗಳು,  ಪೇಟ, ಹೂಗುಚ್ಚ ಮತ್ತು ಶಾಲು ನೀಡಿ ಸ್ವಾಗತಿಸಲಾಗಿದೆ.

ಕೇಂದ್ರ ಇಂಧನ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರಿಗೆ ಯಾದಗಿರಿಯಲ್ಲಿ ಶಾಲು, ಹೂವಿನ ಹಾರ ಹಾಕಿ ಸನ್ಮಾನಿಸಲಾಗಿದೆ.

Prajavani

ಸಚಿವ ಭಗವಂತ ಖೂಬಾ ಕಲಬುರಗಿಯಲ್ಲಿ ಜನಾಶೀರ್ವಾದ ಯಾತ್ರೆ

bjp-2

ಬೀದರ್ ನಲ್ಲಿ ಶಾಲು, ಪೇಟ, ಹಾರ ಹಾಕಿ ಖೂಬಾ ಅವರಿಗೆ ಸನ್ಮಾನ..

 

ಕರ್ನಾಟಕಹುಬ್ಬಳ್ಳಿ ಜನಾಶೀರ್ವಾದ ಯಾತ್ರೆಗೆ ಆಗಮಿಸಿದ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಅವರು ಇಲ್ಲಿನ ಸಿದ್ಧಾರೂಢ  ಮಠಕ್ಕೆ ಭೇಟಿ ನೀಡಿದ ವೇಳೆ ಹೂವಿನ ಹಾರ ಹಾಕಿ ಸ್ವಾಗತ.

rajeev chandrasekhar

ಕೇಂದ್ರ ಸಚಿವರಾದ ನಾರಾಯಣಸ್ವಾಮಿಗೆ ಚಳ್ಳಿಕೆರೆಯಲ್ಲಿ ದುಬಾರಿ ವೆಚ್ಚದ ಹಾರ ಹಾಕಿ ಸ್ವಾಗತಿಸಲಾಗಿದೆ.

ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವರಿಗೆ ಅದ್ದೂರಿ ಸ್ವಾಗತ ; ಸಿದ್ಧಗಂಗಾ ಮಠಕ್ಕೆ ಸಚಿವ ನಾರಾಯಣಸ್ವಾಮಿ ಭೇಟಿ ; ಸರ್ಕಾರ, ಜನರ ನಡುವಿನ ಕೊಂಡಿಯಾಗಿ ಕೆಲಸ ...

ಕಾಂಗ್ರೆಸ್‌ನಿಂದ ಅಭಿವೃದ್ಧಿ ಕಡೆಗಣನೆ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಆರೋಪ, ನೆಲಮಂಗಲದಲ್ಲಿ ಜನಾಶೀರ್ವಾದ ಯಾತ್ರೆ –

ಜನಾಶೀರ್ವಾದ ಬೇಡಿದ ಕೇಂದ್ರ ಸಚಿವರು: ಉಕದಲ್ಲಿ ರಾಜೀವ್, ಖೂಬಾ; ದಕ್ಷಿಣದಲ್ಲಿ ಶೋಭಾ, ನಾರಾಯಣಸ್ವಾಮಿ –

ಇನ್ನೂ ಕೇಂದ್ರ ಸಚಿವ ಶೋಭಾ ಕರಂದ್ಲಾಜೆಗೂ ಕೂಡ ಕಾರ್ಕಳದಲ್ಲಿ ಶಾಲು ಹೊದಿಸಿ, ಹೂ ಗುಚ್ಚ ನೀಡಿ ಸ್ವಾಗತಿಸಿ ಸನ್ಮಾನಿಸಲಾಗಿದೆ.

ಜನಾಶೀರ್ವಾದ ಯಾತ್ರೆ : ಸಚಿವೆ ಶೋಭಾ ಕರಂದ್ಲಾಜೆಗೆ ಹೆಬ್ರಿಯಲ್ಲಿ ಅದ್ದೂರಿ ಸ್ವಾಗತ - Mangalorean.com

ಜನಾಶೀರ್ವಾದ ಯಾತ್ರೆ : ಸಚಿವೆ ಶೋಭಾ ಕರಂದ್ಲಾಜೆಗೆ ಹೆಬ್ರಿಯಲ್ಲಿ ಅದ್ದೂರಿ ಸ್ವಾಗತ - Mangalorean.com

ಹೀಗೆ ಕೇಂದ್ರ ಸಚಿವರು ಆಗಮಿಸಿದ ವೇಳೆ ರಾಜ್ಯ ಸಚಿವರು, ಶಾಸಕರು, ಕಾರ್ಯಕರ್ತರು ಹೂವಿನ ಹಾರ ಹಾಕಿ, ಶಾಲು ಹೊದಿಸಿ, ಪೇಟ ಹಾಕಿ, ಹೂಗುಚ್ಚ ನೀಡಿ ಅದ್ದೂರಿ ಸ್ವಾಗತ ಕೋರಿದ್ದಾರೆ. ಈ ಮೂಲಕ ಸ್ವಪಕ್ಷಿಯರೇ ರಾಜ್ಯ ಸರ್ಕಾರದ ಆದೇಶಕ್ಕೆ ಗೌರವ ಕೊಡದೆ ನಡೆದುಕೊಂಡಿದ್ದಾರೆ.

ಕೊರೊನಾ 3ನೇ ಅಲೆಯ ಸಂದರ್ಭದಲ್ಲಿ ಜನನಾಯಕರನ್ನು ಅದ್ದೂರಿ ಸ್ವಾಗತ ಮಾಡಿ ಇಂಥಹ ದುಬಾರಿ ವೆಚ್ಚ ಮಾಡುವ ಬದಲಿಗೆ ಜನರ ಸಂಕಷ್ಟಕ್ಕೆ ನೆರವಾಗಿದ್ದರೆ ಜನ ಸಾಯೋವರೆಗೂ ಜನನಾಯಕರನ್ನ ನೆನೆಸಿಕೊಳ್ಳುತ್ತಿದ್ರೆನೋ.. ಆದರೆ ಜನಪ್ರತಿನಿಧಿಗಳು ಪ್ರಚಾರಕ್ಕಾಗಿ ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೀಯ.

 

Published by: Sunita Bhandari

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights