RTI: ಮಾಹಿತಿಯನ್ನಷ್ಟೇ ಅಲ್ಲದೆ, ದಲಿತರಿಗೆ ನೀರಿನ ಮೂಲವನ್ನು ಒದಗಿಸಿದೆ!

ಮಧ್ಯಪ್ರದೇಶ ರಾಜ್ಯದ ರೇವಾ ಜಿಲ್ಲೆಯ ಹಳ್ಳಿಯೊಂದರಲ್ಲಿ 20 ವರ್ಷಗಳಿಂದ ದಲಿತರು ವಾಸಿಸುತ್ತಿದ್ದಾರೆ. ಅಲ್ಲಿಯ ಮೇಲ್ಜಾತಿಯವರ ಜಾತಿ ನಿಂದನೆ, ದೌರ್ಜನ್ಯ, ಅಪಹಾಸ್ಯಗಳನ್ನು ಅವರು ಅಂದಿನಿಂದಲೂ ಎದುರಿಸುತ್ತಿದ್ದಾರೆ. ಅಲ್ಲದೆ, ಜಾತಿವಾದಿಗಳು ಅವರಿಗೆ ಬೋರ್‌ವೆಲ್‌ನಲ್ಲಿ ನೀರು ಕೊಡುವುದನ್ನೂ ನಿಲ್ಲಿಸಿದ್ದರು. ಆದರೆ, ಈಗ ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಇಂದಾಗಿ ಅವರು ಬೊರ್‌ವೆಲ್‌ಅನ್ನು ಬಳಸುತ್ತಿದ್ದಾರೆ ಹಾಗೂ ನೀರಿನ ಮೂಲ ನಮ್ಮದು ಎಂದು ಅವರು ಕರೆಯಬಹುದಾಗಿದೆ.

ರೇವಾ ಜಿಲ್ಲೆಯ ಗಾಂಜಿಯೊ ಬ್ಲಾಕ್‌ನ ನೆವಾರಿಯಾ ವಾಸ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಅವರು ಮೇಲ್ಜಾತಿಯವರ ನಿಯಂತ್ರಣದಲ್ಲಿರುವ ಹ್ಯಾಂಡ್‌ಪಂಪ್‌ ಮತ್ತು ಬೋರ್‌ವೆಲ್‌ಗಳಿಂದ ನೀರುನ್ನು ತರಲು ನೂರಾರು ಹೆಣ್ಣುಮಕ್ಕಳು-ಮಹಿಳೆಯರು ಕಿ.ಮೀ,ಗೂ ಹೆಚ್ಚು ದೂರ ನಡೆದುಕೊಂಡೇ ಹೋಗಬೇಕಾಗಿತ್ತು. ಅಲ್ಲದೆ, ಎರಡು ಬಿಂದಿಗಳನ್ನು ಹೊತ್ತು ತರಬೇಕಾಗಿತ್ತು.

ಅವರು ನೀರು ತರಲು ಹೊಲಗಳ ಮೂಲಕ ಹಾದುಹೋಗಬೇಕಾಗಿತ್ತು. ಅದೊಂದೇ ಅವರಿಗಿದ್ದ ಏಕೈಕ ಮಾರ್ಗ. ಆದರೆ, “ಅವುಗಳನ್ನು ಉಳುಮೆ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದರಿಂದಾಗಿ ಹೊಲಗಳ ಮಾಲೀಕರು ನೀವು ಆರು ತಿಂಗಳು ಹೊಲಗಳ ಹಾದಿಯಲ್ಲಿ ಹೋಗುವಂತಿಲ್ಲ” ಎಂದಿದ್ದರು. ಅದರಿಂದಾಗಿ ಮಹಿಳೆಯರಿಗೆ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವುದು ಅಸಾಧ್ಯವಾಗಿತ್ತು.

Examining women's and children's time in collecting water in a ...

“ಓಹ್, ನೀವು ಮತ್ತೆ ಬಂದಿದ್ದೀರಿ! ನೀವು ಕೆಳಜಾತಿಯ ಜನರು ಪದೇಪದೇ ನಮ್ಮ ಹತ್ತಿರ ಬರಬಾರದು ”ಎಂದು ಬೋರ್‌ವೆಲ್‌ಗಳ ಮಾಲೀಕರು ಯಾವಾಗಲೂ ಬೈಯ್ಯುವರು. ಆ ಮಾಲೀಕರಿಂದ ನೀರು ಪಡೆಯಲು ಮಹಿಳೆಯರು ಮಡಿಕೆಗಳನ್ನು ಹಾಗೂ ಬಕೆಟ್‌ಗಳನ್ನೂ ಹಿಡಿದು ದಿನಕ್ಕೆ ಮೂರು-ನಾಲ್ಕು ಬಾರಿ ಹೋಗಿ ಗೋಗರೆಬೇಕಾಗಿತ್ತು. ಇದರಿಂದಾಗಿ ದಲಿತ ಜನರು 2017 ರಿಂದ ತಮ್ಮ ವಸತಿ ಪ್ರದೇಶದಲ್ಲಿ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

“ನಾವು ಸ್ಥಳೀಯ ಶಾಸಕರನ್ನು ಸಹ ಸಂಪರ್ಕಿಸಿದ್ದೇವೆ. ಆ ಶಾಸಕರನ್ನು ಜನರು ಬಡವರ ಬಂಧು ಎಂದು ಹೇಳುತ್ತಾರೆ. ಆದರೆ, ಅವರು ನಿಜವಾಗಿಯೂ ನಮ್ಮಿಂದ ಮತಗಳನ್ನು ಮಾತ್ರ ಪಡೆಯುವ ಬಂಧು. ಅವರಿಂದ ಯಾವ ಉಪಯೋಗವೂ ನಮಗಿಲ್ಲ. ಆದರೆ, ಶಿವಾನಂದ್ ಅವರು ನಮ್ಮ ನಿಜವಾದ ಬಂಧು, ಅವರು ವಾಟ್ಸಾಪ್ ಮೂಲಕ ಕೆಲವು ಅಧಿಕಾರಿಗಳಿಗೆ ಹಲವು ಪತ್ರಗಳನ್ನು ಬರೆದು ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಿದ್ದಾರೆ”  ಎಂದು ಹನ್ನೆರಡನೇ ತರಗತಿಯ ವಿದ್ಯಾರ್ಥಿ ಸಾಕೆತ್ ಹೇಳಿದರು.

ಆ ಪತ್ರಗಳು ಮಾಹಿತಿ ಹಕ್ಕಿನದ್ದಾಗಿದ್ದವು.  ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಶಿವಾನಂದ್‌ ದ್ವಿವೇದಿ ಎಂಬ ಸಾಮಾಜಿಕ ಕಾರ್ಯಕರ್ತ, ಜಿಲ್ಲಾ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್‌ ವಿಭಾಗಕ್ಕೆ ವಸತಿ ಪ್ರದೇಶದಲ್ಲಿ ಬೋರ್‌ವೆಲ್‌ ಅಳವಡಿಸಲು ಕೈಗೊಂಡ ಕ್ರಮಗಳ ಬಗ್ಗೆ ಆರ್‌ಟಿಐ ಸಲ್ಲಿಸಿದ್ದರು.

ಜನರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರಿಂದ ಆರ್‌ಟಿಐ ಕಾಯ್ದೆ 2005ರ ಸೆಕ್ಷನ್‌ 7(1)ರ ಅಡಿಯಲ್ಲಿ ಅಧಿಕಾರಿಗಳು 48 ಗಂಟೆಗಳ ಒಳಗೆ ಮಾಹಿತಿ ಒದಗಿಸಬೇಕಾಗಿತ್ತು. ಆದರೆ, ಅವರು ಪ್ರತಿಕ್ರಿಯಿಸಲಿಲ್ಲ ಎಂದು ದ್ವಿವೇದಿ ವಾದಿಸಿದ್ದಾರೆ.

Water reserves deplete further across India » Sirf News

ಇಲಾಖೆ ಪ್ರತಿಕ್ರಿಯಿಸದಿದ್ದಾಗ, ಮೊದಲು ಅವರು ಮೊದಲ ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಿದರು, ನಂತರ ಮಾಹಿತಿ ಆಯುಕ್ತ ರಾಹುಲ್ ಸಿಂಗ್ ಅವರನ್ನು ಜೂನ್ 2 ರಂದು ಸಂಪರ್ಕಿಸಿ ಅವರಿಂದ ಲಿಖಿತ ಉತ್ತರವನ್ನು ಕೇಳಿದರು. ಎರಡು ದಿನಗಳ ನಂತರ ಜೂನ್‌ 5 ರಂದು ವಾಟ್ಸಾಪ್ ವಿಡಿಯೋ ಕರೆ ಮೂಲಕ ವಿಚಾರಣೆಗೆ ಬರಬೇಕು ಎಂದು ಕರೆದಿದ್ದರು.

ಜೂನ್ 4 ರಂದು, ಅಂದರೆ ವಿಚಾರಣೆಯ ಹಿಂದಿನ ರಾತ್ರಿ, ಅಧಿಕಾರಿಗಳು ಬೋರ್‌ವೆಲ್‌ ಕೊರೊಯುವ ಉಪಕರಣಗಳು ಮತ್ತು ಕೊಳವೆಗಳೊಂದಿಗೆ ವಸತಿ ಪ್ರದೇಶ ತಲುಪಿದರು. ಮಧ್ಯರಾತ್ರಿಯ ಹೊತ್ತಿಗೆ, ಅವರು ಬೋರ್‌ವೆಲ್ ತೋಡಿದರು.

“48 ಗಂಟೆಗಳಲ್ಲಿ ಮಾಹಿತಿ ನೀಡದ ಕಾರಣ ಅಧಿಕಾರಿಗಳಿಗೆ ದಂಡ ವಿಧಿಸಲಾಗಿಲ್ಲ. ಲಾಕ್ಡೌನ್ ಕಾರಣದಿಂದಾಗಿ ಸಿಬ್ಬಂದಿ ಬಿಕ್ಕಟ್ಟು ಮತ್ತು ಸೀಮಿತ ಸಂಪನ್ಮೂಲಗಳು ಪ್ರತಿಕ್ರಿಯೆಯು ವಿಳಂಬಕ್ಕೆ ಕಾರಣವಾಗಬಹುದು ಎಂದು ಅವರು ನನಗೆ ಹೇಳಿದರು. ಆದ್ದರಿಂದ, ನಾನು ಅವರಿಗೆ ದಂಡದಿಂದ ವಿನಾಯಿತಿ ನೀಡಿದ್ದೇನೆ” ಎಂದು ದ್ವಿವೇದಿ ಹೇಳಿದರು.

ಆರ್‌ಟಿಐ ಕಾಯ್ದೆಗೆ ಸಂಬಂಧಿಸಿದಂತೆ ಇದು ಒಂದು ವಿಶಿಷ್ಟ ಉದಾಹರಣೆಯಾಗಿದೆ. “ಮಾಹಿತಿ ಮತ್ತು ಕುಂದುಕೊರತೆ ಪರಿಹಾರ ಎರಡನ್ನೂ ಸಾಧಿಸಲಾಗಿದೆ” ಎಂದು ಅವರು ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights