ಹಿಮದಿಂದಾಗಿ ರಸ್ತೆ ಬಂದ್ : ಸೈನ್ಯ ವಾಹನದಲ್ಲಿ ಮಹಿಳೆಗೆ ಹೆರಿಗೆ..!

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಹಿಳೆಯೊಬ್ಬರು ಆಸ್ಪತ್ರೆಗೆ ಹೋಗುವಾಗ ಭಾರಿ ಹಿಮದಿಂದಾಗಿ ರಸ್ತೆ ಬಂದ್ ಆದ ಪರಿಣಾಮ ಸೇನೆಯ ಆಂಬ್ಯುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

ಸೋಮವಾರ ಮುಂಜಾನೆ ಹಿಮಪಾತದ ಕಾರಣ ಕುಪ್ವಾರಾ ಜಿಲ್ಲೆಯಿಂದ ಹೊರಟಿದ್ದ ಆಂಬುಲೆನ್ಸ್ ನರಿಕೂಟ್ ರಸ್ತೆ ಮಧ್ಯೆ ಹಿಮದಿಂದಾಗಿ ಮುಂದೆ ಸಾಗಲಾಗಲಿಲ್ಲ. ಈ ವೇಳೆ ಕಲಾರೂಸ್ ಕಂಪನಿ ಕಮಾಂಡರ್ ಆಶಾ ಅವರು ನೋವಿನಿಂದ ಬಳಲುತ್ತಿರುವ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೈನಿಕರಿಗೆ ಕೋರಿದ್ದಾರೆ. ಕೂಡಲೇ ಸೈನ್ಯದ ವಾಹನವನ್ನು ವೈದ್ಯಕೀಯ ತಂಡದೊಂದಿಗೆ ನರಿಕೂಟ್‌ಗೆ ಕಳುಹಿಸಿ ರೋಗಿಯನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು.

ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಗರ್ಭಿಣಿಯ ಸ್ಥಿತಿ ಗಂಭೀರವಾಗಿದೆ. ಸೈನಾ ವಾಹನವನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಆರ್ಮಿ ಮೆಡಿಕಲ್ ತಂಡದ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ.

ಜಿಪ್ಸಿ ಒಳಗಿನಿಂದ ಮಗುವಿನ ಕೂಗು ಕೇಳಿದಾಗ ಹೆರಿಗೆಯಲ್ಲಿ ಭಾಗಿಯಾದ ಎಲ್ಲರಿಗೂ ಸಂತೋಷ ತಂದಿದೆ. ನಂತರ ಮಹಿಳೆ ಮತ್ತು ನವಜಾತ ಶಿಶುವನ್ನು ಕಲರೂಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ಕಂಪೆನಿ ಕಮಾಂಡರ್ ಕುಟುಂಬವನ್ನು ಉಡುಗೊರೆಗಳೊಂದಿಗೆ ಅಭಿನಂದಿಸಿ, ಧೈರ್ಯಶಾಲಿ ಆಶಾ ವರ್ಕರ್ ಅವರನ್ನು ಆರ್ಮಿ ಮೆಡಿಕ್ಸ್ನಲ್ಲಿ ವಿಶ್ವಾಸ ಮತ್ತು ಇಂತಹ ಸಂಧಿಗ್ದ ಸಂದರ್ಭಗಳಲ್ಲಿ ಅವರ ನಿರ್ಣಾಯಕತೆಗಾಗಿ ಗೌರವಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights